AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಷ್ಣವಿ ಮಾಡಿದ ತಪ್ಪಿಗೆ ತಪ್ಪಲಿಲ್ಲ ಕಠಿಣ ಶಿಕ್ಷೆ; ಮನೆಯವರಿಗೆ ಸುಸ್ತೋ ಸುಸ್ತು

ವೈಷ್ಣವಿ ಅವರ ಜೋಕ್​ ಕೇಳಿ ಶುಭಾ ಪೂಂಜಾ ಅಸಮಾಧಾನಗೊಂಡಿದ್ದಾರೆ. ಇಷ್ಟೊಂದು ಕೆಟ್ಟ ಜೋಕ್​ ಅನ್ನು ನಾನು ನನ್ನ ಜೀವಮಾನದಲ್ಲೇ ಕೇಳಿಲ್ಲ. ಅವರಿಗೆ ಒಂದು ವಾರ ನೀರನ್ನೇ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ವೈಷ್ಣವಿ ಮಾಡಿದ ತಪ್ಪಿಗೆ ತಪ್ಪಲಿಲ್ಲ ಕಠಿಣ ಶಿಕ್ಷೆ; ಮನೆಯವರಿಗೆ ಸುಸ್ತೋ ಸುಸ್ತು
ವೈಷ್ಣವಿ ಗೌಡ
ರಾಜೇಶ್ ದುಗ್ಗುಮನೆ
|

Updated on:Apr 19, 2021 | 5:13 PM

Share

ಬಿಗ್​ ಬಾಸ್​ ಮನೆಯಲ್ಲಿ ಏನೇ ತಪ್ಪು ಮಾಡಿದರೂ ಅದಕ್ಕೊಂದು ಶಿಕ್ಷೆ ಇದ್ದೇ ಇರುತ್ತದೆ. ಬಿಗ್​ ಬಾಸ್​ ಸ್ಪರ್ಧಿಗಳು ಆದಷ್ಟು ತಪ್ಪು ಮಾಡದಿರಲಿ ಎಂಬುದನ್ನು ನೋಡಿಕೊಳ್ಳೋಕೇ ಈ ರೀತಿ ಮಾಡಲಾಗುತ್ತಿದೆ. ಈಗ ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ತಪ್ಪೊಂದು ಮಾಡಿದ್ದಾರೆ. ಅದಕ್ಕೆ ಶಿಕ್ಷೆ ಕೂಡ ಸಿಕ್ಕಿದೆ. ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಕಿಚನ್​ನಲ್ಲಿ ಪಾತ್ರೆ ತೊಳೆಯುವ ಕೆಲಸದಲ್ಲಿ ಮಗ್ನರಾಗಿದ್ದರು. ಈ ವೇಳೆ ಗಾಜಿನ ಲೋಟ​ ಒಂದು ಒಡೆದು ಹೋಗಿದೆ. ಆಗ ರಘು, ನೀನು ಕಪ್​ ಒಡೆದು ಹಾಕಿದ್ದೀಯಾ. ನಿನಗೆ ಶಿಕ್ಷೆ ಖಂಡಿತ. ಬಿಗ್​ ಬಾಸ್​ ಇವರಿಗೆ ಕಠಿಣ ಶಿಕ್ಷೆ ನೀಡಿ ಎಂದು ಕೋರಿದ್ದರು. ವೈಷ್ಣವಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ಈ ವೇಳೆ ಬಿಗ್​ ಬಾಸ್ ಬಳಿ ಕ್ಷಮೆ ಕೂಡ ಕೇಳಿದ್ದಾರೆ.

ಈಗ ಬಿಗ್​ ಬಾಸ್​ ವೈಷ್ಣವಿಗೆ ಶಿಕ್ಷೆ ನೀಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ನಿಮಗೆ ನೀರು ಕುಡಿಯಬೇಕು ಎಂದರೆ ಮನೆಯ ಸದಸ್ಯರಿಗೆ ಒಂದು ಜೋಕ್​ ಹೇಳಬೇಕು. ಅಂದಾಗ ಮಾತ್ರ ನೀವು ನೀರು ಕುಡಿಯಬಹುದು ಎಂದು ಬಿಗ್​ ಬಾಸ್​ ಹೇಳಿದ್ದಾರೆ.  ಅವರು ಬಿಗ್​ ಬಾಸ್​ ಮನೆಯಲ್ಲಿ ಜೋಕ್​ ಹೇಳೋಕೆ ಒದ್ದಾಡಿದ್ದಾರೆ. ಮನೆಯವರು ವೈಷ್ಣವಿ ನಗು ಬಾರದ ಜೋಕ್​ ಕೇಳಿ ಕೇಳಿ ಸುಸ್ತ್​ ಆಗಿದ್ದಾರೆ.

ವೈಷ್ಣವಿ ಅವರ ಜೋಕ್​ ಕೇಳಿ ಶುಭಾ ಪೂಂಜಾ ಅಸಮಾಧಾನಗೊಂಡಿದ್ದಾರೆ. ಇಷ್ಟೊಂದು ಕೆಟ್ಟ ಜೋಕ್​ ಅನ್ನು ನಾನು ನನ್ನ ಜೀವಮಾನದಲ್ಲೇ ಕೇಳಿಲ್ಲ. ಅವರಿಗೆ ಒಂದು ವಾರ ನೀರನ್ನೇ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು, ವೈಷ್ಣವಿ ಜೋಕ್​ ಕೇಳಿ ಮಂಜು ಕೂಡ ಗಾಬರಿ ಆಗಿದ್ದಾರೆ. ಈ ಎಪಿಸೋಡ್​ ಇಂದು (ಏಪ್ರಿಲ್​ 19) ರಂದು ಪ್ರಸಾರವಾಗಲಿದೆ. ವೈಷ್ಣವಿ ಅವರ ಜೋಕ್​ ಕೇಳಿ ಯಾರ್ಯಾರ ಕಿವಿಯಲ್ಲಿ ರಕ್ತ ಬಂತು ಎಂಬುದು ಗೊತ್ತಿಲ್ಲ ಎಂದು ವೀಕ್ಷಕರು ಕಮೆಂಟ್​ ಹಾಕಿದ್ದಾರೆ.

ಇದನ್ನೂ ಓದಿ: ಒಮ್ಮೊಮ್ಮೆ ಕೊಲೆ ಮಾಡಬೇಕು ಅನಿಸುತ್ತೆ; ರಘು ಗೌಡ ಹೀಗೆ ಹೇಳಿದ್ದು ಯಾರಿಗೆ?

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

Published On - 5:11 pm, Mon, 19 April 21

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ