AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಕೆಲಸಕ್ಕೆ ಬ್ರೇಕ್​ ನೀಡಿ ಮಂತ್ರಾಲಯದ ರಾಯರ ದರ್ಶನ ಪಡೆದ ಪುನೀತ್​-ಜಗ್ಗೇಶ್​

ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ್​, ಸಂತೋಷ್​​ ಆನಂದರಾಮ್​, ಕಾರ್ತಿಕ್ ಜೊತೆ ಹೊರಟಿದ್ದೇನೆ. ಶುಭದಿನ ಶುಭೋದಯ ಎಂದು ಕಾರಿನಲ್ಲಿ ಪ್ರಯಾಣಿಸುತ್ತಿರುವ ಫೋಟೋ ಹಂಚಿಕೊಂಡಿದ್ದರು.

ಸಿನಿಮಾ ಕೆಲಸಕ್ಕೆ ಬ್ರೇಕ್​ ನೀಡಿ ಮಂತ್ರಾಲಯದ ರಾಯರ ದರ್ಶನ ಪಡೆದ ಪುನೀತ್​-ಜಗ್ಗೇಶ್​
ರಾಯರ ದರ್ಶನ್​ ಪಡೆದ ಜಗ್ಗೇಶ್​-ಪುನೀತ್​
Follow us
ರಾಜೇಶ್ ದುಗ್ಗುಮನೆ
|

Updated on:Apr 05, 2021 | 7:48 PM

ಚಿತ್ರಮಂದಿರಗಳಿಗೆ ಹೇರಿದ್ದ ನಿರ್ಬಂಧ ತೆರವಿಗೆ ಪುನೀತ್​ ರಾಜ್​ಕುಮಾರ್​ ತುಂಬಾನೇ ಹೋರಾಡಿದ್ದರು. ಪುನೀತ್​ ಹಾಗೂ ಚಿತ್ರರಂಗದ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಿತ್ತು. ಇದಾದ ನಂತರ ರಿಲೀಫ್​ ಆಗಿದ್ದ ಪುನೀತ್​ ರಾಜ್​ಕುಮಾರ್​ ಮಂತ್ರಾಲಯಕ್ಕೆ ತೆರಳಿ ಗುರು ರಾಘವೇಂದ್ರ ರಾಯರ ದರ್ಶನ ಪಡೆದಿದ್ದಾರೆ. ಇವರಿಗೆ ನಟ ಜಗ್ಗೇಶ್​, ನಿರ್ದೇಶಕ ಸಂತೋಷ್​ ಆನಂದ್​ ರಾಮ್​, ಹೊಂಬಾಳೆ ಫಿಲ್ಮ್ಸ್​ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಸಾತ್​ ನೀಡಿದ್ದಾರೆ. ಇಂದು (ಏಪ್ರಿಲ್​ 05) ಮುಂಜಾನೆಯೇ ಮಂತ್ರಾಲಯಕ್ಕೆ ತೆರಳುತ್ತಿರುವ ಬಗ್ಗೆ ನಟ ಜಗ್ಗೇಶ್​ ಟ್ವೀಟ್​ ಮಾಡಿದ್ದರು. ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ್​, ಸಂತೋಷ್​​ ಆನಂದರಾಮ್​, ಕಾರ್ತಿಕ್ ಜೊತೆ ಹೊರಟಿದ್ದೇನೆ. ಶುಭದಿನ ಶುಭೋದಯ ಎಂದು ಕಾರಿನಲ್ಲಿ ಪ್ರಯಾಣಿಸುತ್ತಿರುವ ಫೋಟೋ ಹಂಚಿಕೊಂಡಿದ್ದರು.

ಮಧ್ಯಾಹ್ನದ ವೇಳೆಗೆ ರಾಯರ ದರ್ಶನಪಡೆಯುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಪುನೀತ್​ ರಾಜ್​ಕುಮಾರ್​ ನಟನೆಯ ಯುವರತ್ನ ಸಿನಿಮಾ ಗುರುವಾರಷ್ಟೇ (ಏಪ್ರಿಲ್​ 1) ತೆರೆಗೆ ಬಂದಿತ್ತು. ಹೀಗಿರುವಾಗಲೇ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹೊಸ ನಿಯಮ ಜಾರಿಗೆ ತಂದಿತ್ತು. ಚಿತ್ರಮಂದಿರದಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡುವ ಆದೇಶ ಹೊರಡಿಸಿತ್ತು. ಇದಕ್ಕೆ ಪುನೀತ್​ ರಾಜ್​ಕುಮಾರ್​ ಅಸಮಾಧಾನ ಹೊರ ಹಾಕಿದ್ದರು. ಜತೆಗೆ ಹೌಸ್​ಫುಲ್​ಗೆ ಅವಕಾಶ ಕೋರಿದ್ದರು. ಸರ್ಕಾರ ಈ ಒತ್ತಾಯಕ್ಕೆ ಮಣಿದು, ಏಪ್ರಿಲ್​ 6ರವರೆಗೆ ಚಿತ್ರಮಂದಿರ ಹೌಸ್​ಫುಲ್​ಗೆ ಅವಕಾಶ ನೀಡಿದೆ.

ಜಗ್ಗೇಶ್​ ತೋತಾಪುರಿ ಹಾಗೂ ರಂಗನಾಯಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಪುನೀತ್​ ರಾಜ್​ಕುಮಾರ್​ ಶೀಘ್ರವೇ ಜೇಮ್ಸ್​ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಟೈಗರ್​ ಪ್ರಭಾಕರ್​ ಜನ್ಮದಿನ: ಅಣ್ಣನಂತೆ ಭುಜಕೊಟ್ಟರು; ಅಮ್ಮ ತೀರಿಕೊಂಡಾಗ ಸಂತೈಸಿದರು! ಜಗ್ಗೇಶ್​ಗೆ ಪ್ರಭಣ್ಣನ ನೆನಪು

Yuvarathnaa: ಮೃತ ಮಗನ ಫೋಟೋ ಜೊತೆ ಯುವರತ್ನ ನೋಡಿದ ಪಾಲಕರು; ಪುನೀತ್​ ಭಾವುಕ!

Published On - 7:46 pm, Mon, 5 April 21

ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ