ಅಪ್ಪು ಅಭಿಮಾನ: ಸಾವನ್ನಪ್ಪಿದ ಮಗನಿಗೂ ಟಿಕೆಟ್; ಫೊಟೋ ಇಟ್ಟುಕೊಂಡು ಯುವರತ್ನ ಸಿನಿಮಾ ನೋಡಿದ ಪೋಷಕರು

Yuvarathnaa, Puneeth Rajkumar: ಕೌಟುಂಬಿಕ ಸಿನಿಮಾ ವೀಕ್ಷಿಸುವ ಪ್ರೇಕ್ಷಕ ವರ್ಗಕ್ಕೆ ತುಂಬಾ ಹತ್ತಿರವಾದ ನಟ ಪುನೀತ್ ರಾಜ್​ಕುಮಾರ್ ಎಂದರೆ ತಪ್ಪಿಲ್ಲ. ಪುನೀತ್ ರಾಜ್​ಕುಮಾರ್​ಗೆ ದೊಡ್ಡ ಪ್ರಮಾಣದ ಫ್ಯಾಮಿಲಿ ಆಡಿಯನ್ಸ್ ಇದ್ದಾರೆ.

ಅಪ್ಪು ಅಭಿಮಾನ: ಸಾವನ್ನಪ್ಪಿದ ಮಗನಿಗೂ ಟಿಕೆಟ್; ಫೊಟೋ ಇಟ್ಟುಕೊಂಡು ಯುವರತ್ನ ಸಿನಿಮಾ ನೋಡಿದ ಪೋಷಕರು
ಪುನೀತ್​ ರಾಜ್​ಕುಮಾರ್​
Follow us
| Updated By: ganapathi bhat

Updated on:Apr 05, 2022 | 12:51 PM

ಮೈಸೂರು: ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಉತ್ತಮ ಸಂದೇಶಕ್ಕಾಗಿ, ಅಪ್ಪು ಡ್ಯಾನ್ಸ್​ಗಾಗಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚಲನಚಿತ್ರವನ್ನು ಮಕ್ಕಳು, ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರೂ ನೋಡುತ್ತಿದ್ದಾರೆ. ಈ ನಡುವೆ, ಮೃತಪಟ್ಟ ಮಗನ ಫೊಟೋದೊಂದಿಗೆ ಪೋಷಕರು ‘ಯುವರತ್ನ’ ಸಿನಿಮಾ ನೋಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಡಿಆರ್​​ಸಿ‌ ಮಲ್ಟಿಪ್ಲೆಕ್ಸ್​ನಲ್ಲಿ ಪೋಷಕರು ಮೃತ ಮಗನ ಭಾವಚಿತ್ರದೊಂದಿಗೆ ಸಿನಿಮಾ ನೋಡಿದ್ದಾರೆ.

ಕಳೆದ ಮೂರು ತಿಂಗಳ ಹಿಂದಷ್ಟೇ ಬಾಲಕ ಹರಿಕೃಷ್ಣನ್ ಎಂಬಾತ ಮೃತಪಟ್ಟಿದ್ದ. ಪುಟ್ಟ ಹುಡುಗ ಹರಿಕೃಷ್ಣನ್ ಪುನೀತ್ ರಾಜ್​ಕುಮಾರ್​ ಅಭಿಮಾನಿಯೂ ಆಗಿದ್ದ. ಅಷ್ಟೇ ಅಲ್ಲದೆ, ಆತ ಯುವರತ್ನ ಸಿನಿಮಾ ನೋಡಬೇಕೆಂದು ಆಸೆ ಪಟ್ಟಿದ್ದ. ಈ ಕಾರಣದಿಂದ, ಮಗನ ಆಸೆಯಂತೆ ಪೋಷಕರು ಆತನ ಫೊಟೋದೊಂದಿಗೆ ‘ಯುವರತ್ನ’ ವೀಕ್ಷಣೆ ಮಾಡಿದ್ದಾರೆ.

ಮೈಸೂರಿನ ನಿವಾಸಿ‌ ಮುರಳಿಧರ್ ಎಂಬುವವರ ಪುತ್ರ ಹರಿಕೃಷ್ಣನ್ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ. ಮಗ ಪುನೀತ್ ಅಭಿಮಾನಿಯಾಗಿದ್ದು, ಯುವರತ್ನ ನೋಡಬೇಕೆಂದು ಆಸೆಪಟ್ಟಿದ್ದ. ಮಗನ ಆಸೆಯನ್ನು ತೀರಿಸುವ ಸಲುವಾಗಿ ಫೊಟೋ ಇಟ್ಟುಕೊಂಡು ಪೋಷಕರು ಸಿನಿಮಾ ವೀಕ್ಷಿಸಿದ್ದಾರೆ. ಸಾವನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ತಂದೆ-ತಾಯಿ-ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಕೌಟುಂಬಿಕ ಸಿನಿಮಾ ವೀಕ್ಷಿಸುವ ಪ್ರೇಕ್ಷಕ ವರ್ಗಕ್ಕೆ ತುಂಬಾ ಹತ್ತಿರವಾದ ನಟ ಪುನೀತ್ ರಾಜ್​ಕುಮಾರ್ ಎಂದರೆ ತಪ್ಪಿಲ್ಲ. ಪುನೀತ್ ರಾಜ್​ಕುಮಾರ್​ಗೆ ದೊಡ್ಡ ಪ್ರಮಾಣದ ಫ್ಯಾಮಿಲಿ ಆಡಿಯನ್ಸ್ ಇದ್ದಾರೆ. ಮಕ್ಕಳು, ವಯಸ್ಕರು ಎನ್ನದೆ ತುಂಬಾ ಫ್ಯಾನ್ ಫಾಲೋವರ್ಸ್ ಪುನೀತ್​ಗೆ ಇದ್ದಾರೆ.

ಇದನ್ನೂ ಓದಿ: Yuvarathnaa Collection: ಯುವರತ್ನ ಬಾಕ್ಸ್​ ಆಫೀಸ್​ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಯುವರತ್ನ ನೋಡಬೇಕು, ಥಿಯೇಟರ್​ ಹೌಸ್​ ಫುಲ್​ ಮಾಡೋಕೆ ಅವಕಾಶ ಕೊಡಿ; ಸಿಎಂಗೆ ಮಕ್ಕಳಿಂದ ಮನವಿ

Published On - 8:12 pm, Sun, 4 April 21

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ