Motera Stadium: ಐತಿಹಾಸಿಕ ಟೆಸ್ಟ್​ಗೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ರೆಡಿ.. ಮೊಟೆರಾ ಕ್ರೀಡಾಂಗಣದ 10 ವಿಶೇಷತೆಗಳು ಹೀಗಿವೆ..!

Motera Stadium: ಮೊಟೆರಾ ಕ್ರೀಡಾಂಗಣವು 1,10,000 ಪ್ರೇಕ್ಷಕರು ಕೂರುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಕ್ರಿಕೆಟಿಂಗ್ ಸ್ಥಳವಾಗಿದೆ. ಅಲ್ಲದೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ಈ ಕ್ರೀಡಾಂಗಣ ಮೀರಿಸಿದೆ.

Motera Stadium: ಐತಿಹಾಸಿಕ ಟೆಸ್ಟ್​ಗೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ರೆಡಿ.. ಮೊಟೆರಾ ಕ್ರೀಡಾಂಗಣದ 10 ವಿಶೇಷತೆಗಳು ಹೀಗಿವೆ..!
ಮೊಟ್ಟೆರಾ ಕ್ರೀಡಾಂಗಣ
Follow us
ಪೃಥ್ವಿಶಂಕರ
|

Updated on:Feb 23, 2021 | 1:26 PM

ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಹೊಸ ಕ್ರಿಕೆಟ್​ ಯುಗದ ಆರಂಭವನ್ನು ಸೂಚಿಸುತ್ತಿದೆ. ಏಕೆಂದರೆ ಈ ಟೆಸ್ಟ್​ ಮೊಟ್ಟೆರಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆಸುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ (ನವೀಕರಿಸಿದ ನಂತರ). ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯದ ಕ್ರೀಡಾಂಗಣವು ಎಲ್ಲರನ್ನೂ ಆಕರ್ಷಿಸುತ್ತಿದೆ (2ನೇ ಸ್ಥಾನವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಪಡೆದುಕೊಂಡಿದೆ. ಇದು ಸುಮಾರು 1 ಲಕ್ಷ ಜನ ಕೂರುವ ಆಸನಗಳ ಸಾಮರ್ಥ್ಯ ಹೊಂದಿದೆ). ಕೋವಿಡ್ -19 ಪ್ರೋಟೋಕಾಲ್‌ಗಳಿಂದಾಗಿ ಕ್ರೀಡಾಂಗಣದ ಸಾಮರ್ಥ್ಯವನ್ನು 50% ರಷ್ಟು ಮುಚ್ಚಲಾಗಿದ್ದರೂ, 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಇಡುವ ನಿರೀಕ್ಷೆಯಿದೆ. ಏಕೆಂದರೆ ಭಾರತವು ತವರಿನಲ್ಲಿ ತನ್ನ ಎರಡನೇ ಪಿಂಕ್​ ಬಾಲ್​ ಟೆಸ್ಟ್‌ ಆಡುತ್ತಿರುವುದು ಅಭಿಮಾನಿಗಳಿಗೆ ಹಬ್ಬವಾಗಿದೆ (ಇದಕ್ಕೂ ಮೊದಲು ಟೀಂ ಇಂಡಿಯಾ,ಬಾಂಗ್ಲದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಪಿಂಕ್​ ಬಾಲ್​ ಟೆಸ್ಟ್​ ಆಡಿತ್ತು. ಅಂದಿನ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾ ವಿರುದ್ಧ ಇನ್ನಿಂಗ್ಸ್​ ಗೆಲುವು ಸಾಧಿಸಿತ್ತು).

ಸುಂದರವಾದ ಮೊಟೆರಾ ಕ್ರೀಡಾಂಗಣದ ಚಿತ್ರಗಳು ಈಗಾಗಲೇ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ. ಹೀಗಾಗಿ ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದ ಕೆಲವು ವೈಶಿಷ್ಟ್ಯಗಳ ನೋಟ ಇಲ್ಲಿದೆ..

– ಮೊಟೆರಾ ಕ್ರೀಡಾಂಗಣವು 1,10,000 ಪ್ರೇಕ್ಷಕರು ಕೂರುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಕ್ರಿಕೆಟಿಂಗ್ ಸ್ಥಳವಾಗಿದೆ. ಅಲ್ಲದೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ಈ ಕ್ರೀಡಾಂಗಣ ಮೀರಿಸಿದೆ.

– ಅಹಮದಾಬಾದ್‌ನ ಈ ಭವ್ಯ ಕ್ರೀಡಾಂಗಣವನ್ನು ನವೀಕರಿಸಲು ಒಟ್ಟು 800 ಕೋಟಿ ರೂ ವ್ಯಯಿಸಲಾಗಿದೆ. ಈ ಕ್ರೀಡಾಂಗಣದಲ್ಲಿ 1984 ರಲ್ಲಿ ಮೊದಲ ಏಕದಿನ ಪಂದ್ಯವನ್ನು ಆಯೋಜಿಸಲಾಗಿತ್ತು.

– ಒಟ್ಟು 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಪಾರ್ಕಿಂಗ್​ ವ್ಯವಸ್ಥೆ ಈ ಕ್ರೀಡಾಂಗಣದಲ್ಲಿದೆ. ಕ್ರೀಡಾಂಗಣದೊಳಗಿನ ಅಭಿಮಾನಿಗಳ ಸಾಮರ್ಥ್ಯ ಮಾತ್ರವಲ್ಲ, ಪಾರ್ಕಿಂಗ್ ಸ್ಥಳವೂ ಬಹಳ ದೊಡ್ಡದಾಗಿದೆ.

– ಈ ಸ್ಥಳದಲ್ಲಿ ಪೂರ್ಣ ಪ್ರಮಾಣದ ಕ್ರಿಕೆಟ್ ಅಕಾಡೆಮಿ, ಹಲವಾರು ಒಳಾಂಗಣ ಪಿಚ್‌ಗಳು ಮತ್ತು ಫುಟ್‌ಬಾಲ್, ಹಾಕಿ, ಬ್ಯಾಸ್ಕೆಟ್‌ಬಾಲ್ ಮುಂತಾದ ಇತರ ಕ್ರೀಡೆಗಳಿಗೆ ಹಲವಾರು ಸೌಲಭ್ಯಗಳಿವೆ.

– ಪ್ರಯಾಣದ ಸುಲಭಕ್ಕಾಗಿ, ಕ್ರೀಡಾಂಗಣವನ್ನು ಅಹಮದಾಬಾದ್ ಮೆಟ್ರೊದೊಂದಿಗೆ ಸಂಪರ್ಕಿಸಲಾಗಿದೆ. ಟ್ರಾಫಿಕ್ ಜಾಮ್​ಗಳಲ್ಲಿ ಸಿಲುಕಿಕೊಳ್ಳದೆ ಅಭಿಮಾನಿಗಳು ಮೈದಾನಕ್ಕೆ ಆರಾಮವಾಗಿ ತಲುಪಬಹುದಾಗಿದೆ.

– 63 ಎಕರೆ ಪ್ರದೇಶದಲ್ಲಿ ಹರಡಿರುವ ಕ್ರೀಡಾಂಗಣಕ್ಕೆ ಮೂರು ಪ್ರವೇಶ ಕೇಂದ್ರಗಳಿವೆ.

– ಭಾರತೀಯ ಕ್ರಿಕೆಟ್ ಕ್ರೀಡಾಂಗಣದ ಮೈದಾನದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಿರುವುದು ಇದೇ ಮೊದಲು. ಬೇರೆ ಯಾವುದೇ ಕ್ರೀಡಾಂಗಣದಲ್ಲಿ ಈ ವೈಶಿಷ್ಟ್ಯವಿಲ್ಲ.

– 55 ಕೊಠಡಿಗಳನ್ನು ಹೊಂದಿರುವ ಅಂತರ್​ನಿರ್ಮಿತ ಕ್ಲಬ್‌ಹೌಸ್ ಕ್ರೀಡಾಂಗಣದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

– ಕ್ಲಬ್‌ಹೌಸ್‌ನಲ್ಲಿ ಒಳಾಂಗಣ ಮತ್ತು ಹೊರಾಂಗಣ ಆಟಗಳು, ರೆಸ್ಟೋರೆಂಟ್‌ಗಳು, ಒಲಿಂಪಿಕ್​ಗೆ ಸೂಕ್ತವಾದ ಈಜುಕೊಳ, ಜಿಮ್ ಮತ್ತು 3 ಡಿ ಪ್ರೊಜೆಕ್ಟರ್ ಥಿಯೇಟರ್ ಇವೆ.

– ಇತರ ಕೆಲವು ಸ್ಥಳಗಳಿಗಿಂತ ಭಿನ್ನವಾಗಿ, ಮೊಟೆರಾ ಕ್ರೀಡಾಂಗಣವು ಪ್ರತಿ ಸ್ಟ್ಯಾಂಡ್‌ನಲ್ಲಿ ಫುಡ್ ಕೋರ್ಟ್ ಹೊಂದಿದೆ.

ಇದನ್ನೂ ಓದಿ:India vs England: 3ನೇ ಟೆಸ್ಟ್​ಗೆ ಬುಮ್ರಾ ವಾಪಸ್​? ಟೀಂ ಇಂಡಿಯಾದ ಆಡುವ 11ರ ಬಳಗ ಹೀಗಿರಬಹುದು

Published On - 1:12 pm, Tue, 23 February 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ