AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC World Test Championship: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ ತಲುಪಲು ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳಿಗಿರುವ ಅವಕಾಶಗಳೇನು ಗೊತ್ತಾ?

ICC World Test Championship: ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯನ್ನು ಮುಂದೂಡಿದ ನಂತರ, ನ್ಯೂಜಿಲೆಂಡ್ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್‌ಗಳಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ. ಹೀಗಾಗಿ ಉಳಿದ ಇನ್ನೊಂದು ಸ್ಥಾನಕ್ಕಾಗಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ನ್ಯೂಜಿಲೆಂಡ್ ಎದುರು ಸೆಣೆಸಾಡಲು ಪೈಪೋಟಿ ನಡೆಸುತ್ತಿವೆ.

ICC World Test Championship: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ ತಲುಪಲು ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳಿಗಿರುವ ಅವಕಾಶಗಳೇನು ಗೊತ್ತಾ?
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on:Feb 23, 2021 | 3:43 PM

Share

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯನ್ನು ಮುಂದೂಡಿದ ನಂತರ, ನ್ಯೂಜಿಲೆಂಡ್ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್‌ಗಳಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ. ಹೀಗಾಗಿ ಉಳಿದ ಇನ್ನೊಂದು ಸ್ಥಾನಕ್ಕಾಗಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಹೋರಾಟ ನಡೆಸಬೇಕಿವೆ.. ನ್ಯೂಜಿಲೆಂಡ್ ಎದುರು ಸೆಣೆಸಾಡಲು ಪೈಪೋಟಿ ನಡೆಸಲಿವೆ. ಟೂರ್ನಿಯಲ್ಲಿ 11 ಪಂದ್ಯಗಳನ್ನು ಆಡಿದ ನ್ಯೂಜಿಲೆಂಡ್ ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ 2-1 ಸರಣಿಯ ವಿಜಯೋತ್ಸವದ ನಂತರ ಟೀಂ ಇಂಡಿಯಾ 460 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇದುವರೆಗೆ 15 ಟೆಸ್ಟ್​ ಪಂದ್ಯಗಳನ್ನಾಡಿರುವ ಭಾರತ 10 ರಲ್ಲಿ ಗೆದ್ದು, 4 ಪಂದ್ಯಗಳನ್ನು ಸೋತಿದೆ. 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 14 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ತಂಡ 8ರಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ 332 ಅಂಕಗಳೊಂದಿಗೆ 3 ನೇ ಸ್ಥಾನದಲ್ಲಿದೆ. ಹಾಗೆಯೇ 442 ಅಂಕಗಳೊಂದಿಗೆ​ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಾನು ಆಡಿರುವ 19 ಪಂದ್ಯಗಳಲ್ಲಿ, 11 ಪಂದ್ಯಗಳನ್ನ ಗೆದ್ದು, 5 ಪಂದ್ಯಗಳಲ್ಲಿ ಸೋತು, 3 ಪಂದ್ಯಗಳನ್ನ ಡ್ರಾ ಮಾಡಿಕೊಂಡಿದೆ. ಆದರಿಂದ ಫೈನಲ್​ಗಾಗಿ ಈ ಮೂರು ತಂಡಗಳು ಸ್ಪರ್ಧೆಯಲ್ಲಿವೆ.

ಈ ಮೂರು ತಂಡಗಳಲ್ಲಿ ಯಾವ ತಂಡ ಫೈನಲ್​ ತಲುಪಲಿದೆ ಎಂಬುದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಸರಣಿಯ ಮೇಲೆ ಅವಲಂಬಿತವಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಹಂತದ ಅರ್ಹತಾ ಸನ್ನಿವೇಶಗಳನ್ನು ಕೆಳಗೆ ನೀಡಲಾಗಿದೆ.

ಭಾರತ ಉಳಿದ ಪಂದ್ಯಗಳು: ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್ ಟೀಂ ಇಂಡಿಯಾ 460 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಫೈನಲ್‌ಗೆ ಪ್ರವೇಶಿಸಲು, ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಕನಿಷ್ಠ 2-0 ಅಂತರದಿಂದ ಸರಣಿಯನ್ನು ಗೆಲ್ಲಬೇಕಾಗುತ್ತದೆ.

2-0, 2-1, 3-0, 3-1, 4-0 ಈ ಸ್ಕೋರ್‌ಲೈನ್‌ಗಳ ಪ್ರಕಾರ ಭಾರತ ಸರಣಿ ಗೆದ್ದರೇ, ಫೈನಲ್‌ಗೆ ಅರ್ಹತೆ ಪಡೆಯುವ ಸಾದ್ಯತೆ ಇದೆ.

ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಮುಂದೂಡುವುದರೊಂದಿಗೆ, ಆಸ್ಟ್ರೇಲಿಯಾದ ಭವಿಷ್ಯವು ಇತರ ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ. ಆದರೂ ಭಾರತ- ಇಂಗ್ಲೆಂಡ್‌ ನಡುವಿನ ಸರಣಿಯ ಫಲಿತಾಂಶದಿಂದಾಗುವ ಕ್ರಮಪಲ್ಲಟಗಳು ಆಸ್ಟ್ರೇಲಿಯಾ ತಂಡದ ಫೈನಲ್​ ಕನಸನ್ನು ನಿರ್ಧಾರ ಮಾಡಲಿವೆ.

ಆಸ್ಟ್ರೇಲಿಯಾದ ಫೈನಲ್ ಪ್ರವೇಶಕ್ಕಿರುವ ಅವಕಾಶಗಳು ಟೀಂ ಇಂಡಿಯಾ ವಿರುದ್ಧ, ಇಂಗ್ಲೆಂಡ್ 0-1, 0-2, ಮತ್ತು 1-2ರಿಂದ ಜಯ ಸಾಧಿಸಬೇಕು. ಅಥವಾ ಭಾರತ 1-0 ಅಂತರದಿಂದ ಇಂಗ್ಲೆಂಡ್‌ ವಿರುದ್ಧ ಜಯ ಸಾಧಿಸಬೇಕು. ಅಲ್ಲದೆ ಸರಣಿಯು ಡ್ರಾನಲ್ಲಿ ಕೊನೆಗೊಂಡರೆ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಬಹುದಾಗಿದೆ.

ಇಂಗ್ಲೆಂಡ್ ಉಳಿದ ಪಂದ್ಯಗಳು: ಭಾರತದಲ್ಲಿ ನಾಲ್ಕು ಟೆಸ್ಟ್ ಫೈನಲ್ ಪಂದ್ಯವನ್ನು ಆಡಬೇಕಾದರೆ ಇಂಗ್ಲೆಂಡ್ ತಂಡದ ಮುಂದೆ ಒಂದು ದೊಡ್ಡ ಸವಾಲಿದೆ. ಭಾರತ ವಿರುದ್ಧ ಸರಣಿಯಲ್ಲಿ ಗೆಲುವು ಸಾಧಿಸಿದ್ದೇ ಆದರೆ ಇಂಗ್ಲೆಂಡ್ ತಂಡ ಫೈನಲ್​ಗೆ ತಲುಲುವಲ್ಲಿ ಸಹಾಯಕವಾಗಲಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಕನಿಷ್ಠ ಮೂರು ಪಂದ್ಯಗಳನ್ನು ಗೆಲ್ಲಬೇಕು. ಹಾಗಾದರೆ ಮಾತ್ರ ಇಂಗ್ಲೆಂಡ್, ಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಎದುರಿಸುವ ಅವಕಾಶ ಸಿಗಲಿದೆ. ಅಂದರೆ, ಇಂಗ್ಲೆಂಡ್ ತಂಡ 0-4, 0-3 ಅಥವಾ 1-3 ಅಂತರದಿಂದ ಸರಣಿ ಗೆಲ್ಲಲೇಬೇಕು.

ಇದನ್ನೂ ಓದಿ:India vs England: 3ನೇ ಟೆಸ್ಟ್​ಗೆ ಬುಮ್ರಾ ವಾಪಸ್​? ಟೀಂ ಇಂಡಿಯಾದ ಆಡುವ 11ರ ಬಳಗ ಹೀಗಿರಬಹುದು

Published On - 3:39 pm, Tue, 23 February 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ