- Kannada News Sports 700 ಕೋಟಿ ವೆಚ್ಚ, 1 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಕೂರುವ ಸಾಮರ್ಥ್ಯ, 3D ಥಿಯೇಟರ್, ಅಬ್ಬಬ್ಬಾ.! ಕ್ರಿಕೆಟ್ ಸ್ವರ್ಗ ಮೊಟೆರಾ ಕ್ರೀಡಾಂಗಣದ Photos ನೋಡಿ
700 ಕೋಟಿ ವೆಚ್ಚ, 1 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಕೂರುವ ಸಾಮರ್ಥ್ಯ, 3D ಥಿಯೇಟರ್, ಅಬ್ಬಬ್ಬಾ.! ಕ್ರಿಕೆಟ್ ಸ್ವರ್ಗ ಮೊಟೆರಾ ಕ್ರೀಡಾಂಗಣದ Photos ನೋಡಿ
Motera Stadium: 63 ಎಕರೆ ಪ್ರದೇಶದಲ್ಲಿ ಹರಡಿರುವ, 700 ಕೋಟಿ ವೆಚ್ಚದಲ್ಲಿ ಮೊಟೆರಾ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ ಒಲಿಂಪಿಕ್ ಗಾತ್ರದ ಈಜುಕೊಳ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ. ಕ್ರೀಡಾಂಗಣದಲ್ಲಿ 4 ಡ್ರೆಸ್ಸಿಂಗ್ ಕೊಠಡಿಗಳಿವೆ.
Updated on:Feb 24, 2021 | 6:59 PM


63 ಎಕರೆ ಪ್ರದೇಶದಲ್ಲಿ ಹರಡಿರುವ, 700 ಕೋಟಿ ವೆಚ್ಚದಲ್ಲಿ ಮೊಟೆರಾ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ ಒಲಿಂಪಿಕ್ ಕ್ರೀಡೆಯಲ್ಲಿ ಬಳಸುವಂತಹ, ಅದೇ ಸಾಮಥ್ರ್ಯದ ಈಜುಕೊಳ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ. ಕ್ರೀಡಾಂಗಣದಲ್ಲಿ 4 ಡ್ರೆಸ್ಸಿಂಗ್ ಕೊಠಡಿಗಳಿವೆ.

ಪ್ರೇಕ್ಷಕರ ಸಾಮರ್ಥ್ಯಕ್ಕೆ ಅನುಗುಣವಾಗಿ ಮೊಟೆರಾ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಈ ಕ್ರೀಡಾಂಗಣದಲ್ಲಿ, ಒಂದು ಲಕ್ಷ 10 ಸಾವಿರ ಪ್ರೇಕ್ಷಕರು ಒಂದೇ ಸಮಯದಲ್ಲಿ ಪಂದ್ಯವನ್ನು ಆನಂದಿಸಬಹುದು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣವು 90 ಸಾವಿರ ಪ್ರೇಕ್ಷಕರು ವೀಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ವಿಷಯದಲ್ಲಿ ಮುಂಚೂಣಿಯಲ್ಲಿತ್ತು.

ಪ್ರಯಾಣದ ಸುಲಭಕ್ಕಾಗಿ, ಕ್ರೀಡಾಂಗಣವನ್ನು ಅಹಮದಾಬಾದ್ ಮೆಟ್ರೊದೊಂದಿಗೆ ಸಂಪರ್ಕಿಸಲಾಗಿದೆ. ಟ್ರಾಫಿಕ್ ಜಾಮ್ಗಳಲ್ಲಿ ಸಿಲುಕಿಕೊಳ್ಳದೆ ಅಭಿಮಾನಿಗಳು ಮೈದಾನಕ್ಕೆ ಆರಾಮವಾಗಿ ತಲುಪಬಹುದಾಗಿದೆ.

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ

ಭಾರತದ ಯಾವುದೇ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಎಲ್ಇಡಿ ದೀಪಗಳನ್ನು ಬಳಸಲಾಗಿಲ್ಲ. ಮೊಟೆರಾ ಕ್ರೀಡಾಂಗಣದಲ್ಲಿ ಎಲ್ಇಡಿ ದೀಪಗಳನ್ನು ಬಳಸಲಾಗಿದೆ. ಎಲ್‌ಇಡಿ ದೀಪಗಳಿಂದಾಗಿ, ಆಟಗಾರರಿಗೆ ರಾತ್ರಿ ಪಂದ್ಯಗಳಲ್ಲಿ ಚೆಂಡು ಸ್ಪಷ್ಟವಾಗಿ ಕಾಣುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಎಲ್ಇಡಿ ದೀಪಗಳ ಬಳಕೆಯು ನೆರಳುಗಳನ್ನು ಪ್ರತಿಬಿಂಬಿಸುವುದಿಲ್ಲ

ಮೊಟೆರಾ ಕ್ರೀಡಾಂಗಣ

ಇತರ ಕೆಲವು ಸ್ಥಳಗಳಿಗಿಂತ ಭಿನ್ನವಾಗಿ, ಮೊಟೆರಾ ಕ್ರೀಡಾಂಗಣವು ಪ್ರತಿ ಸ್ಟ್ಯಾಂಡ್‌ನಲ್ಲಿ ಫುಡ್ ಕೋರ್ಟ್ ಹೊಂದಿದೆ.

ಒಟ್ಟು 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಪಾರ್ಕಿಂಗ್ ವ್ಯವಸ್ಥೆ ಈ ಕ್ರೀಡಾಂಗಣದಲ್ಲಿದೆ. ಕ್ರೀಡಾಂಗಣದೊಳಗಿನ ಅಭಿಮಾನಿಗಳ ಸಾಮರ್ಥ್ಯ ಮಾತ್ರವಲ್ಲ, ಪಾರ್ಕಿಂಗ್ ಸ್ಥಳವೂ ಬಹಳ ದೊಡ್ಡದಾಗಿದೆ.
Published On - 4:48 pm, Tue, 23 February 21



















