‘ಸಿಎಂ ಯಡಿಯೂರಪ್ಪ ನಿಜವಾದ ರಾಜಾಹುಲಿ’: ಹೌಸ್ಫುಲ್ ಅವಕಾಶ ನೀಡಿದ್ದಕ್ಕೆ ಕೇಳಿಬಂತು ಹೊಗಳಿಕೆ
ಸ್ಯಾಂಡಲ್ವುಡ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಸಿನಿರಂಗದವರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟ ಪುನೀತ್ ರಾಜ್ಕುಮಾರ್, ಪುನೀತ್ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸಿನಿಮಾ ಹಾಲ್ಗಳಲ್ಲಿ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಬೇಕು ಎಂಬ ಸ್ಯಾಂಡಲ್ವುಡ್ ಮನವಿಗೆ ರಾಜ್ಯ ಸರ್ಕಾರ ಕೊನೆಗೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಏಪ್ರಿಲ್ 7ರ ವರೆಗೆ, ಅಂದರೆ ಇನ್ನು ಮೂರು ದಿನಗಳ ಕಾಲ ಥಿಯೇಟರ್ ಹೌಸ್ಫುಲ್ಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಸ್ಯಾಂಡಲ್ವುಡ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಸಿನಿರಂಗದವರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟ ಪುನೀತ್ ರಾಜ್ಕುಮಾರ್, ಪುನೀತ್ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಕ. ಮಂಜು, ಸಿಎಂ ಯಡಿಯೂರಪ್ಪ ಅವರೇ ನಿಜವಾದ ರಾಜಾಹುಲಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ನಿರ್ಮಾಪಕ ಕೆ.ಮಂಜು ಧನ್ಯವಾದ ತಿಳಿಸಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಕೂಡ ಮುಖ್ಯಮಂತ್ರಿಗೆ ಧನ್ಯವಾದ ಹೇಳಿದ್ದಾರೆ.
3 ದಿನಗಳ ಕಾಲ ಥಿಯೇಟರ್ ಫುಲ್ ಭರ್ತಿಗೆ ಅವಕಾಶ ನೀಡಿರುವ ಕಾರಣ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟ ಪುನೀತ್ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಕೊವಿಡ್ ನಿಯಮ ಪಾಲಿಸಿ ಸಿನಿಮಾ ವೀಕ್ಷಿಸುವಂತೆ ಸಲಹೆ ಸಿನಿಪ್ರಿಯರಿಗೆ ಸಲಹೆ ನೀಡಿದ್ದಾರೆ.
ಈಗಾಗಲೇ ‘ಯುವರತ್ನ’ ಟಿಕೆಟ್ ಬುಕ್ ಆಗಿರುವ ಹಿನ್ನೆಲೆಯಲ್ಲಿ, ಥಿಯೇಟರ್ ಭರ್ತಿಗೆ ಚಿತ್ರ ಪೇಮಿಗಳು ಅವಕಾಶ ಕೇಳಿದ್ದರು. ನಟ ಪುನೀತ್ ಸೇರಿದಂತೆ, ಶಿವರಾಜ್ಕುಮಾರ್, ಸುದೀಪ್, ಯಶ್ ಹಾಗೂ ಇತರ ನಟರು ಕೂಡ ಒತ್ತಾಯಿಸಿದ್ದರು. ಸಿಎಂ ಬಿಎಸ್ವೈ ಭೇಟಿಯಾಗಿ ನಟ ಪುನೀತ್ ಮನವಿ ಸಲ್ಲಿಸಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ನಟ ಪುನೀತ್ ಅಭಿಮಾನಿಗಳು ಕೂಡ ಮನವಿ ಮಾಡಿದ್ದರು. ತಮ್ಮ ಮನವಿಗೆ ಸ್ಪಂದಿಸಿ ಅವಕಾಶ ನೀಡಿದ್ದಕ್ಕೆ ಸಿನಿರಂಗ ಫುಲ್ಖುಷ್ ಆಗಿದೆ.
ಇದನ್ನೂ ಓದಿ: ಯುವರತ್ನನಿಗೆ ರಿಲೀಫ್: ಏಪ್ರಿಲ್ 7ರವರೆಗೂ ಥಿಯೇಟರ್ ಹೌಸ್ ಫುಲ್ಗೆ ಅವಕಾಶ
ಇದನ್ನೂ ಓದಿ: ಯುವರತ್ನ ಚಿತ್ರಕ್ಕೆ ತೊಂದರೆ: ಮೌನ ಮುರಿದ ಯಶ್, ಶಿವರಾಜ್ಕುಮಾರ್!
Published On - 9:53 pm, Sat, 3 April 21