ಪುನೀತ್​ ರಾಜ್​ಕುಮಾರ್​ ಬಾಲಿವುಡ್​ ಎಂಟ್ರಿ ಯಾವಾಗ? ಅವರಿಂದಲೇ ಸಿಕ್ತು ಉತ್ತರ

ಪುನೀತ್​ ರಾಜ್​ಕುಮಾರ್​ ಬಾಲಿವುಡ್​ ಎಂಟ್ರಿ ಯಾವಾಗ? ಅವರಿಂದಲೇ ಸಿಕ್ತು ಉತ್ತರ
ಪುನೀತ್​ ರಾಜ್​ಕುಮಾರ್​

ಅಮೆಜಾನ್​ ಪ್ರೈಮ್​ ನಡೆಸಿದ ವರ್ಚುವಲ್ ಮೀಟಿಂಗ್​​ನಲ್ಲಿ ಯುವರತ್ನ ಟೀಮ್ ಮಾತನಾಡಿದೆ. ಈ ವೇಳೆ ಬಾಲಿವುಡ್ ಹಾಗು ಪ್ಯಾನ್ ಇಂಡಿಯಾದಲ್ಲಿ ನಟಿಸುವ ಬಗ್ಗೆ ಪುನೀತ್ ರಾಜ್​​ಕುಮಾರ್ ಕೂಡ ಮಾತನಾಡಿದ್ದಾರೆ.

Rajesh Duggumane

|

Apr 08, 2021 | 5:50 PM


ದಕ್ಷಿಣ ಭಾರತದ ನಟ-ನಟಿಯರು ಬೇರೆ ಭಾಷೆ ಸಿನಿಮಾಗಳಿಗೆ ಹೋಗಿ ನಟಿಸೋದು ಇದೇ ಮೊದಲೇನೆಲ್ಲ. ಕನ್ನಡದ ಅನೇಕ ನಟ-ನಟಿಯರು ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ತಮ್ಮ ಛಾಪು ಮೂಡಿಸಿ ಬಂದಿದ್ದಾರೆ. ಕನ್ನಡದಲ್ಲಿ ಫ್ಯಾಮಿಲಿ ಆಡಿಯನ್ಸ್​ನ ಮೆಚ್ಚಿನ ನಾಯಕ ಪುನೀತ್​ ರಾಜ್​ಕುಮಾರ್​ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸೋದು ಯಾವಾಗ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಪುನೀತ್ ರಾಜ್​ಕುಮಾರ್​ ಅವರೇ​ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಮೆಜಾನ್​ ಪ್ರೈಮ್​ ನಡೆಸಿದ ವರ್ಚುವಲ್ ಮೀಟಿಂಗ್​​ನಲ್ಲಿ ಯುವರತ್ನ ಟೀಮ್ ಮಾತನಾಡಿದೆ. ಈ ವೇಳೆ ಬಾಲಿವುಡ್ ಹಾಗು ಪ್ಯಾನ್ ಇಂಡಿಯಾದಲ್ಲಿ ನಟಿಸುವ ಬಗ್ಗೆ ಪುನೀತ್ ರಾಜ್​​ಕುಮಾರ್ ಕೂಡ ಮಾತನಾಡಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪುನೀತ್​, ಒಂದೊಮ್ಮೆ ಮುಂದಿನ ದಿನಗಳಲ್ಲಿ ಪ್ಯಾನ್​ ಇಂಡಿಯಾ ಅಥವಾ ಬಾಲಿವುಡ್​ನಿಂದ ಆಫರ್​ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದಿದ್ದಾರೆ.

ಬೇರೇ ಭಾಷೆಗಳಿಂದ ಬರುವ ಪಾತ್ರ ಹೇಗಿರಬೇಕು ಎನ್ನುವ ಬಗ್ಗೆ ಮಾತನಾಡಿರುವ ಪುನೀತ್​, ಲೀಡ್​ ರೋಲ್​ನಲ್ಲೇ ನಟಿಸಬೇಕು ಎಂದೇನೂ ಇಲ್ಲ. ಪಾತ್ರ ತೂಕದ್ದಾಗಿದ್ದರೆ ಸಾಕು ಎಂದು ಹೇಳಿದ್ದಾರೆ. ಈ ಮೂಲಕ ಅವರು ಪಾತ್ರಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ವೈರಸ್​ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಚಿತ್ರಮಂದಿರದಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡುತ್ತಿದೆ. ಇದರಿಂದ ‘ಯುವರತ್ನ’ ಸಿನಿಮಾ ರಿಲೀಸ್ ಆದ ಎಂಟೇ ದಿನಕ್ಕೆ ಒಟಿಟಿಗೆ ಲಗ್ಗೆ ಇಡುತ್ತಿದೆ. ಇದು ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಪುನೀತ್​ ನಟನೆಯ ಸಿನಿಮಾ ರಿಲೀಸ್​ ಆದ ಎಂಟೇ ದಿನಕ್ಕೆ ಒಟಿಟಿ ಪ್ಲಾಟ್​ಫಾರ್ಮ್​ಗೆ ಬರುತ್ತಿರುವುದೇಕೆ? ಹೀಗೆ ಮಾಡುತ್ತಿರುವುದು ಸರಿಯಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Yuvarathnaa OTT Release: ಬಿಡುಗಡೆಯಾದ ಎಂಟೇ ಎಂಟು ದಿನಕ್ಕೆ ಅಮೇಜಾನ್​ ಪ್ರೈಂನತ್ತ ಮುಖ ಮಾಡಿದ ಯುವರತ್ನ; ಕೊರೊನಾ ಕಾಟದಿಂದ ಓಟಿಟಿಗೆ ಬಂದ ಚಿತ್ರ

 Yuvarathnaa On Prime: ನೀವು ಹೀಗೆ ಮಾಡಿದ್ದು ಸರಿನಾ?; ಪುನೀತ್​ ನಿರ್ಧಾರಕ್ಕೆ ಫ್ಯಾನ್ಸ್​ ಆಕ್ರೋಶ

Follow us on

Related Stories

Most Read Stories

Click on your DTH Provider to Add TV9 Kannada