Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬದುಕು ಬದಲಾಯಿಸಿದ ಐದು ಪ್ರಮುಖ ಘಟನೆಗಳು!​

Happy Birthday Rashmika Mandanna: ಅನೇಕ ಸವಾಲುಗಳನ್ನು ಸ್ವೀಕರಿಸಿ ರಶ್ಮಿಕಾ ಮಂದಣ್ಣ ಅವರು ಬಣ್ಣದ ಲೋಕದಲ್ಲಿ ಯಶಸ್ವಿ ಆಗಿದ್ದಾರೆ. ಹಲವು ವಿವಾದಗಳನ್ನು ಎದುರಿಸಿ ತಮ್ಮತನವನ್ನು ಸಾಬೀತು ಪಡಿಸಿದ್ದಾರೆ.

Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬದುಕು ಬದಲಾಯಿಸಿದ ಐದು ಪ್ರಮುಖ ಘಟನೆಗಳು!​
ರಶ್ಮಿಕಾ ಮಂದಣ್ಣ
Follow us
ಮದನ್​ ಕುಮಾರ್​
| Updated By: Digi Tech Desk

Updated on:Apr 05, 2021 | 10:21 AM

ಕೇವಲ 5-6 ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಇಂದು ಅವರು ನ್ಯಾಷನಲ್​ ಕ್ರಶ್​​ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದುನಿಂತಿದ್ದಾರೆ. ಹಾಗಂತ ಅವರ ಈ ಸಾಧನೆಯ ಹಾದಿ ಸುಗಮವಾಗಿ ಇರಲಿಲ್ಲ. ಅನೇಕ ಸವಾಲುಗಳನ್ನು ಸ್ವೀಕರಿಸಿ ಅವರು ಬಣ್ಣದ ಲೋಕದಲ್ಲಿ ಯಶಸ್ವಿ ಆಗಿದ್ದಾರೆ. ಹಲವು ವಿವಾದಗಳನ್ನು ಎದುರಿಸಿ ತಮ್ಮತನವನ್ನು ಸಾಬೀತು ಪಡಿಸಿದ್ದಾರೆ. ಇಂದು (ಏ.5) ರಶ್ಮಿಕಾ 25ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲಿಂದಲೂ ಶುಭ ಹಾರೈಕೆಗಳು ಕೇಳಿಬರುತ್ತಿವೆ. 2016ರಿಂದ 2021ರವರೆಗಿನ ರಶ್ಮಿಕಾ ಅವರ ಬದುಕು ಬದಲಾಗಲು ಕಾರಣವಾಗಿ ಐದು ಘಟನೆಗಳ ಬಗ್ಗೆ ಇಲ್ಲಿದೆ ವಿವರ…

ಕಿರಿಕ್​ ಪಾರ್ಟಿಯ ಭರ್ಜರಿ ಯಶಸ್ಸು ರಶ್ಮಿಕಾ ಮಂದಣ್ಣ ಇಂದು ಏನೇ ಆಗಿರಬಹುದು. ಆದರೆ ಅವರಿಗೆ ಬಣ್ಣದ ಲೋಕದಲ್ಲಿ ಮೊದಲು ಭದ್ರ ಬುನಾದಿ ಹಾಕಿಕೊಟ್ಟಿದ್ದೇ ಕಿರಿಕ್​ ಪಾರ್ಟಿ ಸಿನಿಮಾ. ರಿಷಬ್​ ಶೆಟ್ಟಿ ನಿರ್ದೇಶನ ಮತ್ತು ರಕ್ಷಿತ್​ ಶೆಟ್ಟಿ ನಾಯಕತ್ವದ ಈ ಸಿನಿಮಾ ಮೂಲಕ ರಶ್ಮಿಕಾಗೆ ಮೊದಲ ಬಾರಿಗೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿತು. ಆ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ಮೊದಲ ಚಿತ್ರದಲ್ಲೇ ರಶ್ಮಿಕಾ ಕರುನಾಡ ಕ್ರಶ್​ ಎನಿಸಿಕೊಂಡರು. ಕಿರಿಕ್​ ಪಾರ್ಟಿ ಚಿತ್ರದಿಂದ ಸಿಕ್ಕ ಯಶಸ್ಸಿನಿಂದಾಗಿ ಅವರು ಬದುಕಿನ ಪಥವೇ ಬದಲಾಯಿತು.

ರಕ್ಷಿತ್​ ಜೊತೆ ಪ್ರೀತಿ-ಬ್ರೇಕಪ್​ ಕಿರಿಕ್​ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಡುವೆ ಆಪ್ತತೆ ಬೆಳೆಯಿತು. ಅದು ನಂತರ ಪ್ರೀತಿಗೂ ತಿರುಗಿತು. ಇಬ್ಬರ ನಡುವಿನ ಪ್ರೇಮ್​ ಕಹಾನಿ ಹೆಚ್ಚು ದಿನ ಗುಟ್ಟಾಗಿ ಉಳಿಯಲಿಲ್ಲ. ಅದನ್ನು ನಂತರ ಈ ಜೋಡಿ ಒಪ್ಪಿಕೊಂಡಿತು. ಅವರ ಪ್ರೀತಿಗೆ ಎರಡೂ ಮನೆಯವರ ಒಪ್ಪಿಗೆ ಕೂಡ ಸಿಕ್ಕಿತು. ನಂತರ ಕೊಡಗಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿತು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತು. ಅದು ಮುಂದುವರಿದು, ನಿಶ್ಚಿತಾರ್ಥ ಮುರಿದುಬಿತ್ತು. ಬ್ರೇಕಪ್​ ಬಳಿಕ ಒಂದು ವರ್ಗದ ನೆಟ್ಟಿಗರಿಂದ ರಶ್ಮಿಕಾ ಟ್ರೋಲ್​ಗೆ ಒಳಗಾಗಬೇಕಾಯಿತು. ಹಾಗಂತ ಇದರಿಂದ ರಶ್ಮಿಕಾ ಹಿನ್ನಡೆ ಅನುಭವಿಸಲಿಲ್ಲ. ಇನ್ನಷ್ಟು ದಿಟ್ಟತನದೊಂದಿಗೆ ಅವರು ಮುಂದಿನ ಹೆಜ್ಜೆ ಇಟ್ಟರು.

ಕನ್ನಡದಿಂದ ಟಾಲಿವುಡ್​ ಎಂಟ್ರಿ ಕನ್ನಡ ಚಿತ್ರರಂಗದಲ್ಲಿ ಭಾರೀ ಜನಪ್ರಿಯತೆ ಸಿಕ್ಕ ಬಳಿಕ ರಶ್ಮಿಕಾ ಮಂದಣ್ಣ ಅವರಿಗೆ ಟಾಲಿವುಡ್​ನಿಂದ ಬುಲಾವ್​ ಬಂತು. ಇದು ಕೂಡ ಅವರ ಜೀವನದ ಬಹುಮುಖ್ಯ ಘಟ್ಟ. ತೆಲುಗು ಚಿತ್ರರಂಗದಲ್ಲಿ ಅವರು ನಟಿಸಿದ ಮೊದಲ ಸಿನಿಮಾ ‘ಚಲೋ’. ಆ ಸಿನಿಮಾದಿಂದ ಟಾಲಿವುಡ್​ ಸಿನಿಪ್ರಿಯರಿಗೆ ರಶ್ಮಿಕಾ ಇಷ್ಟವಾದರು. ಆ ಬಳಿಕ ಅಲ್ಲಿನ ಸ್ಟಾರ್​ ನಟರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ರಶ್ಮಿಕಾಗೆ ಸಿಗಲಾರಂಭಿಸಿತು. ವಿಜಯ್​ ದೇವರಕೊಂಡ, ಅಕ್ಕಿನೇನಿ ನಾಗಾರ್ಜುನ, ಮಹೇಶ್​ ಬಾಬು ಮುಂತಾದವರ ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಇದರಿಂದ ಅವರ ಜನಪ್ರಿಯತೆ ದೇಶ್ಯವ್ಯಾಪ್ತಿ ಹಬ್ಬಿತು.

ವಿಜಯ್​ ದೇವರಕೊಂಡ ಜೊತೆಗಿನ ಆಪ್ತತೆ ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣಗೆ ದೊಡ್ಡ ಯಶಸ್ಸು ಸಿಕ್ಕಿದ್ದು ‘ಗೀತಾ ಗೋವಿಂದಂ’ ಸಿನಿಮಾ ಮೂಲಕ. ಆ ಚಿತ್ರದಲ್ಲಿ ಅವರಿಗೆ ವಿಜಯ್​ ದೇವರಕೊಂಡ ಜೋಡಿ ಆಗಿದ್ದರು. ಪ್ರೇಕ್ಷಕರಿಗೆ ಇವರಿಬ್ಬರ ಕೆಮಿಸ್ಟ್ರಿ ಸಖತ್​ ಇಷ್ಟವಾಯಿತು. ಸಿನಿಮಾ ಕೂಡ ಸೂಪರ್​ ಹಿಟ್​ ಆಯಿತು. ನಂತರ ‘ಡಿಯರ್​ ಕಾಮ್ರೇಡ್​’ ಚಿತ್ರದಲ್ಲೂ ಈ ಜೋಡಿ ಒಂದಾಯಿತು. ಅಷ್ಟರಲ್ಲಾಗಲೇ ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ನಡುವೆ ಆಪ್ತತೆ ಹೆಚ್ಚಾಗಿತ್ತು. ‘ಗೀತಾ ಗೋವಿಂದಂ’ ಸಿನಿಮಾದಲ್ಲಿನ ಕಿಸ್ಸಿಂಗ್​ ದೃಶ್ಯ ವೈರಲ್​ ಆಗುವ ಮೂಲಕ ಟಾಕ್​ ಆಫ್​ ದಿ ಟೌನ್​ ಎನಿಸಿಕೊಂಡಿತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಮಟ್ಟಕ್ಕೆ ಗಾಸಿಪ್​ಗಳು ಹಬ್ಬಿದವು. ಇವುಗಳಿಂದ ರಶ್ಮಿಕಾ ಕುಗ್ಗಲಿಲ್ಲ. ಎಲ್ಲವನ್ನೂ ಪಾಸಿಟಿವ್​ ಆಗಿ ತೆಗೆದುಕೊಂಡು ಅವರು ಮುನ್ನುಗ್ಗಿದರು.

ಬಾಲಿವುಡ್​ನಲ್ಲಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ. ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚಿದ ಬಳಿಕ ಅವರು ಈಗ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಅವರ ಮೊದಲ ಬಾಲಿವುಡ್​ ಸಿನಿಮಾ ‘ಮಿಷನ್​ ಮಜ್ನು’ ಚಿತ್ರೀಕರಣ ನಡೆಯುತ್ತಿದೆ. ಆ ಸಿನಿಮಾದಲ್ಲಿ ಅವರಿಗೆ ಸ್ಟಾರ್​ ನಟ ಸಿದ್ದಾರ್ಥ್​ ಮಲ್ಹೋತ್ರ ಜೋಡಿ ಆಗಿದ್ದಾರೆ. ಆ ಚಿತ್ರದ ಶೂಟಿಂಗ್​ ಮುಗಿಸುವ ಮುನ್ನವೇ ರಶ್ಮಿಕಾಗೆ ಎರಡನೇ ಹಿಂದಿ ಚಿತ್ರದಲ್ಲಿ ಬಂಪರ್​ ಅವಕಾಶ ಸಿಕ್ಕಿದೆ. ‘ಗುಡ್​ ಬೈ’ ಶೀರ್ಷಿಕೆಯ ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ. ಅಲ್ಲದೆ, ‘ತಪಡ್​’ ಖ್ಯಾತಿಯ ನಟ ಪಾವೈಲ್​ ಗುಲಾಟಿಗೆ ಜೋಡಿಯಾಗಿ ರಶ್ಮಿಕಾ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಗಾಯಕ ಬಾದ್​ಷಾ ಜೊತೆ ಅವರು ಮಾಡಿದ ‘ಟಾಪ್​ ಟಕ್ಕರ್​’ ಗೀತೆ ಕೂಡ ಸೂಪರ್​ ಹಿಟ್​ ಆಗಿದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಬರ್ತ್​​ಡೇ ಸಂಭ್ರಮ! ಕಾಮನ್​ ಡಿಪಿಯಲ್ಲಿ ಮಿಂಚಿದ ನ್ಯಾಶನಲ್​ ಕ್ರಶ್​

ರಶ್ಮಿಕಾಗೆ ಸಿಕ್ತು ಸೀಕ್ರೆಟ್ ಗಿಫ್ಟ್ ಉಂಗುರ.. ಅದಕ್ಕೆ ಐ ಲವ್ ಇಟ್ ಎಂದ ಕರುನಾಡ ಕ್ರಶ್

(Rashmika Mandanna Birthday: journey of National crush from Kirik Party to Bollywood)

Published On - 10:15 am, Mon, 5 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್