AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pink Ball Test: ಹಗಲು-ರಾತ್ರಿ ಟೆಸ್ಟ್​ ಪಂದ್ಯಕ್ಕೆ ಪಿಂಕ್​ ಬಾಲ್ ಬಳಕೆ ಏಕೆ? ಏನಿದರ ಮರ್ಮ?

Pink Ball: ಗುಲಾಬಿ ಬಣ್ಣವನ್ನು ಆಯ್ಕೆಮಾಡಲು ಕಾರಣವೆಂದರೆ ಅದು ಸಾಂಪ್ರದಾಯಿಕ ಕೆಂಪು ಬಣ್ಣದ ಚೆಂಡಿಗೆ ಹತ್ತಿರದಲ್ಲಿದೆ ಮತ್ತು ಲೈವ್ ಸ್ಟ್ರೀಮಿಂಗ್‌ಗಾಗಿ ಕ್ಯಾಮೆರಾದಲ್ಲಿ ಚೆಂಡನ್ನು ಸೆರೆಹಿಡಿಯುವಾಗ ದೀಪಗಳ ಅಡಿಯಲ್ಲಿ ಚೆಂಡಿನ ಚಲನೆಯನ್ನು ಸೆರೆಹಿಡಿಯುವುದು ಸುಲಭವಾಗುತ್ತದೆ.

Pink Ball Test: ಹಗಲು-ರಾತ್ರಿ ಟೆಸ್ಟ್​ ಪಂದ್ಯಕ್ಕೆ ಪಿಂಕ್​ ಬಾಲ್ ಬಳಕೆ ಏಕೆ? ಏನಿದರ ಮರ್ಮ?
ಪಿಂಕ್​ ಬಾಲ್​
ಪೃಥ್ವಿಶಂಕರ
| Edited By: |

Updated on: Feb 23, 2021 | 6:56 PM

Share

ಪ್ರಪಂಚದಾದ್ಯಂತದ ಪ್ರತಿಯೊಂದು ಕ್ರೀಡೆಯಲ್ಲೂ ವೈಜ್ಞಾನಿಕ ಆಲೋಚನೆ ಕೆಲಸ ಮಾಡುತ್ತದೆ. ಕ್ರಿಕೆಟ್‌ನಲ್ಲಿ, ಆಟಗಾರರ ಉಡುಪನ್ನು ವೈಜ್ಞಾನಿಕ ಕಾರಣಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಆಟಗಾರರು ಬಣ್ಣದ ಬಟ್ಟೆಗಳನ್ನು ಧರಿಸಿ ಬಿಳಿ ಚೆಂಡಿನೊಂದಿಗೆ ಆಡುತ್ತಾರೆ. ಈ ಸಂಯೋಜನೆಯ ಹಿಂದಿನ ಕಾರಣವೆಂದರೆ ಚೆಂಡು ಆಟಗಾರರಿಗೆ ಸ್ಪಷ್ಟವಾಗಿ ಗೋಚರಿಸಬೇಕು ಎಂಬುದು. ಅದೇ ರೀತಿಯಲ್ಲಿ, ಆಟಗಾರರು ಬಿಳಿ ಬಟ್ಟೆಗಳನ್ನು ಧರಿಸಿ ಟೆಸ್ಟ್​ ಪಂದ್ಯಗಳಲ್ಲಿ ಕೆಂಪು ಚೆಂಡಿನೊಂದಿಗೆ ಆಡುತ್ತಾರೆ. ಇದರಿಂದ ಚೆಂಡು ಸ್ಪಷ್ಟವಾಗಿ ಗೋಚರಿಸುತ್ತದೆ. ಟೆಸ್ಟ್​ ಪಂದ್ಯಗಳನ್ನು ಸೂರ್ಯನ ಬೆಳಕಿನಲ್ಲಿ ದಿನವಿಡಿ ಆಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಬಿಳಿಬಟ್ಟೆಗಳನ್ನು ಬಳಸುವ ಮತ್ತೊಂದು ಉಪಯೋಗವೆಂದರೆ ಇವು ಶಾಖವನ್ನು ಹೀರಿಕೊಳ್ಳುವುದಿಲ್ಲ, ಪ್ರತಿಫಲಿಸುತ್ತದೆ. ಹೀಗಾಗಿಯೇ ಇಂದಿಗೂ ಟೆಸ್ಟ್​ನಲ್ಲಿ ಎಲ್ಲಾ ಆಟಗಾರರು ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡಿನ ಬಳಕೆ.. ಟೆಸ್ಟ್ ಪಂದ್ಯಗಳಲ್ಲಿ 3 ರೀತಿಯ ಚೆಂಡುಗಳನ್ನು ಬಳಸಲಾಗುತ್ತದೆ. ಅವುಗಳ ಹೆಸರುಗಳೆಂದರೆ ಕೂಕಬುರಾ, ಎಸ್‌ಜಿ, ಮತ್ತು ಡ್ಯೂಕ್. ವಿವಿಧ ಬಣ್ಣಗಳ ಚೆಂಡುಗಳನ್ನು ಕ್ರಿಕೆಟ್‌ನಲ್ಲಿ ವಿವಿಧ ಸ್ವರೂಪಗಳಲ್ಲಿ ಬಳಸಲಾಗುತ್ತದೆ.

ಇಲ್ಲಿಯವರೆಗೆ, ಕೆಂಪು ಬಣ್ಣದ ಚೆಂಡನ್ನು ಟೆಸ್ಟ್ ಪಂದ್ಯಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಈಗ ಗುಲಾಬಿ ಬಣ್ಣದ ಚೆಂಡನ್ನು ಟೆಸ್ಟ್ ಪಂದ್ಯಗಳಲ್ಲಿ ಬಳಸಲಾಗುತ್ತಿದೆ. 22ನೇ ನವೆಂಬರ್ 2019ರಂದು ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧ ಗುಲಾಬಿ ಚೆಂಡಿನೊಂದಿಗೆ ಭಾರತ ತಂಡವು ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿ ಜಯಗಳಿಸಿತ್ತು. ಇದು ಭಾರತೀಯ ನೆಲದಲ್ಲಿ ನಡೆದ ಮೊದಲ ಹಗಲು-ರಾತ್ರಿ ಟೆಸ್ಟ್​ ಪಂದ್ಯವೂ ಹೌದು.

ಹಗಲು ರಾತ್ರಿ ಟೆಸ್ಟ್​ನಲ್ಲಿ ಕಿತ್ತಳೆ ಅಥವಾ ಹಳದಿ ಬಣ್ಣದ ಚೆಂಡು ಯಾಕಿಲ್ಲ? ಮೊದಲ ಗುಲಾಬಿ ಬಣ್ಣದ ಚೆಂಡನ್ನು ಆಸ್ಟ್ರೇಲಿಯಾದ ಚೆಂಡು ಉತ್ಪಾದನಾ ಕಂಪನಿ ‘ಕೂಕಬುರಾ’ ತಯಾರಿಸಿತು. ಆರಂಭದಲ್ಲಿ, ಈ ಚೆಂಡಿನ ಬಣ್ಣವು ಬೇಗನೆ ಮಾಸಿ ಹೋಗುತ್ತಿತ್ತು. ಆದರೆ ಕಂಪನಿಯ ಹಲವು ವರ್ಷಗಳ ಸತತ ಪ್ರಯತ್ನದಿಂದ ಆ ಸಮಸ್ಯೆಗೆ ಪರಿಹಾರ ಹುಡುಕಲಾಯಿತು. ಈಗ ಚೆಂಡಿನ ಮೇಲಿರುವ ಗುಲಾಬಿ ಬಣ್ಣವು, ಕೆಂಪು ಬಣ್ಣದ ಚೆಂಡಿನಂತೆ ಹೆಚ್ಚು ಕಾಲ ಉಳಿಯಲಿದೆ.

ಪಿಂಕ್ ಬಾಲ್ ಆರಂಭದಲ್ಲಿ, ಕೂಕಬುರಾ ಕಂಪನಿಯು ಚೆಂಡು ತಯಾರಿಸಲು ಕಿತ್ತಳೆ ಮತ್ತು ಹಳದಿ ಬಣ್ಣಗಳನ್ನು ಬಳಸಿತು. ಆ ಚೆಂಡುಗಳ ಪ್ರಯೋಗದ ಸಮಯದಲ್ಲಿ, ಕ್ಯಾಮೆರಾಮೆನ್‌ಗಳಿಗೆ ತಮ್ಮ ಕ್ಯಾಮೆರದಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡನ್ನು ಸರಿಯಾಗಿ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕಿತ್ತಳೆ ಮತ್ತು ಹಳದಿ ಬಣ್ಣಗಳ ಚೆಂಡಿನ ಬಳಕೆ ಮುಂದಿನ ದಿನಗಳಲ್ಲಿ ನಿಂತುಹೋಯಿತು. ಇದರ ಬದಲು ಪಿಂಕ್​ ಬಣ್ಣದ ಚೆಂಡಿನ ಬಳಕೆ ಆರಂಭವಾಯಿತು. ಇದಕ್ಕೆ ಮುಖ್ಯ ಕಾರಣ ಇದು ಸಾಂಪ್ರದಾಯಿಕ ಕೆಂಪು ಬಣ್ಣದ ಚೆಂಡಿಗೆ ಹತ್ತಿರದಲ್ಲಿದೆ ಮತ್ತು ಲೈವ್ ಸ್ಟ್ರೀಮಿಂಗ್‌ಗಾಗಿ ಕ್ಯಾಮೆರಾದಲ್ಲಿ ಚೆಂಡನ್ನು ಸೆರೆಹಿಡಿಯುವಾಗ ದೀಪಗಳ ಅಡಿಯಲ್ಲಿ ಬಾಲ್​ನ ಚಲನೆಯನ್ನು ಸೆರೆಹಿಡಿಯುವುದು ಸುಲಭ ಎನ್ನುವುದು.

ಗುಲಾಬಿ ಬಣ್ಣದ ಚೆಂಡಿನ ಮೇಲೆ ಕಪ್ಪುದಾರದಿಂದ ಹೊಲಿಗೆ ಹಾಕಲಾಗುತ್ತದೆ. ಕೆಲವೊಮ್ಮೆ ಹಸಿರು ಮತ್ತು ಬಿಳಿ ಬಣ್ಣದ ದಾರವನ್ನು ಸಹ ಬಳಸಲಾಗುತ್ತಿದೆ. ಈ ಮೊದಲು ಕಪ್ಪುದಾರದಿಂದ ಹೊಲಿದ ಗುಲಾಬಿ ಬಣ್ಣದ ಚೆಂಡಿನೊಂದಿಗೆ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಆಡಿತ್ತು.

ವೈಜ್ಞಾನಿಕವಾಗಿ, ಗುಲಾಬಿ ಒಂದು ಸ್ವತಂತ್ರ ಬಣ್ಣವೇ ಅಲ್ಲ. ಇದು ಕೇವಲ ಕೆಂಪು ಮತ್ತು ನೀಲಿ ಬಣ್ಣಗಳ ಒಂದು ನಿರ್ದಿಷ್ಟ ಹದದ ಮಿಶ್ರಣವಾಗಿದೆ. ಇದು ಮಾನವನ ಕಣ್ಣಿನ ಗ್ರಹಿಕೆಯ ಮೂಲಕ ಮಾತ್ರ ಕಂಡುಬರುತ್ತದೆ.  ಈಗ ಬಳಕೆಯಲ್ಲಿರುವ ಕೂಕಬುರಾ ಕಂಪನಿಯ ಪಿಂಕ್ ಚೆಂಡುಗಳು ಮೂಲದಲ್ಲಿ ಕೆಂಪು ಬಣ್ಣವನ್ನೇ ಹೊಂದಿವೆ. ಚೆಂಡಿನ ಮೇಲೆ ಗುಲಾಬಿ ಬಣ್ಣದ ಒಂದು ಪದರವನ್ನು ಡೈ ಮೂಲಕ ಲೇಪಿಸಲಾಗಿದೆ. ಇದು ಚೆಂಡಿನ ರಕ್ಷಣಾತ್ಮಕ ಪದರವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: India vs England: ಪಿಂಕ್​ ಬಾಲ್​ ಆರಂಭದಲ್ಲಿ ಸಾಕಷ್ಟು ಸ್ವಿಂಗ್ ಆಗಲಿದೆ..! ಮೊಟೆರಾ ಕ್ರೀಡಾಂಗಣದ ಹವಾಮಾನ, ಪಿಚ್​ ವರದಿ ಹೀಗಿದೆ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ