ಫಿಲ್ಮ್​ಫೇರ್​ ವೇದಿಕೆ ಹತ್ತಲಾಗದೆ ಬೇಸರಗೊಂಡ ಜಾನ್ವಿ ಕಪೂರ್​ ಮಾಡಿದ್ದೇನು? ವಿಡಿಯೋ ವೈರಲ್

ಫಿಲ್ಮ್​ಫೇರ್​ ವೇದಿಕೆ ಹತ್ತಲಾಗದೆ ಬೇಸರಗೊಂಡ ಜಾನ್ವಿ ಕಪೂರ್​ ಮಾಡಿದ್ದೇನು? ವಿಡಿಯೋ ವೈರಲ್
ಜಾಹ್ನವಿ ಕಪೂರ್

ಕೊರೊನಾ ವೈರಸ್ ಎರಡನೆ ಅಲೆ ಕಾರಣದಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಅನೇಕ ಚಿತ್ರಗಳ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಇದರಿಂದ ಕೆಲವರು ಮನೆಯಲ್ಲೇ ಕೂತಿದ್ದಾರೆ. ಇದಕ್ಕೆ ಜಾನ್ವಿ ಕಪೂರ್​ ಕೂಡ ಹೊರತಾಗಿಲ್ಲ.

Rajesh Duggumane

|

Apr 19, 2021 | 7:29 PM

ಜಾನ್ವಿ ಕಪೂರ್​ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್​ ಮಗಳು. ಸ್ಟಾರ್​ ಕುಡಿ ಎನ್ನುವ ಕಾರಣಕ್ಕೆ ಅವರಿಗೆ ಬಾಲಿವುಡ್​ನಲ್ಲಿ ಸಾಕಷ್ಟು ಆಫರ್​ಗಳು ಹರಿದು ಬಂದಿವೆ. ಆದರೆ ಅವರಿಗೆ ಯಶಸ್ಸು ಕೈಹಿಡಿದಿಲ್ಲ. ಈಗ ಜಾನ್ವಿಗೆ ಬೇಸರವೊಂದು ಕಾಡಿದೆ. ಇದನ್ನು ಅವರು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್ ಎರಡನೆ ಅಲೆ ಕಾರಣದಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಅನೇಕ ಚಿತ್ರಗಳ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಇದರಿಂದ ಕೆಲವರು ಮನೆಯಲ್ಲೇ ಕೂತಿದ್ದಾರೆ. ಇದಕ್ಕೆ ಜಾನ್ವಿ ಕಪೂರ್​ ಕೂಡ ಹೊರತಾಗಿಲ್ಲ. ಅವರು ಸದ್ಯ ಗೆಳತಿಯರ ಜತೆ ಸಮಯ ಕಳೆಯುತ್ತಿದ್ದಾರೆ. ಈಗ ಅವರು ಹೊಸ ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಜಾನ್ವಿ ಸಖತ್​ ಆಗಿ ಸ್ಟೆಪ್​ ಹಾಕಿದ್ದಾರೆ. ಅವರ ಗೆಳತಿ ಕೂಡ ಇವರಿಗೆ ಸಾತ್ ನೀಡಿದ್ದಾರೆ. ಅವರ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಈ ವಿಡಿಯೋಗೆ ಅವರು ನೀಡಿದ ಕ್ಯಾಪ್ಶನ್​ ಸಾಕಷ್ಟು ಗಮನಸೆಳೆಯುತ್ತಿದೆ. ಫಿಲ್ಮ್​​ಫೇರ್​​ ಸ್ಟೇಜ್​ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಹೀಗಾಗಿ, ಕೊಳದ ಪಕ್ಕದಲ್ಲಿ ಡ್ಯಾನ್ಸ್​ ಮಾಡಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್​​ಗೆ ಯಾಕೋ ಪದೇಪದೇ ಅದೃಷ್ಟ ಕೈ ಕೊಡುತ್ತಿದೆ. ನಟಿಸಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಮೊದಲ ಸಿನಿಮಾ ‘ಧಡಕ್​’ ಬಳಿಕ ಅವರಿಗೆ ಮತ್ತೆ ದೊಡ್ಡ​ ಗೆಲುವು ಸಿಗಲೇ ಇಲ್ಲ. ‘ಗುಂಜನ್​ ಸಕ್ಸೇನಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ ಸಿನಿಪ್ರಿಯರು ಅದಕ್ಕೆ ಮೆಚ್ಚುಗೆ ಸೂಚಿಸಿಲ್ಲ. ಇತ್ತೀಚೆಗೆ ತೆರೆಕಂಡ ರೂಹಿ ಸಿನಿಮಾ ಮೊದಲ ದಿನವೇ ಪೈರಸಿ ಹಾವಳಿಗೆ ತುತ್ತಾಗಿ ನೆಲಕಚ್ಚಿತು. ಆ ಯಾವ ಸೋಲುಗಳನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ಜಾನ್ವಿ, ಸದ್ಯಕ್ಕೆ ವಿದೇಶದಲ್ಲಿ ಮೋಜು ಮಾಡುತ್ತಿದ್ದಾರೆ.

ಇದನ್ನೂ ಓದಿ: ಶ್ರೀದೇವಿ ಬರೆದ ಹಾರೈಕೆ ಪತ್ರವನ್ನು ಹಂಚಿಕೊಂಡು ಭಾವುಕರಾದ ಜಾಹ್ನವಿ ಕಪೂರ್​

2.74 ಲಕ್ಷ ಬೆಲೆಯ ಉಡುಪು ಧರಿಸಿದ ನಟಿ ಜಾಹ್ನವಿ ಕಪೂರ್

Follow us on

Related Stories

Most Read Stories

Click on your DTH Provider to Add TV9 Kannada