ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ

ಈ ವಾರ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ಅರವಿಂದ್ ಕೆಪಿ, ಶಮಂತ್​ ಬ್ರೋ ಗೌಡ, ಶಂಕರ್​ ಅಶ್ವತ್ಥ್​, ಪ್ರಶಾಂತ್​ ಸಂಬರಗಿ ನಾಮಿನೇಟ್​ ಲಿಸ್ಟ್​ನಲ್ಲಿದ್ದಾರೆ.

ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ
ಸುದೀಪ್​
Follow us
ರಾಜೇಶ್ ದುಗ್ಗುಮನೆ
|

Updated on:Apr 04, 2021 | 6:06 PM

ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಓರ್ವ ಸದಸ್ಯ ಹೊರ ಹೋಗುವ ಸಮಯ ಸಮೀಪಿಸಿದೆ. ಭಾನುವಾರ (ಏಪ್ರಿಲ್ 4) ನಡೆಯುವ ಎಲಿಮಿನೇಷನ್​ನಲ್ಲಿ 14 ಸದಸ್ಯರ ಪೈಕಿ ಒಬ್ಬರ ಜರ್ನಿ ಅಂತ್ಯವಾಗಲಿದೆ. ಹಾಗಾದರೆ, ಈ ವಾರ ಯಾರು ಮನೆಯಿಂದ ಎಲಿಮಿನೇಟ್​ ಆಗುತ್ತಾರೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಮನೆಯ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್​ಗೆ ಅತಿ ಹೆಚ್ಚು ಮತಗಳು ಬೀಳುವ ಮೂಲಕ ಅವರು ಮೊದಲು ನಾಮಿನೇಟ್​ ಆಗಿದ್ದರು. ಅವರು ಅಷ್ಟಾಗಿ ಮಾತನಾಡುತ್ತಿಲ್ಲ, ಟಾಸ್ಕ್​ ಚೆನ್ನಾಗಿ ಆಡ್ತಾರೆ ಆದರೆ, ಜಾಸ್ತಿ ಬೆರೆಯುವುದಿಲ್ಲ, ನಾಟಕ ಮಾಡುತ್ತಾರೆ, ಅವರ ಆರೋಗ್ಯ ಸರಿಯಿಲ್ಲ ಎನ್ನುವ ಕಾರಣ ನೀಡಿ ಮನೆ ಮಂದಿ ಅವರ ಹೆಸರನ್ನು ತೆಗೆದುಕೊಂಡಿದ್ದರು. ಶಮಂತ್​ ಕೂಡ ಈ ವಾರ ನಾಮಿನೇಟ್​ ಆಗಿದ್ದರು. ಅವರು ಎಲ್ಲರೊಡನೆ ಬೆರೆಯುತ್ತಿಲ್ಲ ಎನ್ನುವ ಆರೋಪವನ್ನು ಮಾಡಿದರು. ಪ್ರಶಾಂತ್​ ಸಂಬರಗಿ ಎಲ್ಲರ ಜತೆ ಮನಸ್ತಾಪ ಮಾಡಿಕೊಳ್ಳುತ್ತಾರೆ, ಅವರು ಕೆಲಸ ಮಾಡುವುದಿಲ್ಲ, ಬಿಗ್​ ಬಾಸ್​ ಮನೆಗೆ ಮುಳ್ಳು ಎನ್ನುವ ಆರೋಪವನ್ನು ಮನೆ ಮಂದಿ ಮಾಡಿದ್ದರು. ಮನೆಯ ಸ್ಟ್ರಾಂಗ್​ ಕಂಟೆಸ್ಟೆಂಟ್​ ಎನಿಸಿರುವ ಅರವಿಂದ್​ ಕೆಪಿ ಮೇಲೂ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ. ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಕೂಡ ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ.

ಹೀಗಾಗಿ ಈ ವಾರ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ಅರವಿಂದ್ ಕೆಪಿ, ಶಮಂತ್​ ಬ್ರೋ ಗೌಡ, ಶಂಕರ್​ ಅಶ್ವತ್ಥ್​, ಪ್ರಶಾಂತ್​ ಸಂಬರಗಿ ನಾಮಿನೇಟ್​ ಲಿಸ್ಟ್​ನಲ್ಲಿದ್ದಾರೆ. ಪ್ರಶಾಂತ್​ ಸಂಬರಗಿ, ಅರವಿಂದ್ ಕೆಪಿ ಮನೆಯಲ್ಲಿರುವ ಸ್ಟ್ರಾಂಗ್ ಕಂಟೆಸ್ಟೆಂಟ್​ಗಳು. ಇವರು ಆಟದಲ್ಲಿ ನೂರಕ್ಕೆ ನೂರು ಪರ್ಸೆಂಟ್ ಎಫರ್ಟ್​ ಹಾಕುತ್ತಿದ್ದಾರೆ. ಶುಭಾ, ನಿಧಿ ಕೂಡ ಮನೆಯಲ್ಲಿ ಒಳ್ಳೆಯ ಟಿಆರ್​ಪಿ ಹೊಂದಿದ್ದಾರೆ. ಹೀಗಾಗಿ ಈ ನಾಲ್ವರು ಸೇಫ್​ ಆಗೋದು ಬಹುತೇಕ ಖಚಿತ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ಇನ್ನು ಉಳಿದವರು ಶಮಂತ್​ ಹಾಗೂ ಶಂಕರ್​ ಅಶ್ವತ್ಥ್​. ಈ ಬಾರಿ ಇಬ್ಬರೂ ಟಾಸ್ಕ್​ಗಳಲ್ಲಿ ಅಷ್ಟಾಗಿ ಉತ್ತಮ ಕಾಂಪಿಟೇಷನ್​ ನೀಡಿಲ್ಲ. ಶಂಕರ್​ ಅಶ್ವತ್ಥ್​ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅವರದೇ ತಂಡದವರು ಬೇಸರ ಹೊರ ಹಾಕಿದ್ದರು. ಹೀಗಾಗಿ, ಈ ವಾರ ಶಮಂತ್​ ಜಸ್ಟ್​ ಸೇಫ್​ ಆಗಿದ್ದು, ಶಂಕರ್​ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Bigg Boss Kannada: ದಿವ್ಯಾ ಎದುರಲ್ಲೇ ಕಳಚಿತು ಬಿಗ್ ಬಾಸ್ ಸ್ಪರ್ಧಿಗಳ ಮುಖವಾಡ! ಇವರೆಲ್ಲ ಮಾಡಿದ್ದು ಸರಿಯೇ?

ವೈಲ್ಡ್​ ಕಾರ್ಡ್​ ಎಂಟ್ರಿ ಬೇಡ; ಬಿಗ್​ ಬಾಸ್​ ಮನೆಯಲ್ಲಿ ಹೊಸ ಬೇಡಿಕೆ ಇಟ್ಟ ಸ್ಪರ್ಧಿಗಳು

Published On - 3:19 pm, Sat, 3 April 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್