AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್​ ಬಹಿರಂಗ ಡೆತ್​ ನೋಟ್​​

ಕೊರೊನಾ ವೈರಸ್​ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು ನಿರ್ದೇಶಕ ಗುರುಪ್ರಸಾದ್​ ಕಿಡಿಕಾರಿದ್ದಾರೆ. ಅನೇಕ ರಾಜಕಾರಣಿಗಳ ವಿರುದ್ಧ ಅವರು ಗುಡುಗಿದ್ದಾರೆ.

ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್​ ಬಹಿರಂಗ ಡೆತ್​ ನೋಟ್​​
ಫೇಸ್​ಬುಕ್​ ಲೈವ್​ನಲ್ಲಿ ನಿರ್ದೇಶಕ ಗುರುಪ್ರಸಾದ್​
ಮದನ್​ ಕುಮಾರ್​
|

Updated on: Apr 19, 2021 | 8:11 AM

Share

‘ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್​ ಅವರಿಗೆ ಕೊರೊನಾ ವೈರಸ್​ ಪಾಸಿಟಿವ್​ ಆಗಿದೆ. ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರವನ್ನು ಖಚಿತಪಡಿಸಿರುವ ಅವರು, ಅನೇಕರ ವಿರುದ್ಧ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಅವರ ಪುತ್ರ ಬಿ.ವೈ. ರಾಘವೇಂದ್ರ, ಆರೋಗ್ಯ ಸಚಿವ ಸುಧಾಕರ್​, ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಒಂದು ವೇಳೆ ತಾವು ನಿಧನರಾದರೆ ಅದಕ್ಕೆ ಯಡಿಯೂರಪ್ಪ, ರಾಘವೇಂದ್ರ, ಸುಧಾಕರ್​ ಮುಂತಾದ ರಾಜಕಾರಣಿಗಳೇ ಕಾರಣ ಎಂದು ಗುರು ಪ್ರಸಾದ್​ ಹೇಳಿದ್ದಾರೆ.

‘ಕೊನೇ ಕ್ಷಣಗಳ ಕೊನೇ ಮಾತುಗಳು. ಕೊರೊನಾ ಪಾಸಿಟಿವ್​ ಬಂದಿದೆ. ನಮ್ಮ ಮನೆಯವರೆಗೂ ಕೊರೊನಾ ತಂದುಕೊಟ್ಟಂತಹ ಯಡಿಯೂರಪ್ಪ, ವಿಜಯೇಂದ್ರ ಇವರಿಗೆಲ್ಲ ಧನ್ಯವಾದಗಳು. ನಮ್ಮ ಸಾವಿಗೆ ಮುನ್ನುಡಿ ಬರೆದಿದ್ದೀರಿ. ಕೊರೊನಾ ಪಾಸಿಟಿವ್​ ಆಗಿದ್ದಕ್ಕೆ ನೋವಿನಲ್ಲಿ ಮಾತನಾಡುತ್ತಿದ್ದೇನೆ. ನಾನು ಸತ್ತರೂ ಕೂಡ ಕೊನೇ ಕ್ಷಣದವರೆಗೂ ನನ್ನ ಈ ಶಾಪ ನೋವು ಕೊಡಬೇಕು ಎಂದು ಈ ಮಾತು ಹೇಳುತ್ತಿದ್ದೇನೆ. ಒಂದೂವರೆ ವರ್ಷ ಟೈಮ್​ ತಗೊಂಡು, ಮೂರು-ನಾಲ್ಕು ತಿಂಗಳು ಲಾಕ್​ಡೌನ್ ಮಾಡಿದ್ರಲ್ಲ’ ಎನ್ನುವ ಮೂಲಕ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ ಗುರುಪ್ರಸಾದ್​.

ಮೋದಿ ಪ್ರಾಮಾಣಿಕ. ಆದರೆ ಬಿಜಿಪಿಯವರೆಲ್ಲ ಪ್ರಾಮಾಣಿಕರಲ್ಲ. ಜೆಡಿಎಸ್​, ಕಾಂಗ್ರೆಸ್​ನವರೆಲ್ಲ ಪ್ರಾಮಾಣಿಕರಲ್ಲ. ಒಂದು ವೈರಸ್​ ನಿಮ್ಮನ್ನು ಆಡಿಸುತ್ತಿದೆ. ವಿಜ್ಞಾನದ ಹಿನ್ನೆಲೆ ಇದ್ದರೆ ಡಾ. ಸುಧಾಕರ್​ ಬೆಂಗಳೂರಿನಲ್ಲಿ ಒಂದು ಲಕ್ಷ ವಾರ್​ಫೇರ್​​ ಟೆಂಟ್​ ಹಾಕಿಸಿ. ಅದರ ಬದಲು ಯಾವುದೇ ಬ್ಯುಸಿನೆಸ್​ ನಿಲ್ಲಿಸ ಬೇಡಿ. ಒಂದೊಂದು ರೂಪಾಯಿ ದುಡಿಯಲು ಎಲ್ಲರೂ ಕಷ್ಟ ಪಡುತ್ತಿದ್ದಾರೆ. ಒಂದೂವರೆ ವರ್ಷ ಸಮಯ ತೆಗೆದುಕೊಂಡು ಪ್ರತಿಮನೆಗೂ ವೈರಸ್​ ಕಳಿಸಿದ್ದೀರಲ್ಲ.. ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಕೊರೊನಾ ಬಂದಿದೆ. ಅಕಸ್ಮಾತ್​ ಸತ್ತು ಹೋದರೆ ಇದನ್ನೆಲ್ಲ ಹೇಳೋಕೆ ಆಗಲ್ಲ’ ಎಂದು ಗುರುಪ್ರಸಾದ್​ ಹೇಳಿದ್ದಾರೆ.

‘ಚಿತ್ರರಂಗದ ಅನೇಕ ಜನರನ್ನು ಸಾಯಿಸಿದ್ದೀರಿ. ನಾನು ಕೂಡ ಹಾರ್ಟ್​ ಅಟ್ಯಾಕ್​ ಆಗಿ ಸಾಯಬಹುದು. ಮನೆಮನೆಗೂ ವೈರಸ್​ ಬಂದಿದೆ. ಸಿನಿಮಾ ಪ್ರಚಾರಕ್ಕಾಗಿ ಇದನ್ನೆಲ್ಲ ನಾನು ಮಾಡುತ್ತಿಲ್ಲ. ನಾನು ಬದುಕಿದ್ದರೆ ತಾನೇ ಅದೆಲ್ಲ. ಪ್ರತಿಯೊಬ್ಬರು ಬದುಕುವುದು ಕೂಡ ಮುಖ್ಯ. ಕರ್ನಾಟಕದಲ್ಲಿ ಕೊರೊನಾದಿಂದಾದ ಪ್ರತಿ ಸಾವಿಗೆ ಡಾ. ಸುಧಾಕರ್​ ಕಾರಣ. ಡಿ.ಕೆ. ಶಿವಕುಮಾರ್​. ಎಚ್​.ಡಿ. ಕುಮಾರಸ್ವಾಮಿ ಸಾಚಾ ಎಂದು ನಾನು ಹೇಳುತ್ತಿಲ್ಲ. ಎಲ್ಲರೂ ನಮ್ಮನ್ನು ಕೊಲ್ಲುತ್ತಿದ್ದೀರಿ. ಇದು ನನ್ನ ಡೆತ್​ ನೋಟ್​. ನನ್ನ ಸಾವಿಗೆ ನೀವೆಲ್ಲರೂ ಕಾರಣ’ ಎಂದು ಗುರುಪ್ರಸಾದ್​ ಹೇಳಿರುವ ವಿಡಿಯೋ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

ಕೊರೊನಾದಿಂದ ಮೃತಪಟ್ಟ ಪತಿ, ಅತ್ತೆ.. ಖಿನ್ನತೆಗೆ ಒಳಗಾಗಿ ತಾಯಿ-ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More