‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!

Bigg Boss Kannada: ಚಂದ್ರಚೂಡ್ ಸಿಟ್ಟು ಮಾಡಿಕೊಂಡಿರುವ ವಿಷಯ ಮಂಜುಗೂ ಗೊತ್ತಾಗಿದೆ. ಮುಂದಿನ ಎಪಿಸೋಡ್ಗಳಲ್ಲಿ ಚಂದ್ರಚೂಡ್ ವರ್ಸಸ್ ಮಂಜು ಫೈಟ್ ಇನ್ನಷ್ಟು ಜೋರಾಗುವ ಸಾಧ್ಯತೆ ಇದೆ.

‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!
ಚಕ್ರವರ್ತಿ ಚಂದ್ರಚೂಡ್ - ಮಂಜು ಪಾವಗಡ
Follow us
| Updated By: ರಾಜೇಶ್ ದುಗ್ಗುಮನೆ

Updated on:Apr 03, 2021 | 5:40 PM

ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಮಂಜು ಹವಾ ಜೋರಾಗಿತ್ತು. ಅವರ ಮಾತಿಗೆ ಎಲ್ಲರೂ ಬೆಲೆ ನೀಡುತ್ತಿದ್ದರು. ಆದರೆ ದಿನದಿಂದ ದಿನಕ್ಕೆ ದೊಡ್ಮನೆಯೊಳಗಿನ ಆಟದ ಸ್ವರೂಪ ಬದಲಾಗುತ್ತಾ ಬಂತು. ಈಗಂತೂ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ ಮೇಲೆ ಮಂಜು ಚಾರ್ಮ್ ಸ್ವಲ್ಪ ಕಮ್ಮಿ ಆಗಬಹುದು ಎನಿಸುತ್ತಿದೆ. ಅದಕ್ಕೆ ಪೂರಕ ಆಗುವಂತಹ ಘಟನೆಗಳು ಮನೆಯೊಳಗೆ ನಡೆಯುತ್ತಿವೆ. 

ಎಲ್ಲರ ತಪ್ಪುಗಳನ್ನು ಚಕ್ರವರ್ತಿ ಚಂದ್ರಚೂಡ್ ಎತ್ತಿ ಹೇಳುತ್ತಿದ್ದಾರೆ. ಆದೇ ರೀತಿ ಚಕ್ರವರ್ತಿ ಚಂದ್ರಚೂಡ್ ಮಾಡುವ ತಪ್ಪುಗಳ ಮೇಲೆ ಮಂಜು ಕಣ್ಣಿಟ್ಟಿದ್ದಾರೆ. ಇದು ಇಬ್ಬರ ನಡುವೆ ಹಣಾಹಣಿಗೆ ಕಾರಣ ಆಗಿದೆ. ರಾತ್ರಿ ಎಲ್ಲರೂ ಮಲಗಿರುವಾಗ ಚಕ್ರವರ್ತಿ ಚಂದ್ರಚೂಡ್ ಧ್ಯಾನ ಮಾಡುತ್ತಿದ್ದರು. ಅಲ್ಲದೇ ಒಂದು ಬಾರಿ ಅವರು ಜೋರಾಗಿ ಚೆಪ್ಪಾಳೆ ಕೂಡ ಹೊಡೆದರು. ಅದರಿಂದ ಕೆಲವರ ನಿದ್ರೆಗೆ ತೊಂದರೆ ಆಗಿತ್ತು. ಚಂದ್ರಚೂಡ್ ಆ ರೀತಿ ಚಪ್ಪಾಳೆ ಹೊಡೆದಿದ್ದು ಸರಿಯಲ್ಲ ಎಂದು ಮಂಜು ಪದೇಪದೇ ಹೇಳಿದರು.

ಈ ಘಟನೆ ನಡೆದ ಮರುದಿನವೇ ಮಂಜು ಪಾವಗಡ ಒಂದು ತಪ್ಪು ಮಾಡಿದ್ದಾರೆ. ಚಂದ್ರಚೂಡ್, ಅರವಿಂದ್ ಕೆಪಿ ಮುಂತಾದವರು ಮಲಗಿರುವ ಸಂದರ್ಭದಲ್ಲಿ ದಿವ್ಯಾ ಸುರೇಶ್, ರಾಜೀವ್, ವಿಶ್ವನಾಥ್, ಶುಭಾ ಪೂಂಜಾ, ದಿವ್ಯಾ ಉರುಡುಗ ಮುಂತಾದವರನ್ನು ಗುಂಪು ಸೇರಿಸಿಕೊಂಡು ಮಂಜು ಹರಟೆ ಹೊಡೆದಿದ್ದಾರೆ. ಇದರಿಂದ ಚಂದ್ರಚೂಡ್ ಮತ್ತು ಅರವಿಂದ್ ನಿದ್ರೆಗೆ ತೊಂದರೆ ಆಗಿದೆ. ಹಾಗಾಗಿ ಅವರಿಬ್ಬರು ಬೆಡ್ರೂಮ್ ಬಿಟ್ಟು ಗಾರ್ಡನ್ ಏರಿಯಾಗೆ ಬಂದು ಮಲಗಿದ್ದಾರೆ. ನಂತರ ಅವರನ್ನು ಸಮಾಧಾನ ಪಡಿಸಲು ದಿವ್ಯಾ ಉರುಡುಗ ಹಾಗೂ ಶುಭಾ ಪೂಂಜಾ ಪ್ರಯತ್ನಿಸಿದ್ದಾರೆ.

ಎಲ್ಲರೂ ಮಲಗಿರುವಾಗ ಜೋರಾಗಿ ಮಾತನಾಡಿದಕ್ಕಾಗಿ ದಿವ್ಯಾ ಹಾಗೂ ಶುಭಾ ಅವರು ಚಂದ್ರಚೂಡ್ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ಅದನ್ನು ಚಂದ್ರಚೂಡ್ ಒಪ್ಪಿಕೊಂಡಿಲ್ಲ. ಮಂಜು ಮಾಡಿದ ತಪ್ಪಿಗೆ ನೀವೇಕೆ ಕ್ಷಮೆ ಕೇಳುತ್ತೀರಿ ಎಂದು ಅವರು ತಿರುಗೇಟು ನೀಡಿದ್ದಾರೆ. ‘ನನ್ನ ಒಂದು ಚಪ್ಪಾಳೆಯಿಂದ ಅವರ ನಿದ್ರೆಗೆ ತೊಂದರೆ ಆಗುತ್ತದೆ ಎನ್ನುವುದಾದರೆ 9 ಜನರ ರಣಕೇಕೆಯಿಂದ ನಮ್ಮ ನಿದ್ರೆಗೆ ತೊಂದರೆ ಆಗುವುದಿಲ್ಲವೇ?’ ಎಂದು ಚಂದ್ರಚೂಡ್ ಗರಂ ಆಗಿದ್ದಾರೆ.

‘ತುಂಬ ಜನ ಸೇರಿಕೊಂಡು ತಪ್ಪು ಮಾಡಿದ್ರೆ ಅದು ಸರಿ ಆಗತ್ತಾ? ಕ್ಯಾಪ್ಟನ್ಗೆ ಜವಾಬ್ದಾರಿ ಇರಬೇಕು. ನನ್ನ ಚಪ್ಪಾಳೆಯನ್ನು ಅವರು ವ್ಯಂಗ್ಯ ಮಾಡಿದ. ತಾನು ಮಾಡಿದ್ದು ತಪ್ಪು ಅಂತ ಅವನಿಗೆ ಅನಿಸಬೇಕು. ಕ್ಷಮೆ ಕೇಳಬೇಕಾದವನು ಅವನು. ನಾನು ಇದನ್ನು ಮಂಜುಗೆ ಅರ್ಥ ಮಾಡಿಸುತ್ತೇನೆ. ಅವನನ್ನು ನಾನು ಬಿಡಲ್ಲ’ ಎಂದು ಚಂದ್ರಚೂಡ್ ಸವಾಲು ಹಾಕಿದ್ದಾರೆ. ಚಂದ್ರಚೂಡ್ ಸಿಟ್ಟು ಮಾಡಿಕೊಂಡಿರುವ ವಿಷಯ ಮಂಜುಗೂ ಗೊತ್ತಾಗಿದೆ. ಭಾನುವಾರ ಯಾರು ಎಲಿಮಿನೇಟ್ ಆಗುತ್ತಾರೋ ಗೊತ್ತಿಲ್ಲ. ಇದ್ದಷ್ಟು ದಿನ ಎಂಜಾಯ್ ಮಾಡಬೇಕು ಎಂದು ಮಂಜು ತಮ್ಮ ವರ್ತನೆಗೆ ಸಮರ್ಥನೆ ಕೊಟ್ಟುಕೊಂಡಿದ್ದಾರೆ. ಮುಂದಿನ ಎಪಿಸೋಡ್ಗಳಲ್ಲಿ ಚಂದ್ರಚೂಡ್ ವರ್ಸಸ್ ಮಂಜು ಫೈಟ್ ಇನ್ನಷ್ಟು ಜೋರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ

ವೈಲ್ಡ್​ ಕಾರ್ಡ್​ ಎಂಟ್ರಿ ಬೇಡ; ಬಿಗ್​ ಬಾಸ್​ ಮನೆಯಲ್ಲಿ ಹೊಸ ಬೇಡಿಕೆ ಇಟ್ಟ ಸ್ಪರ್ಧಿಗಳು

(Bigg Boss Kannada Updates: Chakravarthy Chandrachud starts war with Manju Pavagada)

Published On - 4:29 pm, Sat, 3 April 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ