Chikkaballapura Gelatin Blast | ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆ

ಘಟನೆಯಲ್ಲಿ ಮೃತಪಟ್ಟ ರಾಮು ಮನೆಗೆ ಸಚಿವ ಸುಧಾಕರ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಹಾಗೂ ರಾಮು ಬಗ್ಗೆ ಪತ್ನಿಯಿಂದ ಮಾಹಿತಿ ಪಡೆದಿದ್ದಾರೆ. ಜಿಲೆಟಿನ್ ಸ್ಫೋಟದಲ್ಲಿ ಹಿರೇನಾಗವೇಲಿ ಗ್ರಾಮದ ರಾಮು ಮೃತಪಟ್ಟಿದ್ದಾರೆ. ಪಿಯುಸಿ ಓದಿದ್ದ ರಾಮು ಕ್ವಾರಿ ಬಳಿ ಅಂಗಡಿಯಿಟ್ಟುಕೊಂಡಿದ್ದ. ಕ್ವಾರಿ ಮಾಲೀಕರೇ ಬಂದು ಕ್ವಾರಿ ನೋಡಿಕೊಳ್ಳಲು ಹೇಳಿದ್ದರು.

Chikkaballapura Gelatin Blast | ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆ
ಘಟನಾಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ ಸಚಿವ ಡಾ.ಕೆ.ಸುಧಾಕರ್
Follow us
ಆಯೇಷಾ ಬಾನು
|

Updated on:Feb 23, 2021 | 12:03 PM

ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟ ಕೇಸ್​ಗೆ ಸಂಬಂಧಿಸಿ ದುರಂತದಲ್ಲಿ 6 ಜನರು ಮೃತಪಟ್ಟಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಹಿರೇನಾಗವೇಲಿಯ ಒಬ್ಬರು, ಬಾಗೇಪಲ್ಲಿಯ ಒಬ್ಬರು, ಆಂಧ್ರ ಮೂಲದ ಮೂವರು, ನೇಪಾಳದ ಒಬ್ಬರು ಮೃತಪಟ್ಟಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ಬಳಿಕ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಇನ್ನು ಈ ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಭ್ರಮರವರ್ಷಿಣಿ ಮಾಲೀಕರು ಸ್ಫೋಟಕ ಸಂಗ್ರಹಿಸಿದ್ದು ತಿಳಿದಿದೆ, ಭ್ರಮರವರ್ಷಿಣಿ ಕಲ್ಲು ಕ್ವಾರಿಗೆ ಮೂವರು ಮಾಲೀಕರಿದ್ದಾರೆ. ಇಬ್ಬರು ಆಂಧ್ರ ಮೂಲದವರು, ಒಬ್ಬರು ಗುಡಿಬಂಡೆಯವರು. ಆದಷ್ಟು ಶೀಘ್ರದಲ್ಲಿ ಅವರನ್ನು ಹಿಡಿಯುವ ಕೆಲಸ ಆಗುತ್ತದೆ. ಕಲ್ಲು ಕ್ವಾರಿ ಮಾಲೀಕರ ಬಂಧನಕ್ಕೆ ಪೊಲೀಸ್ ತಂಡ ರಚನೆ ಮಾಡಲಾಗುತ್ತೆ. ಅವರಿಗೆ ಅಕ್ರಮವಾಗಿ ಸ್ಫೋಟಕ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತೆ. ನಿಯಮಬಾಹಿರ ಚಟುವಟಿಕೆಗಳಿಂದ ಇಂಥ ಘಟನೆ ನಡೆಯುತ್ತೆ. ಅಧಿಕಾರಿಗಳು ಈ ರೀತಿ ನಡೆಯದಂತೆ ಕಠಿಣ ಕ್ರಮಕೈಗೊಳ್ತಾರೆ. ಈ ಘಟನೆಗೆ ಮಾಲೀಕರೇ ಪ್ರಮುಖ ಆರೋಪಿಗಳಾಗುತ್ತಾರೆ. ಆದಷ್ಟು ಶೀಘ್ರದಲ್ಲಿ ಅವರನ್ನು ಹಿಡಿಯುವ ಕೆಲಸ ಆಗುತ್ತದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.

Chikkaballapura Gelatin Blast Sudhakar

ಘಟನಾಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ ಸಚಿವ ಡಾ.ಕೆ.ಸುಧಾಕರ್

ರಾಮು ಮನೆಗೆ ಸಚಿವ ಸುಧಾಕರ್ ಭೇಟಿ ಘಟನೆಯಲ್ಲಿ ಮೃತಪಟ್ಟ ರಾಮು ಮನೆಗೆ ಸಚಿವ ಸುಧಾಕರ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಹಾಗೂ ರಾಮು ಬಗ್ಗೆ ಪತ್ನಿಯಿಂದ ಮಾಹಿತಿ ಪಡೆದಿದ್ದಾರೆ. ಜಿಲೆಟಿನ್ ಸ್ಫೋಟದಲ್ಲಿ ಹಿರೇನಾಗವೇಲಿ ಗ್ರಾಮದ ರಾಮು ಮೃತಪಟ್ಟಿದ್ದಾರೆ. ಪಿಯುಸಿ ಓದಿದ್ದ ರಾಮು ಕ್ವಾರಿ ಬಳಿ ಅಂಗಡಿಯಿಟ್ಟುಕೊಂಡಿದ್ದ. ಕ್ವಾರಿ ಮಾಲೀಕರೇ ಬಂದು ಕ್ವಾರಿ ನೋಡಿಕೊಳ್ಳಲು ಹೇಳಿದ್ದರು. ನಿನ್ನೆ ಬೆಳಗ್ಗೆ 8 ಗಂಟೆಗೆ ಕ್ವಾರಿಯಲ್ಲಿ ಕೆಲಸಕ್ಕೆ‌ ಹೋಗಿದ್ದ. ಬಳಿಕ ಗುಡಿಬಂಡೆಗೆ ಸ್ನೇಹಿತನ ಮನೆ ಗೃಹ ಪ್ರವೇಶಕ್ಕೆ‌ ಹೋಗಿದ್ದ. ಆದ್ರೆ ರಾತ್ರಿ ನಡೆದ ಘಟನೆಯಲ್ಲಿ ರಾಮು ಮೃತಪಟ್ಟಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೃತ ರಾಮು ಬಗ್ಗೆ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇಲ್ಲ. ರಾತ್ರಿಯೇ ಘಟನೆ‌ ನಡೆದರೂ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಸ್ಫೋಟ ಸ್ಥಳದಿಂದ ಕೂಗಳತೆ ದೂರದಲ್ಲಿ ರಾಮು ಕುಟುಂಬವಿದೆ. ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ರಾಮು ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಗ್ರಾಮಸ್ಥನ ತೀವ್ರ ಆಕ್ರೋಶ ಇನ್ನು ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಹಿರೇನಾಗವೇಲಿ ಗ್ರಾಮಸ್ಥ ರಾಘವೇಂದ್ರ ಎಂಬುವವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಡಾ.ಸುಧಾಕರ್ ನೇರ ಕಾರಣ ಎಂದು ಸ್ಥಳ ಪರಿಶೀಲನೆಗೆ ಬಂದಿದ್ದ ಸಚಿವ ಸುಧಾಕರ್ ವಿರುದ್ಧ ರಾಘವೇಂದ್ರ ಗರಂ ಆಗಿದ್ದಾರೆ. ಸುಧಾಕರ್ ಎದುರು ಅವರ ಸಂಬಂಧಿಗಳ ವಿರುದ್ಧವೇ ಕಿಡಿಕಾರಿದ್ರು. ದಬ್ಬಾಳಿಕೆಯಿಂದ ಜಮೀನು ಖರೀದಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಇದೆಲ್ಲ ಹೇಳುತ್ತಿದ್ದಂತೆ ತಕ್ಷಣ ಪೊಲೀಸರು ಗ್ರಾಮಸ್ಥ ರಾಘವೇಂದ್ರನನ್ನ ಹೊರಹಾಕಿದ್ದಾರೆ.

Chikkaballapura Gelatin Blast Sudhakar

ಘಟನಾಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ ಸಚಿವ ಡಾ.ಕೆ.ಸುಧಾಕರ್

ಇದನ್ನೂ ಓದಿ: Chikkaballapura Gelatin Blast | ಶಿವಮೊಗ್ಗ ಸ್ಫೋಟ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ, ಐವರ ಸಾವು

Published On - 8:07 am, Tue, 23 February 21

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ