AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಮೃತಪಟ್ಟ ಪತಿ, ಅತ್ತೆ.. ಖಿನ್ನತೆಗೆ ಒಳಗಾಗಿ ತಾಯಿ-ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಮೃತ ರೇಖಾ ಪತಿ ಶಿವಕುಮಾರ್ 6 ತಿಂಗಳ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದರು. ಅದಾದ ಬಳಿಕ ರೇಖಾ ಅತ್ತೆಯೂ ಕೂಡ ಕೊರೊನಾಗೆ ಬಲಿಯಾಗಿದ್ದರು. ಮನೆಯಲ್ಲಿ ಇಬ್ಬರ ಸಾವಿನಿಂದ ಖಿನ್ನತೆಗೊಳಗಾಗಿದ್ದ ರೇಖಾ ಮತ್ತು ಮಗ ಮನೋಜ್ ಇಬ್ಬರೂ ಏಪ್ರಿಲ್ 16ರಂದು ಬೈರನಾಯಕನಹಳ್ಳಿ ವ್ಯಾಪ್ತಿಯಲ್ಲಿ ಬೆಂಗಳೂರು-ಹುಬ್ಬಳ್ಳಿ ಮಾರ್ಗದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರೊನಾದಿಂದ ಮೃತಪಟ್ಟ ಪತಿ, ಅತ್ತೆ.. ಖಿನ್ನತೆಗೆ ಒಳಗಾಗಿ ತಾಯಿ-ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ರೇಖಾ ಮತ್ತು ಶಿವಕುಮಾರ್
ಆಯೇಷಾ ಬಾನು
|

Updated on:Apr 18, 2021 | 3:54 PM

Share

ಬೆಂಗಳೂರು: ತಾಯಿ ಮತ್ತು ಮಗ ಇಬ್ಬರೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಅತ್ತೆ ಹಾಗೂ ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ ಮತ್ತು ಮಗ ಇಬ್ಬರೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಏಪ್ರಿಲ್ 16ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ತಾಯಿ ರೇಖಾ(40), ಮನೋಜ್(22)ಮೃತ ದುರ್ದೈವಿಗಳು.

ಕಳೆದ ವರ್ಷ ಮಾರ್ಚ್ ತಿಂಗಳ‌ ಕೊನೆಯಲ್ಲಿ ಕೊರೊನಾ ಮಹಾಮಾರಿ ನಮ್ಮ ದೇಶಕ್ಕೆ ಅಪ್ಪಳಿಸಿತ್ತು, ಈ ಕೊರೊನಾದಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಿತ್ತು. ಅದೆಷ್ಟೋ ಜನ ವಲಸೆ ಕಾರ್ಮಿಕರು ಕೊರೊನಾದಿಂದ ತಮ್ಮ ಊರುಗಳಿಗೆ ಹುಳೆ ಹೊರಟು ಹೋದ್ರು, ಇದೇ ಕೊರೊನಾ‌ದಿಂದ ಈಗ ಮತ್ತೊಂದು ಮನ ಮಿಡಿಯುವ ಘಟನೆ ನಡೆದಿದೆ.

6 ತಿಂಗಳ ಅವದಿಯಲ್ಲಿ ಕಂಟ್ರಾಕ್ಟರ್ ಹೆಂಡತಿ ಹಾಗೂ ಮಗ ಆತ್ಮಹತ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿ ಬಳಿ, ಎರಡು ಮೃತ ದೇಹಗಳು ಪತ್ತೆಯಾಗಿದ್ದವು. ಗುರುತು ಪತ್ತೆ ಹಚ್ಚಿದಾಗ ಇವರು ಬೆಂಗಳೂರಿನ‌ ಹೆಸರಘಟ್ಟ ರಸ್ತೆಯಲ್ಲಿನ ಸೋಮಶೆಟ್ಟಿಹಳ್ಳಿ ನಿವಾಸಿಗಳಾದ 37 ವರ್ಷದ ತಾಯಿ ರೇಖಾ ಹಾಗೂ 21 ವರ್ಷದ ಮಗ ಮನೋಜ್ ಎಂದು ತಿಳಿದು ಬಂದಿತ್ತು. ಮನೋಜ್ ನಿಟ್ಟೆ ಹೆಸರಘಟ್ಟ ರಸ್ತೆಯ ಕಾಲೇಜ್​ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿ. ರೇಖಾ ಮನೆಯಲ್ಲಿ ಇರುತ್ತಿದ್ದರು. ಇವರಿಬ್ಬರೂ ಮನನೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Corona Death

ತಾಯಿ ರೇಖಾ ಮತ್ತು ಮಗ ಮನೋಜ್

ಇಡೀ ಊರಿಗೆ ಊರೆ ಕೈ ಎತ್ತಿ ಮುಗಿಯುತ್ತಿದ್ದ ವ್ಯಕ್ತಿ ಶಿವಕುಮಾರ್, ಶಿವಣ್ಣ ಎಂದೆ ಊರಿನಲ್ಲಿ ಖ್ಯಾತಿ ಪಡೆದಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊವಿಡ್ ಸೋಂಕಿಗೆ ತುತ್ತಾಗಿ ಅಕ್ಟೋಬರ್ 20 ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಶಿವಣ್ಣ ಸಾವನ್ನಪ್ಪಿದ 9 ದಿನದ ನಂತರ ಆತನ ತಾಯಿ ಶಿವಾಂಬಿಕೆ ಸಹ ಮಹಾಮಾರಿ ಕೊರೊನಾಗೆ ಸಾವನ್ನಪ್ಪಿದ್ದರು. ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿದ್ದ ಶಿವಕುಮಾರ್ ಆರ್ಥಿಕವಾಗಿ ಸಬಲರಾಗೆ ಇದ್ರು, ಮಗ ಮನೋಜ್ ಹೆಸರಿನಲ್ಲಿ ಮನೋಜ್ ರೆಸಿಡೆನ್ಸಿ ಎಂದು ಅಪಾರ್ಟ್ಮೆಂಟ್ ಕಟ್ಟಿದ್ದು, ಕೆಲ ಉದ್ಯಮಗಳನ್ನ ಸಹ ನಡೆಸುತ್ತಿದ್ದರು. ಓಡಾಡೋಕೆ ಬುಲೆಟ್ ಬೈಕ್, ಇನ್ನೋವಾ ಕಾರು, ಒಳ್ಳೆ ಆದಾಯ ಎಲ್ಲಾ ಇತ್ತು. ಎರಡು ಕೋಟಿ ಬೆಲೆಬಾಳುವ ಮನೆಯಲ್ಲಿ ಸುಖವಾಗಿದ್ದ ಕುಟುಂಬ ತಿಂಗಳಿಗೆ 5ಲಕ್ಷ ಬಾಡಿಗೆ ಪಡೆಯುತ್ತಿತ್ತು. ಆದ್ರೆ ಸುಖಿ ಜೀವನ ಸಾಗಿಸುತ್ತಿದ್ದ ಈ ಕುಟುಂಬದ ಬಾಳಲ್ಲಿ ಕೊರೊನ ಬಿರುಗಾಳಿ ಎಬ್ಬಿಸಿ ಪತಿ ಶಿವಣ್ಣ ಹಾಗೂ ಅತ್ತೆ ಶಿವಾಂಬಿಕೆಯನ್ನು ರೇಖಾ ಕಳೆದುಕೊಂಡಿದ್ದಾರೆ. ಈ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ರೇಖಾ ಹಾಗೂ ಮಗ ಮನೋಜ್ ಮೂರು ದಿನಗಳ‌ ಹಿಂದೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರೊನಾ ಮಹಾಮಾರಿಗೆ ಒಂದು ಕುಟುಂಬದ ನಾಲ್ಕು ಜನ ಇಹಲೋಕ ತ್ಯಜಿಸಿದ್ದು ಶಿವಕುಮಾರ್ ಮಗಳು ಮಾತ್ರ ಅನಾಥರಾಗಿದ್ದಾರೆ. ಈ ಕೋವಿಡ್ ಮಾರಿಗೆ ಎಷ್ಟು ಹಣ ಆಸ್ತಿ ಇದ್ದರು ಜೀವ ಮಾತ್ರ ಉಳಿಯೋದಿಲ್ಲ ಎಂಬುದು ಈ ಹೃದಯಾ ವಿದ್ರಾವಕ ಘಟನೆಯಿಂದ ತಿಳಿದು ಬಂದಿದ್ದು, ಜೀವ ಇದ್ದರೆ ಜೀವನ ಅಂತಾ ಜನ ಮುಂಜಾಗೃತ ಕ್ರಮಗಳನ್ನ ಅನುಸರಿಬೇಕಾಗಿದೆ.

ಇದನ್ನೂ ಓದಿ: ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ

Published On - 3:41 pm, Sun, 18 April 21

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?