India vs England: ಪಿಂಕ್ ಬಾಲ್ ಆರಂಭದಲ್ಲಿ ಸಾಕಷ್ಟು ಸ್ವಿಂಗ್ ಆಗಲಿದೆ..! ಮೊಟೆರಾ ಕ್ರೀಡಾಂಗಣದ ಹವಾಮಾನ, ಪಿಚ್ ವರದಿ ಹೀಗಿದೆ
India vs England: ಮೊಟೆರಾ ಕ್ರೀಡಾಂಗಣದಲ್ಲಿ 11 ಮಣ್ಣಿನ ಪಿಚ್‌ಗಳಿವೆ. ಆರು ಕೆಂಪು ಮಣ್ಣಿನಿಂದ ಮಾಡಲ್ಪಟ್ಟಿದ್ದರೆ, ಐದು ಪಿಚ್ಗಳನ್ನು ಕಪ್ಪು ಮಣ್ಣಿನಿಂದ ಮಾಡಲಾಗಿದೆ. ಮುಖ್ಯ ಮತ್ತು ಅಭ್ಯಾಸ ಪಿಚ್‌ಗಳಿಗಾಗಿ ಎರಡೂ ಬಣ್ಣದ ಜೇಡಿಮಣ್ಣನ್ನು ಬಳಸಿದ ಮೊದಲ ಕ್ರೀಡಾಂಗಣ ಇದಾಗಿದೆ.
ಅಹಮದಾಬಾದ್: ಮೊಟೆರಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪ್ರಸಕ್ತ ಟೆಸ್ಟ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯವು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಪಿಂಕ್ ಬಾಲ್ ಜೊತೆ ಆಡುವ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಗಿರುತ್ತದೆ. ಮುಂಬರುವ ಟೆಸ್ಟ್‌ನಲ್ಲಿ ಶಾರ್ದುಲ್ ಠಾಕೂರ್ ಬದಲಿಗೆ ಉಮೇಶ್ ಯಾದವ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕೆ.ಎಲ್. ರಾಹುಲ್ ಕೂಡ ತಂಡಕ್ಕೆ ವಾಪಸ್ಸಾಗಲು ಇದು ಸೂಕ್ತ ಸಮಯವಾಗಿದೆ. ಇಂಗ್ಲೆಂಡ್ ತಂಡದ ಪ್ರಕಾರ, ಮೊಯಿನ್ ಅಲಿಯ ಅಲಭ್ಯತೆಯೊಂದಿಗೆ ತಂಡವು ಸರಣಿಯ ಕೊನೆಯ ಎರಡು ಟೆಸ್ಟ್‌ಗಳನ್ನು ಎದುರಿಸಬೇಕಾಗಿದೆ. ಆದಾಗ್ಯೂ, ಜಾನಿ ಬೈರ್‌ಸ್ಟೋವ್ ಮತ್ತು ಮಾರ್ಕ್ ವುಡ್ ತಂಡಕ್ಕೆ ಮರಳಿದ್ದಾರೆ.
ಪ್ರಸ್ತುತ, ಸರಣಿಯನ್ನು ಎರಡು ತಂಡಗಳು 1-1 ರಿಂದ ಸಮಗೊಳಿಸಲಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ತಲುಪಲು ಎರಡೂ ತಂಡಗಳಿಗೆ ಇದು ಬಹುಮುಖ್ಯ ಪಂದ್ಯವಾಗಿದೆ.
ಅಹಮದಾಬಾದ್ ಹವಾಮಾನ ಮುನ್ಸೂಚನೆ ಅಹಮದಾಬಾದ್‌ನಲ್ಲಿನ ಹವಾಮಾನವು ಎಲ್ಲಾ ಐದು ದಿನಗಳಲ್ಲಿ ಬಿಸಿಯಾಗಿ ಮತ್ತು ಬಿಸಿಲಿನಿಂದ ಕೂಡಿರುತ್ತದೆ. ಸರಾಸರಿ ತಾಪಮಾನವು ಸುಮಾರು 36 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅಲ್ಲದೆ ಟೆಸ್ಟ್ ನಡೆಯುವ ದಿನಗಳಲ್ಲಿ ಯಾವುದೇ ಮಳೆಯಾಗುವ ನಿರೀಕ್ಷೆಯಿಲ್ಲ ಎಂದು ತಿಳಿದುಬಂದಿದೆ.
ಮೊಟೆರಾ ಪಿಚ್ ವರದಿ ಮೊಟೆರಾ ಕ್ರೀಡಾಂಗಣದಲ್ಲಿ 11 ಮಣ್ಣಿನ ಪಿಚ್‌ಗಳಿವೆ. ಆರು ಕೆಂಪು ಮಣ್ಣಿನಿಂದ ಮಾಡಲ್ಪಟ್ಟಿದ್ದರೆ, ಐದು ಪಿಚ್ಗಳನ್ನು ಕಪ್ಪು ಮಣ್ಣಿನಿಂದ ಮಾಡಲಾಗಿದೆ. ಮುಖ್ಯ ಮತ್ತು ಅಭ್ಯಾಸ ಪಿಚ್‌ಗಳಿಗಾಗಿ ಎರಡೂ ಬಣ್ಣದ ಜೇಡಿಮಣ್ಣನ್ನು ಬಳಸಿದ ಮೊದಲ ಕ್ರೀಡಾಂಗಣ ಇದಾಗಿದೆ.
ವಿಕೆಟ್, ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪಿಚ್ ಟೀಂ ಇಂಡಿಯಾಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಪಿಂಕ್ ಬಾಲ್ ಆರಂಭದಲ್ಲಿ ಸಾಕಷ್ಟು ಸ್ವಿಂಗ್ ಆಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಎರಡೂ ಕಡೆಯವರು ತಮ್ಮ ಸ್ವಿಂಗ್ ಬೌಲರ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ:India vs England: Pink Ball ಟೆಸ್ಟ್ಗಾಗಿ ಮೈದಾನದಲ್ಲಿ ಬೆವರು ಹರಿಸಿದ ವಿರಾಟ್ ಪಡೆ
Published On - 6:05 pm, Tue, 23 February 21