Sonu Sood Corona Positive: ಸೋನು ಸೂದ್ಗೆ ಕೊರೊನಾ ಪಾಸಿಟಿವ್; ಬಡವರ ಪಾಲಿನ ರಿಯಲ್ ಹೀರೋಗೆ ಈಗ ಕಷ್ಟಕಾಲ
‘ನನಗೆ ಕೊವಿಡ್-19 ಪಾಸಿಟಿವ್ ಆಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಆಗಿದ್ದೇನೆ. ಆದರೆ ಚಿಂತೆ ಮಾಡುವುದು ಬೇಡ. ನಿಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಲು ನನಗೆ ಇದರಿಂದ ಹೆಚ್ಚಿನ ಸಮಯ ಸಿಗಲಿದೆ’ ಎಂದು ಸೋನು ಸೂದ್ ತಿಳಿಸಿದ್ದಾರೆ.
ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್ ಅವರಿಗೆ ಈಗ ಕೊರೊನಾ ವೈರಸ್ ಸೋಂಕು ತಗುಲಿರುವುದು ಧೃಡವಾಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೊವಿಡ್ ಸೋಂಕಿಗೆ ಒಳಗಾಗಿರುವ ಅವರು ಬೇಗ ಗುಣಮುಖರಾಗಲಿ ಎಂದು ಲಕ್ಷಾಂತರ ಜನರು ಪ್ರಾರ್ಥಿಸುತ್ತಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿಯೂ ಬಡವರಿಗೆ ಸಹಾಯ ಮಾಡುವುದನ್ನು ತಾವು ನಿಲ್ಲಿಸುವುದಿಲ್ಲ ಎಂದು ಸೋನು ಸೂದ್ ಹೇಳಿದ್ದಾರೆ!
‘ಕೊವಿಡ್ ಪಾಸಿಟಿವ್ ಆಗಿದೆ. ಆದರೆ ಮನಸ್ಸು ಮತ್ತು ಉತ್ಸಾಹ ಸೂಪರ್ ಪಾಸಿಟಿವ್ ಆಗಿದೆ. ಎಲ್ಲರಿಗೂ ಹಾಯ್. ಇಂದು ಬೆಳಗ್ಗೆ ನನಗೆ ಕೊವಿಡ್-19 ಪಾಸಿಟಿವ್ ಆಗಿದೆ ಎಂಬುದನ್ನು ತಿಳಿಸುತ್ತಿದ್ದೇನೆ. ಮುನ್ನೆಚ್ಚರಿಕೆ ಕ್ರಮವಾಗಿ ನಾನು ಕ್ವಾರಂಟೈನ್ ಆಗಿದ್ದೇನೆ. ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ. ಆದರೆ ಚಿಂತೆ ಮಾಡುವುದು ಬೇಡ. ನಿಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಲು ನನಗೆ ಇದರಿಂದ ಹೆಚ್ಚಿನ ಸಮಯ ಸಿಗಲಿದೆ. ನಿಮಗಾಗಿ ನಾನು ಸದಾ ಇರುತ್ತೇನೆ ಎಂಬುದನ್ನು ನೆನಪಿಡಿ’ ಎಂದು ಸೋಶಿಯಲ್ ಮೀಡಿಯಾ ಮೂಲಕ ಸೋನು ಸೂದ್ ತಿಳಿಸಿದ್ದಾರೆ.
2020ರಲ್ಲಿ ಕಠಿಣ ಲಾಕ್ಡೌನ್ ಜಾರಿಯಾಗಿದ್ದಾಗ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಕಷ್ಟಪಡುತ್ತಿದ್ದರು. ಎಷ್ಟೋ ಜನರು ಕಾಲ್ನಡಿಗೆಯಲ್ಲೇ ನೂರಾರು ಕಿಲೋ ಮೀಟರ್ ಪ್ರಯಾಣ ಮಾಡಿದರು. ಆ ವೇಳೆ ಸಾವುಗಳು ಸಂಭವಿಸಿದವು. ಇದನ್ನೆಲ್ಲ ಕಂಡ ಸೋನು ಸೂದ್ ರಿಯಲ್ ಹೀರೋ ರೀತಿಯಲ್ಲಿ ಬಡಜನರ ಸಹಾಯಕ್ಕೆ ಧಾವಿಸಿದ್ದರು. ಸರ್ಕಾರಗಳು ಕೂಡ ಕೈಕಟ್ಟಿ ಕುಳಿತ ಸಂದರ್ಭದಲ್ಲಿ ಜನರಿಗೆ ಸೋನು ಸೂದ್ ಬಸ್ ವ್ಯವಸ್ಥೆ ಮಾಡಿದ್ದರು.
View this post on Instagram
ವಿದೇಶದಲ್ಲಿ ಸಿಲುಕಿಕೊಂಡಿದ್ದವರನ್ನು ಭಾರತಕ್ಕೆ ಕರೆತರಲು ಸೋನು ಸೂದ್ ಶ್ರಮಿಸಿದ್ದರು. ಕಾರ್ಮಿಕರನ್ನು ವಿಮಾನದ ಮೂಲಕ ಅವರವರ ಊರುಗಳಿಗೆ ತಲುಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸೋನು ಸೂದ್ ಗಮನ ಸೆಳೆದಿದ್ದರು. ಈ ಎಲ್ಲ ಘಟನೆಗಳ ಬಳಿಕ ಎಷ್ಟೋ ಬಡವರ ಮನೆಯಲ್ಲಿ ಸೋನು ಸೂದ್ ಫೋಟೋ ಇಟ್ಟು ಪೂಜೆ ಮಾಡಿದ ಬಗ್ಗೆ ವರದಿ ಆಗಿತ್ತು. ಈಗ ಅವರಿಗೇ ಕೊರೊನಾ ವೈರಸ್ ತಗುಲಿರುವುದರಿಂದ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಆಗಿದೆ.
ಇದನ್ನೂ ಓದಿ: ವಿಮಾನದ ಮೇಲೆ ಸೋನು ಸೂದ್ಗೆ ವಿಶೇಷ ಗೌರವ! ತಂದೆ-ತಾಯಿಯೇ ಇಲ್ಲ ಎಂದು ಮರುಗಿದ ನಟ
(Sonu Sood tests Coronavirus positive and is now in quarantine)
Published On - 2:22 pm, Sat, 17 April 21