India vs England: 3ನೇ ಟೆಸ್ಟ್​ಗೆ ಬುಮ್ರಾ ವಾಪಸ್​? ಟೀಂ ಇಂಡಿಯಾದ ಆಡುವ 11ರ ಬಳಗ ಹೀಗಿರಬಹುದು

India vs England: ಈ ಪಂದ್ಯವನ್ನು ಸೋತ ಒಂದು ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿಯಲಿದೆ. ಇಂಗ್ಲೆಂಡ್ ಗೆದ್ದರೆ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಜೀವಂತವಾಗಿ ಉಳಿಯುತ್ತಾರೆ. ಆದರೆ ಭಾರತ ಗೆದ್ದರೆ, ಇಂಗ್ಲೆಂಡ್ ಎಲಿಮಿನೇಟ್ ಆಗುತ್ತದೆ.

India vs England: 3ನೇ ಟೆಸ್ಟ್​ಗೆ ಬುಮ್ರಾ ವಾಪಸ್​? ಟೀಂ ಇಂಡಿಯಾದ ಆಡುವ 11ರ ಬಳಗ ಹೀಗಿರಬಹುದು
ಸುಮಾರು ಒಂದು ವಾರದ ನಂತರ, ಭಾರತ ಹಾಗೂ ಇಂಗ್ಲೆಂಡ್‌ ಕ್ರಿಕೆಟ್ ತಂಡಗಳು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವು ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ. ಉಭಯ ತಂಡಗಳು ಸಮಬಲ (1-1) ಸಾಧಿಸಿವೆ.
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Feb 23, 2021 | 12:42 PM

ಅಹಮದಾಬಾದ್‌: ಸುಮಾರು ಒಂದು ವಾರ ಅಂತರದ ನಂತರ, ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್‌ ತಂಡಗಳು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ (Motera stadium in Ahmedabad). ವಿಶ್ವದ ಅತಿದೊಡ್ಡ ಕ್ರೀಡಾಂಗಣವು ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ. ಸರಣಿಯಲ್ಲಿ 1-1ರಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. ಇಂಗ್ಲೆಂಡ್ ಮೊದಲ ಟೆಸ್ಟ್ ಅನ್ನು ಗೆದ್ದರೆ, ಭಾರತ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದೆ. ಪಿಂಕ್ ಬಾಲ್ ಟೆಸ್ಟ್ (ಟೀಂ ಇಂಡಿಯಾದ ಎರಡನೇ ಪಿಂಕ್ ಬಾಲ್ ಟೆಸ್ಟ್ ತವರಿನಲ್ಲಿ) ಮತ್ತು ಸರಣಿಯ 3 ನೇ ಟೆಸ್ಟ್ ಒಂದು ಅನನ್ಯ ಸ್ಪರ್ಧೆಯಾಗಲಿದೆ.

ಎರಡು ತಂಡಗಳಲ್ಲಿ, ಈ ಪಂದ್ಯವನ್ನು ಸೋತ ಒಂದು ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿಯಲಿದೆ. ಇಂಗ್ಲೆಂಡ್ ಗೆದ್ದರೆ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಜೀವಂತವಾಗಿ ಉಳಿಯುತ್ತಾರೆ. ಆದರೆ ಭಾರತ ಗೆದ್ದರೆ, ಇಂಗ್ಲೆಂಡ್ ಎಲಿಮಿನೇಟ್ ಆಗುತ್ತದೆ. ಹಾಗೇನಾದರೂ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ಇಂಗ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಿಂದ ಎಲಿಮಿನೇಟ್ ಆಗುತ್ತದೆ. ನಂತರ ಭಾರತಕ್ಕೆ 4 ನೇ ಟೆಸ್ಟ್​ನಲ್ಲಿ ಗೆಲ್ಲಲೇಬೇಕಾದ ಒತ್ತಡ ಎದುರಾಗುತ್ತದೆ.

ಟೀಂ ಇಂಡಿಯಾಕ್ಕಾಗಿ ಸ್ಕ್ವಾಡ್ ನವೀಕರಣ ಟೀಂ ಇಂಡಿಯಾ ಇತ್ತೀಚೆಗೆ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ನವೀಕರಿಸಿದ ತಂಡವನ್ನು ಪ್ರಕಟಿಸಿದೆ. ಶಾರ್ದುಲ್ ಠಾಕೂರ್ ಅವರ ಸ್ಥಾನದಲ್ಲಿ ಉಮೇಶ್ ಯಾದವ್ ತಂಡದಲ್ಲಿ ಸೇರ್ಪಡೆಯಾಗಿದ್ದರಿಂದ ತಂಡವು ಕೇವಲ ಒಂದು ಬದಲಾವಣೆಯನ್ನು ಮಾತ್ರ ಮಾಡಿದೆ. ಉಮೇಶ್ ಪ್ರಸ್ತುತ ಫಿಟ್ನೆಸ್​ ತರಬೇತಿಯಲ್ಲಿದ್ದಾರೆ. ಅವರು ಫಿಟ್ ಆಗಿದ್ದರೆ, ಅವರು ಅಂತಿಮ 11 ರಲ್ಲಿ ಅವಕಾಶ ಪಡೆಯುತ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಹಗಲು-ರಾತ್ರಿ ಟೆಸ್ಟ್‌ಗೆ ಯಾವ ರೀತಿಯ ಪಿಚ್‌ಗಳನ್ನು ರೆಡಿ ಮಾಡಲಾಗುತ್ತಿದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಚೆನ್ನೈ ಪಿಚ್ ಕೆಲವು ದಂದ್ವಗಳನ್ನು ಸೃಷ್ಟಿಸಿತ್ತು. ಇದನ್ನು ಅನೇಕ ವಿಮರ್ಶಕರು ಕಳಪೆ ಪಿಚ್ ಎಂದು ಕರೆದರು. ಆದಾಗ್ಯೂ, ಅಹಮದಾಬಾದ್ ಪಿಚ್ ಇಬ್ಬರಿಗೂ ನೆರವು ನೀಡುವ ನಿರೀಕ್ಷೆಯಿದೆ.

ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗಾಗಿ ಟೀಂ ಇಂಡಿಯಾ.. ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಅಕ್ಷರ್ ಪಟೇಲ್, ಚೇತೇಶ್ವರ ಪೂಜಾರ, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೆ.ಎಲ್.ರಾಹುಲ್, ಕುಲದೀಪ್ ಯಾದವ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಸಿರಾಜ್, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್ (ವಿಕೆಟ್​ ಕೀಪರ್​), ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್ ಮತ್ತು ವೃದ್ಧಿಮಾನ್ ಸಹಾ

ಆರಂಭಿಕರು: ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇಲ್ಲಿಯವರೆಗೆ ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಎರಡೂ ಆರಂಭಿಕ ಆಟಗಾರರು ಸಿಹಿ-ಕಹಿಗಳನ್ನು ಹೊಂದಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಗಿಲ್ ಉತ್ತಮವಾಗಿ ಆಡಿದರೆ, ಎರಡನೇ ಟೆಸ್ಟ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ವೈಫಲ್ಯಗಳನ್ನು ದಾಖಲಿಸಿದರು. ಆದರೆ ಮೊದಲ ಟೆಸ್ಟ್‌ನಲ್ಲಿ ರೋಹಿತ್ ವಿಫಲವಾದರೂ ಎರಡನೇ ಟೆಸ್ಟ್‌ನಲ್ಲಿ ಫಾರ್ಮ್‌ಗೆ ಮರಳಿದರು. ಹೀಗಾಗಿ ಪಿಂಕ್-ಬಾಲ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ತಂಡಕ್ಕೆ ಗಿಲ್ ಮತ್ತು ರೋಹಿತ್ ಅಗತ್ಯವಿದೆ.

ಮಧ್ಯಮ ಕ್ರಮಾಂಕ: ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಸರಣಿಯಲ್ಲಿ ಉತ್ತಮ ಆರಂಭವನ್ನು ಹೊಂದಿಲ್ಲ. ಜೊತೆಗೆ ಪೂಜಾರಗೆ ಅದೃಷ್ಟ ಸರಿಯಾಗಿಯೇ ಕೈಕೊಡುತ್ತಿದೆ. ಹೀಗಾಗಿ ಪೂಜಾರ 3ನೇ ಟೆಸ್ಟ್​ನಲ್ಲಿ ಮಿಂಚಿ ತಮ್ಮ ಮೇಲಿರುವ ಅಪವಾದವನ್ನು ಕಳಚಿಕೊಳ್ಳಬೇಕಿದೆ. ಅಲ್ಲದೆ ಕೊಹ್ಲಿ ಕೂಡ ಶತಕಗಳ ಬರ ಎದುರಿಸುತ್ತಿದ್ದಾರೆ. ಕೊಹ್ಲಿ ಕೊನೆಯ ಶತಕ 2019 ರ ನವೆಂಬರ್‌ನಲ್ಲಿ ಬಂದಿತು. ಹೀಗಾಗಿ ಇಬ್ಬರೂ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಅತ್ಯುತ್ತಮವಾದ ಕೊಡುಗೆ ನೀಡಬೇಕಾಗಿದೆ.

ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಮೂಲ್ಯವಾದ ನಾಕ್ ಆಡುವ ಮೂಲಕ ಅಜಿಂಕ್ಯ ರಹಾನೆ ಸರಣಿಗೆ ಉತ್ತಮ ಆರಂಭ ನೀಡಿದ್ದರು. ನಿರ್ಣಾಯಕ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಭಾರತವು ತನ್ನ ಫಾರ್ಮ್ ಅನ್ನು ಮುಂದುವರೆಸುವ ಅವಶ್ಯಕತೆಯಿದೆ. ಮೋಟೆರಾ ಕ್ರೀಡಾಂಗಣದ ಪಿಚ್​​ ಹೆಚ್ಚು ಬೌಲರ್​ಗಳಿಗೆ ಅನುಕೂಲವಾಗಬಹುದು.

ವಿಕೆಟ್ ಕೀಪರ್: ರಿಷಭ್ ಪಂತ್ ಈ ಸರಣಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ವಿಭಾಗದಲ್ಲಿ ಅಸಾಧಾರಣವಾಗಿ ಉತ್ತಮ ಸಾಧನೆ ತೋರಿದ್ದಾರೆ. ಮಾತ್ರವಲ್ಲದೆ ಅವರ ಕೀಪಿಂಗ್ ಕೂಡ ಉನ್ನತ ದರ್ಜೆಯಲ್ಲಿದೆ. ಇದು ಭಾರತಕ್ಕೆ ಇದುವರೆಗಿನ ಸರಣಿಯಲ್ಲಿ ಸಕಾರಾತ್ಮಕವಾಗಿದೆ. ಅಲ್ಲದೆ ಈ ಪಂದ್ಯದಲ್ಲೂ ಪಂತ್​ ಮಿಂಚುವ ನಿರೀಕ್ಷೆ ಇದೆ.

ಸ್ಪಿನ್ನರ್‌ಗಳು: ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಆಲ್‌ರೌಂಡರ್‌ಗಳಾದ ಅಕ್ಷರ್ ಮತ್ತು ಅಶ್ವಿನ್ ಅವರು ಪಿಂಕ್ ಬಾಲ್ ಟೆಸ್ಟ್‌ಗಾಗಿ ಸ್ಪಿನ್ ವಿಭಾಗವನ್ನು ನಿರ್ವಹಿಸಲ್ಲಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಇಬ್ಬರ ಪ್ರದರ್ಶನ ಅದ್ಭುತವಾಗಿತ್ತು. ಅಲ್ಲದೆ ಅಶ್ವಿನ್ ಅವರ ಬ್ಯಾಟಿಂಗ್ ಅತಿದೊಡ್ಡ ಪ್ಲಸ್ ಪಾಯಿಂಟ್​ ಆಗಿತ್ತು. ಆದಾಗ್ಯೂ, ಮೂರನೇ ಟೆಸ್ಟ್‌ನಲ್ಲಿ ಬೌಲರ್‌ಗಳಿಗೆ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗಬಹುದು ಎಂಬ ಕಾರಣಕ್ಕೆ ಬ್ಯಾಟ್ಸ್‌ಮನ್ ಆಗಿರುವ ಅಕ್ಷರ್‌ನಿಂದ ತಂಡಕ್ಕೆ ಹೆಚ್ಚಿನ ಕೊಡುಗೆ ಅಗತ್ಯವಿರುತ್ತದೆ.

ಪೇಸರ್‌ಗಳು: ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಮೂರನೇ ಟೆಸ್ಟ್ ಪಂದ್ಯದ ದೊಡ್ಡ ಪ್ರಶ್ನೆಯೆಂದರೆ ಉಮೇಶ್ ಯಾದವ್ ಅವರ ಫಿಟ್‌ನೆಸ್ ಲಭ್ಯತೆ. ಅವರು ಆಡಲು ರೆಡಿಯಾಗಿದ್ದರೆ, ಕುಲದೀಪ್ ಯಾದವ್ ಬದಲಿಗೆ ಆಡುವ 11 ರಲ್ಲಿ ಅವರು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. 2 ನೇ ಟೆಸ್ಟ್‌ನಲ್ಲಿ ಕುಲದೀಪ್‌ ಅವರನ್ನು ಕೊಹ್ಲಿ ಸರಿಯಾಗಿ ಬಳಸಿಕೊಳ್ಳಲಿಲ್ಲ, ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟರೆ ಆಶ್ಚರ್ಯ ಪಡುವಂಥದ್ದೇನೂ ಇರುವುದಿಲ್ಲ.

ಒತ್ತಡವನ್ನು ಕಡಿಮೆ ಮಾಡಲು ಜಸ್ಪ್ರೀತ್ ಬುಮ್ರಾ ಅವರಿಗೆ ಎರಡನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲಾಯಿತು. ಹೀಗಾಗಿ ಅವರು ಪಿಂಕ್ ಬಾಲ್ ಟೆಸ್ಟ್​ಗೆ ಹಿಂತಿರುಗಬೇಕಿದೆ. ಪಂದ್ಯದಲ್ಲಿ ಕೇವಲ 11 ಓವರ್‌ಗಳನ್ನು ಎಸೆದ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಡಲಿದ್ದಾರಾ ಎಂಬ ಅನುಮಾನ ಶುರುವಾಗಿದೆ.

3 ನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ.. ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್​ ಕೀಪರ್​), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ.

ಇದನ್ನೂ ಓದಿ: India vs England: 3ನೇ ಟೆಸ್ಟ್​ ಪಂದ್ಯ ನಡೆಯುವ ಸ್ಥಳ, ವೀಕ್ಷಣೆ ಯಾವ ಚಾನೆಲ್​ನಲ್ಲಿ, ಆಡಬಹುದಾದ ಆಟಗಾರರ ವಿವರ ಇಲ್ಲಿದೆ