ಶ್ರೀದೇವಿ ಬರೆದ ಹಾರೈಕೆ ಪತ್ರವನ್ನು ಹಂಚಿಕೊಂಡು ಭಾವುಕರಾದ ಜಾಹ್ನವಿ ಕಪೂರ್
Sridevi's 3rd Death Anniversary: ತಾಯಿ ಬರೆದ ಹಾರೈಕೆ ಪತ್ರವನ್ನು ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ಗೆ, ಮಿಸ್ ಯು ಎಂದು ಬರೆದುಕೊಂಡಿದ್ದಾರೆ.
Updated on: Feb 24, 2021 | 2:09 PM

ಬಾಲಿವುಡ್ನ ಖ್ಯಾತ ನಟಿ ಶ್ರೀದೇವಿ ಅವರು ಮೃತಪಟ್ಟು ಇಂದಿಗೆ (ಫೆ.24) ಮೂರು ವರ್ಷ. ಅವರ ಪುಣ್ಯತಿಥಿಯನ್ನು ಕುಟುಂಬದವರು ನಡೆಸಿದ್ದಾರೆ. ಅವರ ಅಗಲಿಕೆಯನ್ನು ಬಾಲಿವುಡ್ ಸ್ಟಾರ್ಗಳು ನೆನೆದು ಬೇಸರ ಹೊರಹಾಕಿದ್ದಾರೆ.

ತಾಯಿ ಬರೆದ ಹಾರೈಕೆ ಪತ್ರವನ್ನು ಮಗಳು ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಿಸ್ ಯು ಎಂದಿದ್ದಾರೆ.

ಐ ಲವ್ ಯು ಲಬ್ಬು. ನೀನು ವಿಶ್ವದ ಅತ್ಯುತ್ತಮ ಮಗು ಎಂದು ಶ್ರೀದೇವಿ ಬರೆದಿದ್ದರು. ಈ ಪತ್ರವನ್ನು ಜಾಹ್ನವಿ ಹಂಚಿಕೊಂಡಿದ್ದಾರೆ.

2018ರಲ್ಲಿ ಶ್ರೀದೇವಿ ದುಬೈಗೆ ತೆರಳಿದ್ದಾಗ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಬಾತ್ ಟಬ್ನಲ್ಲಿ ಮುಳುಗಿ ಮೃತಪಟ್ಟಿದ್ದರು.

ಅವರ ಮೃತಪಟ್ಟ ವಿಚಾರ ಅಭಿಮಾನಿಗಳಿಗೆ ಶಾಕ್ ನೀಡಿತ್ತು.

ಬೋನಿ ಕಪೂರ್, ಜಾಹ್ನವಿ ಕಪೂರ್ ಹಾಗೂ ಖುಷಿ ಕಪೂರ್ ಪುಣ್ಯ ತಿಥಿಯಂದು ಪೂಜೆ ನೆರವೇರಿಸಿದ್ದಾರೆ.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



