Chikkaballapura Gelatin Blast | ‘ಇನ್ನಾದರೂ ದಯವಿಟ್ಟು ಗಣಿಗಾರಿಕೆ ನಿಲ್ಲಿಸಿ, ಪ್ರತಿದಿನ ಪ್ರತಿಕ್ಷಣ ಆತಂಕದಲ್ಲಿ ಕಳೆಯುತ್ತಿದ್ದೇವೆ’

Chikkaballapura Gelatin Blast: ಯಾವಾಗ ಮನೆ ಕುಸಿದು ಬೀಳುತ್ತೆ ಅನ್ನೋ ಭಯದಲ್ಲಿದ್ದೇವೆ..ರಾತ್ರಿಯೂ ನೆಮ್ಮದಿಯಿಂದ ಮಲಗಲು ಸಹ ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ದಯವಿಟ್ಟು ಗಣಿಗಾರಿಕೆ ನಿಲ್ಲಿಸಿ, ನೆಮ್ಮದಿಯಾಗಿ ಬದುಕಲು ಬಿಡಿ.. ಎಂದು ಹಿರೇನಾಗವೇಲಿ ಗ್ರಾಮದ ಜನರು ಅಲವತ್ತುಕೊಳ್ಳುತ್ತಿದ್ದಾರೆ.

Chikkaballapura Gelatin Blast | ‘ಇನ್ನಾದರೂ ದಯವಿಟ್ಟು ಗಣಿಗಾರಿಕೆ ನಿಲ್ಲಿಸಿ, ಪ್ರತಿದಿನ ಪ್ರತಿಕ್ಷಣ ಆತಂಕದಲ್ಲಿ ಕಳೆಯುತ್ತಿದ್ದೇವೆ’
ಜಿಲೆಟಿನ್ ಸ್ಫೋಟವಾದ ಸ್ಥಳ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on:Feb 23, 2021 | 12:50 PM

ಚಿಕ್ಕಬಳ್ಳಾಪುರ: ತಾಲೂಕಿನ ಮಂಡಿಕಲ್ ಹೋಬಳಿ ಹಿರೇನಾಗವೇಲಿ ಬಳಿ ಜೊನ್ನಲಕುಂಟೆಯಲ್ಲಿ ಕಲ್ಲು ಗಣಿಕಾರಿಕೆಯಲ್ಲಿ ಜಿಲೆಟಿನ್ ಸ್ಫೋಟಗೊಂಡಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಆಘಾತದಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಹಿರೇನಾಗವೇಲಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮದ ಜನರು ಮಾಧ್ಯಮ ಪ್ರತಿನಿಧಿಗಳ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಜನರ ಅಳಲು ಕಲ್ಲು ಹೃದಯದವರು ಕರುಳನ್ನೂ ಸಹ ಕಿವುಚುವಂತಿದೆ. ಹಿರೇನಾಗವೇಲಿ ಊರಿನ ಸದ್ಯದ ಪರಿಸ್ಥಿತಿ ನೋಡಿದರೆ ಛೇ! ಮುಗ್ದ ಗ್ರಾಮಸ್ಥರಿಗೆ ಹೀಗಾಗಬಾರದಿತ್ತು ಎಂದು ಅನಿಸುತ್ತದೆ.

ಯಾವಾಗ ಮನೆ ಕುಸಿದು ಬೀಳುತ್ತೆ ಅನ್ನೋ ಭಯದಲ್ಲಿದ್ದೇವೆ.. ರಾತ್ರಿಗಳಲ್ಲಿ ನೆಮ್ಮದಿಯಿಂದ ಮಲಗಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ದಯವಿಟ್ಟು ಗಣಿಗಾರಿಕೆ ನಿಲ್ಲಿಸಿ, ನೆಮ್ಮದಿಯಾಗಿ ಬದುಕಲು ಬಿಡಿ.. ಎಂದು ಅವರು ಅಲವತ್ತುಕೊಳ್ಳುತ್ತಿದ್ದಾರೆ.

ನಮ್ಮ ಮನವಿಗೆ ಬೆಲೆಯಿಲ್ಲ ಈ ಮುನ್ನವೇ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪ್ರತಿದಿನ ಪ್ರತಿಕ್ಷಣ ಆತಂಕದಲ್ಲಿ ದಿನ ಕಳೆಯುತ್ತಿದ್ದೇವೆ. ನಮಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಮಾಡಿಕೊಡಿ. ಇನ್ನಾದರೂ ಗಣಿಗಾರಿಕೆ ನಿಲ್ಲಿಸಿ ಎಂಬುದು ನಮ್ಮ ಮನವಿ ಎಂದು ಗ್ರಾಮಸ್ಥರು ಈಗಲೂ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.

2030ರವರೆಗೂ ಇದೆ ಪರವಾನಗಿ! ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟದ ಹಿನ್ನೆಲೆಯಲ್ಲಿ ಭ್ರಮರವಾಸಿನಿ ಕ್ರಷರ್​ಗೆ 2030 ರವರೆಗೂ ಪರವಾನಗಿ ಇದೆ. ಕ್ರಷರ್ ನಡೆಸಲು ಗಣಿ & ಭೂ ವಿಜ್ಞಾನ ಇಲಾಖೆ ಅನುಮತಿ ಪಡೆದುಕೊಳ್ಳಲಾಗಿದ್ದು, ಜೊನ್ನಲಕುಂಟೆಯ ಹಳೇ ಸರ್ವೆ ನಂ. 11, ಹೊಸ ಸರ್ವೆ ನಂ. 24 ನಲ್ಲಿ 3 ಎಕರೆ 10 ಗುಂಟೆಯಲ್ಲಿ ಕ್ರಷರ್ ನಡೆಸಲು ಅನುಮತಿ ಇದೆ ಎಂದು ತಿಳಿದುಬಂದಿದೆ.

ಭ್ರಮರವರ್ಷಿಣಿ ಮಾಲೀಕರು ಸ್ಫೋಟಕ ಸಂಗ್ರಹಿಸಿದ್ದು ತಿಳಿದಿದೆ, ಭ್ರಮರವರ್ಷಿಣಿ ಕಲ್ಲು ಕ್ವಾರಿಗೆ ಮೂವರು ಮಾಲೀಕರಿದ್ದಾರೆ. ಇಬ್ಬರು ಆಂಧ್ರ ಮೂಲದವರು, ಒಬ್ಬರು ಗುಡಿಬಂಡೆಯವರು. ಆದಷ್ಟು ಶೀಘ್ರದಲ್ಲಿ ಅವರನ್ನು ಹಿಡಿಯುವ ಕೆಲಸ ಆಗುತ್ತದೆ. ಕಲ್ಲು ಕ್ವಾರಿ ಮಾಲೀಕರ ಬಂಧನಕ್ಕೆ ಪೊಲೀಸ್ ತಂಡ ರಚನೆ ಮಾಡಲಾಗುತ್ತೆ. ಅವರಿಗೆ ಅಕ್ರಮವಾಗಿ ಸ್ಫೋಟಕ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತೆ. ನಿಯಮಬಾಹಿರ ಚಟುವಟಿಕೆಗಳಿಂದ ಇಂಥ ಘಟನೆ ನಡೆಯುತ್ತೆ. ಅಧಿಕಾರಿಗಳು ಈ ರೀತಿ ನಡೆಯದಂತೆ ಕಠಿಣ ಕ್ರಮಕೈಗೊಳ್ತಾರೆ. ಈ ಘಟನೆಗೆ ಮಾಲೀಕರೇ ಪ್ರಮುಖ ಆರೋಪಿಗಳಾಗುತ್ತಾರೆ. ಆದಷ್ಟು ಶೀಘ್ರದಲ್ಲಿ ಅವರನ್ನು ಹಿಡಿಯುವ ಕೆಲಸ ಆಗುತ್ತದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.

ರಾಮು ಮನೆಗೆ ಸಚಿವ ಸುಧಾಕರ್ ಭೇಟಿ ಘಟನೆಯಲ್ಲಿ ಮೃತಪಟ್ಟ ರಾಮು ಮನೆಗೆ ಸಚಿವ ಸುಧಾಕರ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಹಾಗೂ ರಾಮು ಬಗ್ಗೆ ಪತ್ನಿಯಿಂದ ಮಾಹಿತಿ ಪಡೆದಿದ್ದಾರೆ. ಜಿಲೆಟಿನ್ ಸ್ಫೋಟದಲ್ಲಿ ಹಿರೇನಾಗವೇಲಿ ಗ್ರಾಮದ ರಾಮು ಮೃತಪಟ್ಟಿದ್ದಾರೆ. ಪಿಯುಸಿ ಓದಿದ್ದ ರಾಮು ಕ್ವಾರಿ ಬಳಿ ಅಂಗಡಿಯಿಟ್ಟುಕೊಂಡಿದ್ದ. ಕ್ವಾರಿ ಮಾಲೀಕರೇ ಬಂದು ಕ್ವಾರಿ ನೋಡಿಕೊಳ್ಳಲು ಹೇಳಿದ್ದರು. ನಿನ್ನೆ ಬೆಳಗ್ಗೆ 8 ಗಂಟೆಗೆ ಕ್ವಾರಿಯಲ್ಲಿ ಕೆಲಸಕ್ಕೆ‌ ಹೋಗಿದ್ದ. ಬಳಿಕ ಗುಡಿಬಂಡೆಗೆ ಸ್ನೇಹಿತನ ಮನೆ ಗೃಹ ಪ್ರವೇಶಕ್ಕೆ‌ ಹೋಗಿದ್ದ. ಆದ್ರೆ ರಾತ್ರಿ ನಡೆದ ಘಟನೆಯಲ್ಲಿ ರಾಮು ಮೃತಪಟ್ಟಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೃತ ರಾಮು ಬಗ್ಗೆ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇಲ್ಲ. ರಾತ್ರಿಯೇ ಘಟನೆ‌ ನಡೆದರೂ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಸ್ಫೋಟ ಸ್ಥಳದಿಂದ ಕೂಗಳತೆ ದೂರದಲ್ಲಿ ರಾಮು ಕುಟುಂಬವಿದೆ. ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ರಾಮು ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Chikkaballapura Gelatin Blast | ಪ್ರಧಾನಿ, ಮುಖ್ಯಮಂತ್ರಿ, ಗಣಿ ಸಚಿವ ಟ್ವೀಟ್ ಮಾಡಿ ಸ್ಫೋಟದ ಬಗ್ಗೆ ಏನಂದ್ರು?

Chikkaballapura Gelatin Blast | ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆ

Published On - 11:00 am, Tue, 23 February 21

ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ