AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan: ಆರ್​ಸಿಬಿ ಮ್ಯಾಚ್​ಗೂ ಮುನ್ನ ದರ್ಶನ್​ ವಿಡಿಯೋ ವೈರಲ್​; ನೀವು ಇದನ್ನು ನೋಡಲೇಬೇಕು

ದರ್ಶನ್​ ಕ್ರಿಕೆಟ್​ ಪ್ರಿಯ. ಅವರು ಸಮಯ ಸಿಕ್ಕಾಗೆಲ್ಲ ಗೆಳೆಯರ ಜತೆ ಕ್ರಿಕೆಟ್​ ಆಡುತ್ತಾರೆ. ಇತ್ತೀಚೆಗೆ ಅವರು ಅಭಿಷೇಕ್​ ಅಂಬರೀಶ್​ ಜತೆ ಕ್ರಿಕೆಟ್​ ಆಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು.

Darshan: ಆರ್​ಸಿಬಿ ಮ್ಯಾಚ್​ಗೂ ಮುನ್ನ ದರ್ಶನ್​ ವಿಡಿಯೋ ವೈರಲ್​; ನೀವು ಇದನ್ನು ನೋಡಲೇಬೇಕು
ಆರ್​​ಸಿಬಿ ಟೀಂ-ದರ್ಶನ್​
ರಾಜೇಶ್ ದುಗ್ಗುಮನೆ
|

Updated on:Apr 08, 2021 | 7:41 PM

Share

ಶುಕ್ರವಾರ (ಏಪ್ರಿಲ್​ 8) ಐಪಿಎಲ್​ ಸೀಸನ್​ 14ರ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಚೆನ್ನೈನ ಚೆಪಾಕ್​ ಸ್ಟೇಡಿಯಂನಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ಮುಖಾಮುಖಿ ಆಗಲಿವೆ. ಈ ಮ್ಯಾಚ್​ಗೂ ಮುನ್ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ದರ್ಶನ್​ ಕ್ರಿಕೆಟ್​ ಪ್ರಿಯ. ಅವರು ಸಮಯ ಸಿಕ್ಕಾಗೆಲ್ಲ ಗೆಳೆಯರ ಜತೆ ಕ್ರಿಕೆಟ್​ ಆಡುತ್ತಾರೆ. ಇತ್ತೀಚೆಗೆ ಅವರು ಅಭಿಷೇಕ್​ ಅಂಬರೀಶ್​ ಜತೆ ಕ್ರಿಕೆಟ್​ ಆಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಕ್ರಿಕೆಟ್​ಗೆ ಸಂಬಂಧಿಸಿದಂತೆ ಅವರ ಹಳೆಯ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅವರು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಐಪಿಎಲ್​ ಎಂದಾಕ್ಷಣ ತಲೆ ಎತ್ತೋದು ಬೆಟ್ಟಿಂಗ್​. ಅನೇಕರು ಬೆಟ್ಟಿಂಗ್​ ದಂಧೆಯಲ್ಲಿ ಸಿಲುಕಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ, ಮನೆ ಮಾರಾಟ ಮಾಡಿ ಬೀದಿಗೆ ಬಂದಿದ್ದಾರೆ. ಬೆಟ್ಟಿಂಗ್​ ಮಾಡದೆ, ನಿಜವಾದ ಕ್ರೀಡಾಭಿಮಾನಿಯಾಗಿ ಮ್ಯಾಚ್​ ನೋಡಬೇಕು ಎನ್ನುವುದು ದರ್ಶನ್​ ಆಶಯ. ಹೀಗಾಗಿ, ಬೆಟ್ಟಿಂಗ್​ಗೆ ಇಳಿಯಬೇಡಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಐಪಿಎಲ್​ ಸಮಯವಾದ್ದರಿಂದ ಈಗ ಈ ವಿಡಿಯೋ ಮತ್ತೆ ವೈರಲ್​ ಆಗಿದೆ.

ಐಪಿಎಲ್​ ಆರಂಭವಾದ ತಕ್ಷಣ ಐಪಿಎಲ್​ ಮ್ಯಾಚ್​ ನೋಡೋ ಬದಲು ಅನೇಕರು ಬೆಟ್ಟಿಂಗ್​ ಮಾಡುತ್ತಾ ಕೂತಿರುತ್ತಾರೆ. ಐಪಿಎಲ್​ ಮ್ಯಾಚ್​ನ ಕೇವಲ ಮ್ಯಾಚ್​ ರೀತಿಯಲ್ಲಿ ನೋಡಿ. ಮೈದಾನದಲ್ಲಿ ಆಟಗಾರರು ಕಷ್ಟಪಟ್ಟು ಆಡುತ್ತಿರುತ್ತಾರೆ. ಮ್ಯಾಚ್​ ಮೇಲೆ ಬೆಟ್ಟಿಂಗ್​ ಮಾಡಿ ನೀವು ನಿಮ್ಮ ಲೈಫ್​​ನ ಹಾಳು ಮಾಡಿಕೊಳ್ಳಬೇಡಿ ಎಂದು ದರ್ಶನ್​ ಹೇಳಿದ್ದಾರೆ.

ದರ್ಶನ್​ ಸದ್ಯ, ರಾಬರ್ಟ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ರಿಲೀಸ್​ ಆದ 20 ದಿನಕ್ಕೆ ರಾಬರ್ಟ್​ ಸಿನಿಮಾ ಬರೋಬ್ಬರಿ 100 ಕೋಟಿ ಗಳಿಕೆ ಮಾಡಿತ್ತು. ಈ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಹೀಗಾಗಿ, ದರ್ಶನ್​ ಮುಂದಿನ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಕೂಡ ಮೂಡಿದೆ.

ಇದನ್ನೂ ಓದಿ:100 ಕೋಟಿ ರೂ. ಬಾಚಿಕೊಂಡ ರಾಬರ್ಟ್​! ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಹೊಸ ದಾಖಲೆ 

Roberrt: ರಾಬರ್ಟ್​ ಎತ್ತಂಗಡಿ ಮಾಡಿಸಲು ಬಂದ ಪವನ್​ ಕಲ್ಯಾಣ್​ ಸಿನಿಮಾಗೆ ದರ್ಶನ್​ ಫ್ಯಾನ್ಸ್​ ಕೊಟ್ರು ಸಖತ್​ ಡಿಚ್ಚಿ!

Published On - 7:41 pm, Thu, 8 April 21

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?