AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ವರದಿ ನೋಡಿ ಮಗುವಿನ ಚಿಕಿತ್ಸೆಗೆ ಮುಂದಾದ ಯುವಕರು: ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ಕಂದನಿಗೆ ನೆರವು

ವರದಿ ನೋಡಿದ ಬಳಿಕ ಯುವಕರು ಒಟ್ಟಾಗಿ ಆ ಕಂದಮ್ಮನ ಜೀವ ಉಳಿಸಲು ತಮ್ಮಿಂದಾದ ಸಹಾಯಕ್ಕೆ ಮುಂದಾಗಿದ್ದು, ಒಂದು ಟೂರ್ನಿಯನ್ನು ಆಯೋಜನೆ ಮಾಡಿ ಅದರಿಂದ ಬಂದ ಹಣವನ್ನು ಅಶಕ್ತ ಕಂದಮ್ಮನಿಗೆ ನೀಡಿದೆ.

ಟಿವಿ9 ವರದಿ ನೋಡಿ ಮಗುವಿನ ಚಿಕಿತ್ಸೆಗೆ ಮುಂದಾದ ಯುವಕರು: ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ಕಂದನಿಗೆ ನೆರವು
ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡ
preethi shettigar
| Updated By: ಸಾಧು ಶ್ರೀನಾಥ್​|

Updated on: Feb 23, 2021 | 12:11 PM

Share

ಉಡುಪಿ: ರಜಾದಿನ ಬಂದರೆ ಸಾಕು ಹುಡುಗರೆಲ್ಲಾ ಬ್ಯಾಟ್ ಹಿಡಿದುಕೊಂಡು ಕ್ರಿಕೆಟ್ ಆಟದಲ್ಲಿ ದಿನ ಕಳೆಯುತಾರೆ. ಟೂರ್ನಮೆಂಟ್ ಆಯೋಜಿಸಿ, ಅದರಿಂದ ಬಂದ ಹಣವನ್ನು ಸುಮ್ಮನೆ ಪೋಲು ಮಾಡ್ತಾರೆ. ಆದರೆ ಉಡುಪಿಯ ಕ್ರಿಕೆಟ್ ತಂಡದ ಯುವಕರು ಒಂದು ಜೀವ ಉಳಿಸುವುದಕ್ಕೆ ಕ್ರಿಕೆಟ್ ಆಡುತ್ತಾರೆ. ಹೌದು ಉಡುಪಿಯ ಉದ್ಯಾವರದ ಈ ಗೆಳೆಯರ ತಂಡ ಟಿವಿ9 ವಾಹಿನಿಯ ‘ಕಂದನ ಉಳಿಸಿ’ ಅಭಿಯಾನಕ್ಕೆ ಸಹಾಯ ಹಸ್ತ ಚಾಚಿದೆ.

ಸಹಾಯ ಮಾಡುವುದಕ್ಕೆ ಶ್ರೀಮಂತಿಕೆ ಬೇಕು ಎಂದೇನು ಇಲ್ಲ. ಆದರೆ ಮಾನವೀಯತೆಯ ಮನಸ್ಸಿದ್ದರೆ ಸಾಕು. ಎನ್ನುವುದಕ್ಕೆ ಈ ಯುವಕರ ತಂಡವೆ ಸಾಕ್ಷಿ. ಉಡುಪಿಯ ಈ ತಂಡ ಯಾವಾಗಲೇ ಆಡಿದರೂ ಅದಕ್ಕೊಂದು ಸದುದ್ದೇಶ ಇರುತ್ತದೆಂದು ಎಲ್ಲರೂ ಸಹಕಾರ ಮಾಡುತ್ತಾರೆ. ಇವರು ಈ ಬಾರಿ ಆಟ ಅಡಿರುವುದು ಮತ್ತು ಟೂರ್ನಮೆಂಟ್ ಆಯೋಜಿಸಿರುವುದು ಕಂದಮ್ಮನ ಬದುಕಿಗಾಗಿ. ಹೌದು, ಟಿವಿ9 ವಾಹಿನಿ ಹಮ್ಮಿಕೊಂಡಿರುವ ಕಂದನ ಉಳಿಸಿ ಅಭಿಯಾನಕ್ಕೆ ಎಲ್ಲೆಡೆ ಸ್ಪಂದನೆ ದೊರೆಯುತ್ತಿದ್ದು, ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಗೆ ತುತ್ತಾಗಿದ್ದ ಕಂದ ಜನೀಶ್​ನ ಬಗ್ಗೆ ನಾವು ಪ್ರಸಾರ ಮಾಡಿದ್ದ ಸುದ್ದಿ ನೋಡಿ ಉಡುಪಿ ಕಟಪಾಡಿಯ ಈ ಸ್ಪೋರ್ಟ್ಸ್ ತಂಡವೂ ಸಹಾಯ ಹಸ್ತ ಚಾಚಿದೆ.

cricket team

ಟಿವಿ9 ವರದಿಗೆ ಸ್ಪಂಧಿಸಿದ ಯುವಕರ ತಂಡ

ಕಳೆದ ಅನೇಕ ವರ್ಷಗಳಿಂದ ಕ್ರೀಡೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಯುನೈಟೆಡ್ ಫ್ರೆಂಡ್ಸ್ ಯುವಕರ ತಂಡ ನಿತ್ಯ ಕ್ರಿಕೆಟ್‌ ಆಡುವ ಹವ್ಯಾಸ ಹೊಂದಿದ್ದು, ಸದ್ಯ ಒಂದು ಮಹತ್ತರವಾದ ಆಶಯದಿಂದ ಟೂರ್ನಿಗಳನ್ನು ಆಯೋಜನೆ ಮಾಡಿದ್ದಾರೆ. ಈ ಟೂರ್ನಿಗಳ ಮೂಲಕ ಒಂದಷ್ಟು ಹಣವನ್ನು ಸಂಪಾದನೆ ಮಾಡಿದ್ದು ಟಿವಿ9ನಲ್ಲಿನ ಕಂದಮ್ಮನ ಉಳಿಸಿ ಅಭಿಯಾನದ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ.

cricket team

ಟೂರ್ನಿ ನಡೆಸಿ ಕಂದನಿಗೆ ನೆರವು

ವರದಿ ನೋಡಿದ ಬಳಿಕ ಯುವಕರು ಒಟ್ಟಾಗಿ ಆ ಕಂದಮ್ಮನ ಜೀವ ಉಳಿಸಲು ತಮ್ಮಿಂದಾದ ಸಹಾಯಕ್ಕೆ ಮುಂದಾಗಿದ್ದು, ಒಂದು ಟೂರ್ನಿಯನ್ನು ಆಯೋಜನೆ ಮಾಡಿ ಅದರಿಂದ ಬಂದ ಹಣವನ್ನು ಅಶಕ್ತ ಕಂದಮ್ಮನಿಗೆ ನೀಡಿದೆ.

cricket team

ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ಕಂದಮ್ಮನಿಗೆ ನೆರವು

ಆಟದ ಜೊತೆ ಮಾನವೀಯ ಪಾಠ ತೋರಿದ ಈ ಯುವಕರ ಕಾರ್ಯ ಇನ್ನಷ್ಟು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದು, ಒಳ್ಳೆಯ ಕೆಲಸಕ್ಕೆ ಯಾವುದಾದರೂ ಒಂದು ರೂಪದಲ್ಲಿ ಬೆಂಬಲ ದೊರೆಯುತ್ತದೆ ಎನ್ನುವುದಕ್ಕೆ ಇದೇ ಸ್ಪಷ್ಟ ನಿದರ್ಶನ.

ಇದನ್ನೂ ಓದಿ: ಟಿವಿ9 ರಹಸ್ಯ ಕಾರ್ಯಾಚರಣೆ: ಪರಪ್ಪನ ಜೈಲಿನಲ್ಲಿ ಲಕ್ಷ ಲಕ್ಷ ಕೊಟ್ಟರೆ ಸಿಗುವ ಸೌಲಭ್ಯಗಳೇನು ಗೊತ್ತಾ? ಕೈದಿಗಳ ದಂಧೆಗೆ ಜೈಲಾಧಿಕಾರಿಗಳೇ ಸಾಥ್​..!

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ