ದುನಿಯಾ ವಿಜಿ ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್​! ಸಲಗ ರಿಲೀಸ್​ಗೆ ಏನಿದು ವಿಘ್ನ?

ಈಗಾಗಲೇ ಚಿತ್ರರಂಗ ಸಂಕಷ್ಟದಲ್ಲಿದೆ. ಸರ್ಕಾರ ನಮಗೆ ಅವಕಾಶ ನೀಡಬೇಕು. ಸಾಕಷ್ಟು ಚಿತ್ರ ರೀಲೀಸ್​ಗೆ ಕಾಯುತ್ತಿವೆ. ಹೀಗಾಗಿ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ದುನಿಯಾ ವಿಜಯ್ ಆಗ್ರಹಿಸಿದ್ದಾರೆ.

ದುನಿಯಾ ವಿಜಿ ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್​! ಸಲಗ ರಿಲೀಸ್​ಗೆ ಏನಿದು ವಿಘ್ನ?
ದುನಿಯಾ ವಿಜಯ್​
Follow us
ರಾಜೇಶ್ ದುಗ್ಗುಮನೆ
|

Updated on: Apr 04, 2021 | 5:40 PM

ಸಲಗ ಸಿನಿಮಾ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಷ್ಟು ದಿನ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್​ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ. ಈ ಚಿತ್ರ ಏಪ್ರಿಲ್​ 15ಕ್ಕೆ ತೆರೆಕಾಣಬೇಕಿತ್ತು. ಆದರೆ, ಈಗ ಸಿನಿಮಾ ರಿಲೀಸ್​ ದಿನಾಂಕ ಮೂಂದೂಡುವ ಸೂಚನೆ ಸಿಕ್ಕಿದೆ. ಖುದ್ದು ದುನಿಯಾ ವಿಜಯ್ ಈ ವಿಚಾರ ಹೇಳಿಕೊಂಡಿದ್ದಾರೆ. ಕೊರೊನಾ ವೈರಸ್​ ಹೆಚ್ಚುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಲು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಉಡುಪಿ, ಕಲಬುರಗಿ, ದಕ್ಷಿಣ ಕನ್ನಡ, ಬೀದರ್, ಧಾರವಾಡ ಜಿಲ್ಲೆಗಳಿಗೆ ಸಿನಿಮಾ ಹಾಲ್​ಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಏಪ್ರಿಲ್​ 7ರಿಂದ ನಿಯಮ ಜಾರಿಗೆ ಬರಲಿದೆ. ಇದರಿಂದ ಮುಂದೆ ತೆರೆಗೆ ಬರಲಿರುವ ಸಿನಿಮಾಗಳ ರಿಲೀಸ್​ ದಿನಾಂಕ ಮುಂದೂಡುವ ಸೂಚನೆ ಸಿಕ್ಕಿದೆ. ಇದಕ್ಕೆ ದುನಿಯಾ ವಿಜಯ್ ಸಿನಿಮಾ​ ಕೂಡ ಹೊರತಾಗಿಲ್ಲ.

ಹುಬ್ಬಳ್ಳಿಯಲ್ಲಿ ಸಿನಿಮಾ ಪ್ರಚಾರಕ್ಕೆಂದು ತೆರಳಿದ್ದ ವೇಳೆ ಮಾತನಾಡಿರುವ ದುನಿಯಾ ವಿಜಯ್​, ನಾವು ಸಲಗ ಚಿತ್ರವನ್ನು ಈ ಭಾಗದಲ್ಲೇ ಶೂಟ್​ ಮಾಡಿದ್ದೇವೆ. ಹೀಗಾಗಿ ಇಂದು ಪ್ರಮೋಷನ್​ಗಾಗಿ  ಇಲ್ಲಿಗೆ ಬಂದಿದ್ದೇವೆ. ಈಗಾಗಲೇ ಚಿತ್ರರಂಗ ಸಂಕಷ್ಟದಲ್ಲಿದೆ. ಸರ್ಕಾರ ನಮಗೆ ಅವಕಾಶ ನೀಡಬೇಕು. ಸಾಕಷ್ಟು ಚಿತ್ರ ರೀಲೀಸ್​ಗೆ ಕಾಯುತ್ತಿವೆ. ಹೀಗಾಗಿ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ಆಗ್ರಹಿಸಿದರು.

ಸಲಗ ರಿಲೀಸ್​ ಬಗ್ಗೆ ಮಾತನಾಡಿದ ಅವರು, ಚಿತ್ರಮಂದಿರ ಹೌಸ್​ ಫುಲ್​ ಮಾಡೋಕೆ ಅವಕಾಶ ಸಿಕ್ಕರೆ ಮಾತ್ರ ನಾವು ಸಿನಿಮಾ ರಿಲೀಸ್ ಮಾಡುತ್ತೇವೆ. ಸರ್ಕಾರದ ನಿರ್ಧಾರದಿಂದ ಯುವರತ್ನ ಚಿತ್ರಕ್ಕೆ ಸ್ವಲ್ಪ ಹಿನ್ನಡೆ ಆಗಿದೆ. ಸದ್ಯ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಎಂಬುದು ಖುಷಿಯ ವಿಚಾರ ಎಂದರು.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರೋ ಈ ಸಿನಿಮಾದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಪ್ರಮುಖ‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿರುವ ಸಲಗ ಚಿತ್ರ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: ಫೇಮಸ್​ ಆಯ್ತು ಸಲಗ ಟ್ಯಾಟೂ..! ಅಭಿಮಾನಿಯ ಅಭಿಮಾನ ನೋಡಿ ಭಾವುಕರಾದ ನಟ ದುನಿಯಾ ವಿಜಯ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ