ನಿಖಿಲ್​ ನನಗೆ ಮೋಸ ಮಾಡಿದ್ದಾನೆ; ಪೊಲೀಸ್​ ಠಾಣೆ ಮೆಟ್ಟಿಲೇರಿದ ನಿಕ್ಕಿ ಗಲ್ರಾನಿ

ನಿಕ್ಕಿ ಗಲ್ರಾನಿ ಇತ್ತೀಚೆಗೆ ಪೊಲೀಸ್​ ಠಾಣೆ ಮೆಟ್ಟಿಲೇರಿ ತಮಗೆ ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ಪರಿಚಯದ ವ್ಯಕ್ತಿ ನಿಖಿಲ್​ ತಮಗೆ ಮೋಸ ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.

ನಿಖಿಲ್​ ನನಗೆ ಮೋಸ ಮಾಡಿದ್ದಾನೆ; ಪೊಲೀಸ್​ ಠಾಣೆ ಮೆಟ್ಟಿಲೇರಿದ ನಿಕ್ಕಿ ಗಲ್ರಾನಿ
ನಿಕ್ಕಿ ಗಲ್ರಾನಿ

ಸ್ಯಾಂಡಲ್​ವುಡ್​ ಡ್ರಗ್​ ಕೇಸ್​ನಲ್ಲಿ ನಟಿ ಸಂಜನಾ ಗಲ್ರಾನಿ ಸುದ್ದಿಯಾಗಿದ್ದರು. ಅವರು ಜೈಲಿಗೆ ಕೂಡ ಹೋಗಿ ಬಂದಿದ್ದರು. ಈಗ ಅವರ ಸಹೋದರಿ ನಿಕ್ಕಿ ಗಲ್ರಾನಿ ಸುದ್ದಿಯಾಗಿದ್ದಾರೆ. ಹಣ ಪಡೆದು ಅದನ್ನು ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ನಿಖಿಲ್​ ಹೆಗ್ಡೆ ವಿರುದ್ಧ ಅವರು ಕೋರ್ಟ್​ ಮೆಟ್ಟಿಲೇರಿದ್ದಾರೆ. ನಿಕ್ಕಿ ಗಲ್ರಾನಿ ಇತ್ತೀಚೆಗೆ ಪೊಲೀಸ್​ ಠಾಣೆ ಮೆಟ್ಟಿಲೇರಿ ತಮಗೆ ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ಪರಿಚಯದ ವ್ಯಕ್ತಿ ನಿಖಿಲ್​ ತಮಗೆ ಮೋಸ ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ. ಅದು 2016ರ ಸಮಯ. ನಿಖಿಲ್​ ಕೆಫೆ ಒಂದನ್ನು ತೆರೆಯಲು ಮುಂದಾಗಿದ್ದರು. ಇದಕ್ಕೆ ದೊಡ್ಡ ಮೊತ್ತದ ಹಣ ಬೇಕಿತ್ತು. ಹೀಗಾಗಿ, ನಿಕ್ಕಿ ಬಳಿ ನಿಖಿಲ್​ ಹಣ ಕೇಳಿದ್ದರು. ಅಂತೆಯೇ, ನಿಕ್ಕಿ ಬರೋಬ್ಬರಿ 50 ಲಕ್ಷ ರೂಪಾಯಿ ಹಣವನ್ನು ನಿಖಿಲ್​ಗೆ ವರ್ಗಾಯಿಸಿದ್ದರು. ಹಣ ವರ್ಗಾವಣೆ ವೇಳೆ ಒಪ್ಪಂದ ಕೂಡ ಆಗಿತ್ತು.

ಈ ಒಪ್ಪಂದದ ಪ್ರಕಾರ ನಿಖಿಲ್​ ಪ್ರತಿ ತಿಂಗಳು 1 ಲಕ್ಷ ರೂಪಾಯಿ ಹಣವನ್ನು ನಿಕ್ಕಿಗೆ ನೀಡಬೇಕು. ಇದಕ್ಕೆ ನಿಖಿಲ್​ ಒಪ್ಪಿದ್ದರು. ಆದರೆ, ಈವರೆಗೆ ಒಂದು ರೂಪಾಯಿ ಹಣವನ್ನು ಕೂಡ ಅವರು ನಿಕ್ಕಿಗೆ ಹಿಂದಿರುಗಿಸಿಲ್ಲ. ಇನ್ನು, ನಿಕ್ಕಿ ಕರೆ ಮಾಡಿದರೂ ಕೂಡ ನಿಖಿಲ್​ ಕಾಲ್​ ಸ್ವೀಕರಿಸುತ್ತಿಲ್ಲವಂತೆ. ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದು, ನೋಟಿಸ್​ ನೀಡಿದ್ದಾರೆ.

ನಿಕ್ಕಿ ಗಲ್ರಾನಿ 2014ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಕನ್ನಡ ತಮಿಳು, ಮಲಯಾಳಂ ಸೇರಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಿಕ್ಕಿ ನಟಿಸಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ನಿಕ್ಕಿ ಹೆಚ್ಚು ಪರಿಚಿತರಾಗಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಸಂಜನಾ ಗಲ್ರಾನಿ ಹೆಸರು ಮಾಡಿದ್ದಾರೆ. ಆದರೆ, ಅವರು ಡ್ರಗ್​ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇದು ಅವರ ಸಿನಿಮಾ ಕೆರಿಯರ್​ಗೆ ದೊಡ್ಡ ಹೊಡೆತ ನೀಡಿತ್ತು.

ಇದನ್ನೂ ಓದಿ: ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು

ಹೇಗಿದ್ದೆ, ಹೇಗಾದೆ; ಟಮ್ಮಿ ಫ್ಯಾಟ್​ ತೋರಿಸಿ ಸಂಜನಾ ಗಲ್ರಾನಿ ಹೇಳಿದ್ದೇನು?

Click on your DTH Provider to Add TV9 Kannada