ಅಂತೂ ದೊಡ್ಡ ನಿರ್ಧಾರ ತೆಗೆದುಕೊಂಡ ರವಿಚಂದ್ರನ್​!​ ಇನ್ಮುಂದೆ ನಕಲಿಗಳ ಆಟ ನಡೆಯೋದಿಲ್ಲ

ರವಿಚಂದ್ರನ್​ ಇನ್ನೂ ಸೋಶಿಯಲ್​ ಮೀಡಿಯಾಗೆ ಕಾಲಿಟ್ಟಿಲ್ಲವಲ್ಲ ಎಂದು ಅವರ ಫ್ಯಾನ್ಸ್​ ಸ್ವಲ್ಪ ಬೇಸರ ಮಾಡಿಕೊಂಡಿದ್ದರು. ಶೀಘ್ರದಲ್ಲೇ ಆ ಬೇಸರವನ್ನು ಕ್ರೇಜಿ ಸ್ಟಾರ್​ ದೂರ ಮಾಡಲಿದ್ದಾರೆ.

  • TV9 Web Team
  • Published On - 10:54 AM, 6 Apr 2021
ಅಂತೂ ದೊಡ್ಡ ನಿರ್ಧಾರ ತೆಗೆದುಕೊಂಡ ರವಿಚಂದ್ರನ್​!​ ಇನ್ಮುಂದೆ ನಕಲಿಗಳ ಆಟ ನಡೆಯೋದಿಲ್ಲ
ರವಿಚಂದ್ರನ್​

ಕನ್ನಡ ಚಿತ್ರರಂಗದ ಹಿರಿಯ ನಟರಲ್ಲಿ ಒಬ್ಬರಾದ ರವಿಚಂದ್ರನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸ್ಯಾಂಡಲ್​ವುಡ್​ನಲ್ಲಿ ಅನೇಕ ಹೊಸ ಟ್ರೆಂಡ್​ಗಳನ್ನು ಸೆಟ್​ ಮಾಡಿದ ರಣಧೀರ ಅವರು. ಆದರೆ ಒಂದು ವಿಚಾರದಲ್ಲಿ ಮಾತ್ರ ಕ್ರೇಜಿ ಸ್ಟಾರ್​ ಇಷ್ಟು ದಿನ ಹಿಂದುಳಿದುಕೊಂಡಿದ್ದರು. ಹೌದು, ಸೋಶಿಯಲ್​ ಮೀಡಿಯಾ ಕಡೆಗೆ ರವಿಚಂದ್ರನ್​ ತಲೆ ಹಾಕಿರಲಿಲ್ಲ. ಆದರೆ ಈಗ ಒಂದು ಮಹತ್ವದ ನಿರ್ಧಾರ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅದಕ್ಕಾಗಿ ದಿನಾಂಕ ಕೂಡ ಫಿಕ್ಸ್​ ಆಗಿದೆ. ಚಿಕ್ಕ ಟೀಸರ್​ ಮೂಲಕ ರವಿಚಂದ್ರನ್​ ನಿರೀಕ್ಷೆ ಮೂಡಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾ ಖಾತೆಗಳನ್ನು ಬಳಸುತ್ತಾರೆ. ಆದರೆ ರವಿಚಂದ್ರನ್​ ಇದರಿಂದ ದೂರ ಉಳಿದುಕೊಂಡಿದ್ದರು. ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ಟ್ವಿಟರ್​, ಯೂಟ್ಯೂಬ್​ ಮುಂತಾದ ಕಡೆಗಳಲ್ಲಿ ರವಿಚಂದ್ರನ್​ ಖಾತೆ ಹೊಂದಿರಲಿಲ್ಲ. ಆದರೆ ಈಗ ಅವರು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ಟ್ವಿಟರ್​ ಮತ್ತು ಯೂಟ್ಯೂಬ್​ ಅವರು ಏಕಕಾಲಕ್ಕೆ ಅಧಿಕೃತ ಖಾತೆಗಳನ್ನು ಹೊಂದಲಿದ್ದಾರೆ.

ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಹಿರಿಯ ಸ್ಟಾರ್ ಕಲಾವಿದರು ಸೋಶಿಯಲ್​ ಮೀಡಿಯಾ ಬಳಸುತ್ತಿದ್ದಾರೆ. ಶಿವರಾಜ್​ಕುಮಾರ್​, ರಮೇಶ್​ ಅರವಿಂದ್​, ಜಗ್ಗೇಶ್​, ಸುಧಾರಾಣಿ ಮುಂತಾದವರು ಈ ವಿಚಾರದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಹಾಗಿದ್ದರೂ ರವಿಚಂದ್ರನ್​ ಅವರು ಇನ್ನೂ ಸೋಶಿಯಲ್​ ಮೀಡಿಯಾಗೆ ಕಾಲಿಟ್ಟಿಲ್ಲವಲ್ಲ ಎಂದು ಅವರ ಫ್ಯಾನ್ಸ್​ ಸ್ವಲ್ಪ ಬೇಸರ ಮಾಡಿಕೊಂಡಿದ್ದರು. ಶೀಘ್ರದಲ್ಲೇ ಆ ಬೇಸರವನ್ನು ಕ್ರೇಜಿ ಸ್ಟಾರ್​ ದೂರ ಮಾಡಲಿದ್ದಾರೆ. ಏ.13ರಂದು ಯುಗಾದಿ ಹಬ್ಬದ ಪ್ರಯುಕ್ತ ಅವರು ಸೋಶಿಯಲ್​ ಮೀಡಿಯಾ ಖಾತೆಗಳನ್ನು ತೆರೆಯಲಿದ್ದಾರೆ.

ರವಿಚಂದ್ರನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಇಲ್ಲದಿದ್ದರೂ ಕೂಡ ಅವರ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳು ಹುಟ್ಟಿಕೊಂಡಿದ್ದವು. ಅವುಗಳನ್ನು ಸಾವಿರಾರು ಜನರು ಫಾಲೋ ಮಾಡುತ್ತಿದ್ದರು. ಹಾಗಾಗಿ ಕೆಲವೊಮ್ಮೆ ನೆಟ್ಟಿಗರಿಗೆ ಈ ವಿಚಾರದಲ್ಲಿ ಗೊಂದಲ ಆಗುತ್ತಿತ್ತು. ಸ್ವಲ್ಪ ಯಾಮಾರಿದರೆ ರವಿಚಂದ್ರನ್​ ಅಭಿಮಾನಿಗಳು ಕೂಡ ಈ ನಕಲಿ ಖಾತೆಗಳನ್ನು ನಂಬುವ ಪರಿಸ್ಥಿತಿ ಬರುತ್ತಿತ್ತು. ಆದರೆ ಈಗ ಸ್ವತಃ ರವಿಚಂದ್ರನ್​ ಅವರು ಅಧಿಕೃತ ಖಾತೆಗಳನ್ನು ಶುರು ಮಾಡುತ್ತಿರುವುದರಿಂದ ಇನ್ಮುಂದೆ ನಕಲಿ ಖಾತೆಗಳ ಆಟ ನಡೆಯುವುದಿಲ್ಲ.

ಇದನ್ನೂ ಓದಿ: ರವಿಚಂದ್ರನ್​ ಸದಾ ಕಪ್ಪು ಬಟ್ಟೆ ಹಾಕೋದು ಯಾಕೆ? ಎಲ್ಲರ ಎದುರು ಗುಟ್ಟು ರಟ್ಟು ಮಾಡಿದ ಸುದೀಪ್​!

ಗ್ರಾಮ ಪಂಚಾಯತಿ​ ಚುನಾವಣೆಗೂ ಕಾಲಿಟ್ಟ ‘ಸೋಶಿಯಲ್​ ಮೀಡಿಯಾ’ ಪ್ರಚಾರ

 

(Crazy Star V Ravichandran all set to have Facebook Twitter Instagram and other social media official accounts)