Sign In

By signing in or creating an account, you agree with Associated Broadcasting Company's Terms & Conditions and Privacy Policy.

Sheetal Shetty: ಹೆಣ್ಮಕ್ಕಳ ಅಂಗಗಳ ಬಗ್ಗೆ ಟ್ರೋಲ್​ ಪೇಜ್​ನಲ್ಲಿ ಅಶ್ಲೀಲ ಪೋಸ್ಟ್​! ಸಿಡಿದೆದ್ದ ನಟಿ ಶೀತಲ್​ ಶೆಟ್ಟಿ

ಹೆಣ್ಣುಮಕ್ಕಳ ಅಂಗಾಂಗಗಳ ಬಗ್ಗೆ ಅಕ್ಷೇಪಾರ್ಹ ರೀತಿಯಲ್ಲಿ ಮೀಮ್​ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಪ್ರಸ್ತುತ ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿರುವ ನಟಿಯರ ಬಗ್ಗೆಯೂ ಕೀಳುಮಟ್ಟದ ಪೋಸ್ಟ್​ಗಳನ್ನು ಹಾಕಲಾಗಿದೆ. ಇದರ ವಿರುದ್ಧ ಶೀತಲ್​ ಶೆಟ್ಟಿ ಸಮರ ಸಾರಿದ್ದಾರೆ.

Sheetal Shetty: ಹೆಣ್ಮಕ್ಕಳ ಅಂಗಗಳ ಬಗ್ಗೆ ಟ್ರೋಲ್​ ಪೇಜ್​ನಲ್ಲಿ ಅಶ್ಲೀಲ ಪೋಸ್ಟ್​! ಸಿಡಿದೆದ್ದ ನಟಿ ಶೀತಲ್​ ಶೆಟ್ಟಿ
ಶೀತಲ್​ ಶೆಟ್ಟಿ
Follow us
ಮದನ್​ ಕುಮಾರ್​
| Updated By: Digi Tech Desk

Updated on: Apr 06, 2021 | 4:01 PM

ಸೋಶಿಯಲ್ ಮೀಡಿಯಾದಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ ಹೆಣ್ಣುಮಕ್ಕಳ ಬಗ್ಗೆ ಅಸಹ್ಯವಾಗಿ ಪೋಸ್ಟ್​ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಟ್ರೋಲ್​, ಮೀಮ್​ ಎಂಬ ಹೆಸರಿನಲ್ಲಿ ಅನೇಕರು ಇದನ್ನು ಎಂಜಾಯ್​ ಮಾಡುತ್ತಿದ್ದಾರೆ ಎಂಬುದು ವಿಪರ್ಯಾಸ. ಆದರೆ ಅಂಥ ಕೆಟ್ಟ ಮನಸ್ಥಿತಿಯನ್ನು ನಟಿ ಶೀತಲ್​ ಶೆಟ್ಟಿ ಖಂಡಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಕೆಲವು ಟ್ರೋಲ್​ ಪೇಜ್​ಗಳ ಬಣ್ಣ ಬಯಲು ಮಾಡಿದ್ದಾರೆ.

ಕನ್ನಡದಲ್ಲಿ ಅನೇಕ ಟ್ರೋಲ್​ ಪೇಜ್​ಗಳು ಸಕ್ರಿಯವಾಗಿವೆ. ಅವುಗಳಲ್ಲಿ ಕೆಲವು ಪೇಜ್​ಗಳು ನಟಿಯರ ಬಗ್ಗೆ ಕೆಟ್ಟದಾಗಿರುವ ಮೀಮ್​ಗಳನ್ನು ಪೋಸ್ಟ್​ ಮಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ಅಂಗಾಂಗಗಳ ಬಗ್ಗೆ ಅಕ್ಷೇಪಾರ್ಹ ರೀತಿಯಲ್ಲಿ ಮೀಮ್​ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಪ್ರಸ್ತುತ ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿರುವ ನಟಿಯರ ಬಗ್ಗೆಯೂ ಕೀಳುಮಟ್ಟದ ಪೋಸ್ಟ್​ಗಳನ್ನು ಹಾಕಲಾಗಿದೆ. ಇವುಗಳ ಸ್ಕ್ರೀನ್​ ಶಾಟ್​ ತೆಗೆದು ಶೀತಲ್​ ಸಮರ ಸಾರಿದ್ದಾರೆ.

‘ನನ್ನ ಕನ್ನಡತಾಯಿ ನನಗೆ ಬೇರೆಯವರನ್ನು ದ್ವೇಷಿಸಲು ಕಲಿಸಿಲ್ಲ. ನನ್ನ ಕನ್ನಡನಾಡಲ್ಲಿ ಹೆಣ್ಣನ್ನು ಅಸಹ್ಯವಾಗಿ ಬಿಂಬಿಸುವ ಪರಿಪಾಠ ಇಲ್ಲ. ದಯವಿಟ್ಟು ಇವುಗಳಿಗೆ ಕನ್ನಡಮ್ಮನ ಅಭಿಮಾನದ ಹೆಸರು ತರಬೇಡಿ. ಇದು ಒಬ್ಬರ ಬಗ್ಗೆ ನಾನು ಮಾತಾಡ್ತಿರೋದಲ್ಲ. ನಮ್ಮೆಲ್ಲರ ಪರವಾಗಿ ಮಾತಾಡ್ತಿರೋದು. ಟ್ರೋಲ್​ ಪೇಜ್​ಗಳನ್ನು ನಾನು ಫಾಲೋ ಮಾಡ್ತೀನಿ. ಕ್ರಿಯೇಟಿವ್​ ಆಗಿರೋ, ಮಜವಾಗಿರೋ ಮೀಮ್​ಗಳನ್ನು ಎಂಜಾಯ್​ ಮಾಡ್ತೀನಿ. ಆದರೆ ಇದು ಕ್ರಿಯೇಟಿವಿಟಿ ಅಲ್ಲ. ಇದನ್ನು ನೋಡಿ ಸುಮ್ಮನಿರೋಕೆ ಸಾಧ್ಯವೇ ಇಲ್ಲ. ದಯವಿಟ್ಟು ಇವುಗಳನ್ನು ನೋಡಿ ಎಂಜಾಯ್​ ಮಾಡ್ಬೇಡಿ. ಇದು ಸಮಾಜಕ್ಕೆ ಮಾರಕ. ಇಂಥವುಗಳನ್ನು ಕಂಡಾಗ ಖಂಡಿಸಿ. ನಮ್ಮ ನಾಡಿನ ಸ್ವಾಸ್ಥ್ಯ ಕಾಪಾಡಿ. ನನ್ನ ಬೇಸರ ಟ್ರೋಲ್​ ಪೇಜ್​ಗಳ ವಿರುದ್ಧ ಅಲ್ಲ’ ಎಂದು ಶೀತಲ್​ ಪೋಸ್ಟ್​ ಮಾಡಿದ್ದಾರೆ.

‘ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ಏನೂ ಆಗಬೇಕಾಗಿದ್ದಿಲ್ಲ. ಆದ್ರೆ ಇದು ನನ್ನ ಜಾತಿಗೆ ಸಂಬಂಧಿಸಿದ್ದು. ಹೆಣ್ಣಾಗಿ ನನಗೆ ಸಹಿಸಲು ಆಗದೇ ಇರುವಂಥದ್ದು. ನನ್ನಂತೆ ಇದನ್ನು ಓದಿದ, ಇಲ್ಲಿಯವರೆಗೆ ನೋಡಿಕೊಂಡು ಬಂದಿರೋ ಎಲ್ಲ ಹೆಣ್ಣುಮಕ್ಕಳಿಗೂ ಸಹಿಸೋಕೆ ಸಾಧ್ಯವಾಗಿರೋದಿಲ್ಲ. ಅದಕ್ಕೇ ಮಾತಾಡೋ ಧೈರ್ಯ ಮಾಡಿದೀನಿ’ ಎಂದು ಶೀತಲ್​ ಬರೆದುಕೊಂಡಿದ್ದಾರೆ.

‘ನನ್ನ ಆಯ್ಕೆಗಳನ್ನು ದಿಟ್ಟವಾಗಿ ಮಾಡಿಕೊಂಡು ಮುಂದೆ ಹೋಗುತ್ತಿರುವ ಯಾರೋ ಹೆತ್ತ ಹೆಣ್ಣು ಮಕ್ಕಳಿಗೆ, ಬಟಾ ಬಹಿರಂಗವಾಗಿ ಡಗಾರ್​, ಸೂ** ಎನ್ನುತ್ತ, ದೈಹಿಕವಾಗಿ ಅವರನ್ನು ಅವಮಾನ ಮಾಡುತ್ತಿರುವ ಕೆಟ್ಟ ಹುಂಬ ಮನಸ್ಥಿತಿಗಳಿಗೆ, ಹಾಗೇ ಅದನ್ನು ಎಂಜಾಯ್ ಮಾಡುತ್ತಿರುವ ಮನಸ್ಥಿತಿಗಳಿಗೂ ನನ್ನದೊಂದು ಧಿಕ್ಕಾರ. ನಾಳೆಯಿಂದ ಈ ಮನಸ್ಥಿತಿಗಳು ನನ್ನನ್ನು ಹೇಗೆ ಕಾಡಬಹುದು ಅನ್ನೋ ಅರಿವಿದ್ದರೂ ನಂಗ್ಯಾಕೋ ಸುಮ್ಮನಿರೋ ಮನಸ್ತಾಗ್ತಿಲ್ಲ. ಬನ್ನಿ ನೋಡ್ಕೊಳ್ಳೋಣ. ಇಂಥ ಮನಸ್ಥಿತಿಗಳ ಮನೆಯಲ್ಲಿರುವ ಹೆಣ್ಣುಮಕ್ಕಳ ಮೇಲೆ ನನಗೆ ಅನುಕಂಪವಿದೆ’ ಎಂದು ಶೀತಲ್​ ಮಾಡಿರುವ ಫೇಸ್​ಬುಕ್​ ಪೋಸ್ಟ್​ ಸಖತ್​ ವೈರಲ್​ ಆಗುತ್ತಿದೆ. ಅನೇಕರು ಶೀತಲ್​ಗೆ ಬೆಂಬಲ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಅಶ್ಲೀಲ ಮೆಸೇಜು ಕಳಿಸುತ್ತಿದ್ದವನಿಗೆ ಧರ್ಮದೇಟು

(Kannada Actress Sheetal Shetty raises voice against vulgar post of Kannada troll pages)

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ