AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Wildlife Day 2026: ನಮ್ಮಂತೆಯೇ ವನ್ಯಜೀವಿಗಳಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ

ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸಸ್ಯ ಮತ್ತು ಪಕ್ಷಿ, ಪ್ರಾಣಿಗಳು ಕೂಡಾ ಮಹತ್ತರ ಪಾತ್ರವನ್ನು ವಹಿಸುತ್ತದೆ. ಆದರೆ ಇಂದು ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ಅದೆಷ್ಟೋ ಪ್ರಾಣಿ, ಪಕ್ಷಿ, ಸಸ್ಯ ಪ್ರಬೇಧಗಳು ಅಳಿವಿನಂಚಿಗೆ ತಲುಪಿವೆ. ಹಾಗಾಗಿ ವನ್ಯಜೀವಿಗಳು ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ರಕ್ಷಣೆಯ ಬಗ್ಗೆ ಪ್ರಪಂಚದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್‌ 3 ರಂದು ವಿಶ್ವ ವನ್ಯ ಜೀವಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

World Wildlife Day 2026: ನಮ್ಮಂತೆಯೇ ವನ್ಯಜೀವಿಗಳಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ
ವಿಶ್ವ ವನ್ಯಜೀವಿ ದಿನImage Credit source: Freepik
ಮಾಲಾಶ್ರೀ ಅಂಚನ್​
|

Updated on: Mar 03, 2026 | 9:01 AM

Share

ಮನುಷ್ಯನಂತೆಯೇ ಸಕಲ ಜೀವರಾಶಿಗಳಿಗೂ ಭೂಮಿಯ ಮೇಲೆ ಬದುಕುವ ಸ್ವಾತಂತ್ರ್ಯವಿದೆ. ವಿಪರ್ಯಾಸ ಏನೆಂದರೆ ಇಂದು ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ಅದೆಷ್ಟೋ ಜಾತಿಯ ಪ್ರಾಣಿ, ಪಕ್ಷಿಗಳು, ಮರಗಿಡಗಳು ಅಳಿದುಹೋಗಿದೆ. ಇನ್ನೂ ಅದೆಷ್ಟೋ ಜೀವಿಗಳು ಅಳಿವಿನಂಚಿನಲ್ಲಿವೆ. ಹೌದು ಒಂದೆಡೆ ಆಧುನೀಕರಣ, ನಗರೀಕರಣ ಅಂತೆಲ್ಲಾ ಜಗತ್ತು ಅಭಿವೃದ್ಧಿ ಹೊಂದುತ್ತಿದ್ದರೆ ಇನ್ನೊಂದೆಡೆ ಕಾಡುಗಳ ನಾಶ, ಅಕ್ರಮ ಬೇಟೆ ಇತ್ಯಾದಿ ಕಾರಣಗಳಿಂದ ಅರಣ್ಯ, ವನ್ಯಜೀವಿಗಳು ವಿನಾಶದ ಅಂಚಿಗೆ ತಲುಪಿವೆ. ವಿಶ್ವಸಂಸ್ಥೆಯ ಪ್ರಕಾರ, ಹೆಚ್ಚುತ್ತಿರುವ ಪರಿಸರ ಸವಾಲುಗಳಿಂದಾಗಿ ಒಂದು ದಶಲಕ್ಷಕ್ಕೂ ಹೆಚ್ಚು ವನ್ಯಜೀವಿ ಪ್ರಭೇದಗಳು ಅಳಿವಿನ ಅಪಾಯದಲ್ಲಿವೆ.  ಈ ನಿಟ್ಟಿನಲ್ಲಿ ವನ್ಯ ಜೀವಿಗಳು, ಅರಣ್ಯ ಸಂಪತ್ತಿನ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್‌ 03 ರಂದು ವಿಶ್ವ ವನ್ಯ ಜೀವಿ ದಿನವನ್ನು (World Wildlife Day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವ ವನ್ಯಜೀವಿ ದಿನದ ಇತಿಹಾಸವೇನು?

ವನ್ಯಜೀವಿಗಳು ಮತ್ತು ಸಸ್ಯ ಸಂಪತ್ತಿನ  ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 20, 2013 ರಂದು ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 3 ತಾರೀಕನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಅಳವಡಿಸಿಕೊಳ್ಳುವುದಾಗಿ ಘೋಷಿಸಿತು. ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ರಕ್ಷಣೆಗಾಗಿ 1973 ರಲ್ಲಿ CITES ಸಮಾವೇಶಕ್ಕೆ ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್‌ 03 ರಂದು ವಿಶ್ವ ವನ್ಯ ಜೀವಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.  ಮೊದಲ ವಿಶ್ವ ವನ್ಯಜೀವಿ ದಿನವನ್ನು ಮಾರ್ಚ್ 3, 2014 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವನ್ಯಜೀವಿಗಳನ್ನು ಸಂರಕ್ಷಿಸುವ ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ವನ್ಯಜೀವಿ ದಿನವನ್ನು ಏಕೆ ಆಚರಿಸಲಾಗುತ್ತದೆ?

ವಿಶ್ವ ವನ್ಯಜೀವಿ ದಿನವನ್ನು ಆಚರಿಸುವ ಪ್ರಾಥಮಿಕ ಉದ್ದೇಶವೆಂದರೆ ವಿಶ್ವಾದ್ಯಂತ ವನ್ಯಜೀವಿಗಳು ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.

ಇದನ್ನೂ ಓದಿ: ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?

 ವಿಶ್ವ ವನ್ಯಜೀವಿ ದಿನದ ಮಹತ್ವವೇನು?

  • ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದು, ವನ್ಯಜೀವಿಗಳ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ಅವುಗಳ ಸಂರಕ್ಷಣೆಗಾಗಿ ಜಾಗತಿಕ ಪ್ರಯತ್ನಗಳನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ.
  • ವಿಶ್ವ ವನ್ಯಜೀವಿ ದಿನವು ವನ್ಯಜೀವಿಗಳು ಕೇವಲ ಪ್ರಕೃತಿಯ ಒಂದು ಭಾಗವಲ್ಲ, ನಮ್ಮ ಜೀವನಕ್ಕೂ ಅಮೂಲ್ಯವಾಗಿದೆ ಎಂದು ನಮಗೆ ನೆನಪಿಸುತ್ತದೆ.
  • ಪರಿಸರಕ್ಕೆ ಪ್ರಾಣಿಗಳು ಮತ್ತು ಸಸ್ಯಗಳ ಕೊಡುಗೆಗಳನ್ನು ಮತ್ತು ಮಹತ್ವವನ್ನು ಗುರುತಿಸಿ, ಪ್ರತಿ ವರ್ಷ ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ.
  • ಭೂಮಿಯ ಮೇಲಿನ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಭೂಮಿಯ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಸಸ್ಯಗಳು ಮತ್ತು ವನ್ಯಜೀವಿಗಳ ಉಪಸ್ಥಿತಿ ಅತ್ಯಗತ್ಯ ಎಂಬುದನ್ನು ಜನರಿಗೆ ಅರ್ಥೈಸುವುದು ಈ ದಿನದ ಉದ್ದೇಶವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್