ಏಷ್ಯಾಕಪ್ ಟೂರ್ನಿಯಿಂದ ಪಾಕಿಸ್ತಾನಕ್ಕೆ ಗೇಟ್ ಪಾಸ್?
Asia Cup 2025: ಈ ಬಾರಿಯ ಏಷ್ಯಾಕಪ್ಗೆ ಬಿಸಿಸಿಐ ಆತಿಥ್ಯವಹಿಸಲಿದೆ. 2026ರ ಟಿ20 ವಿಶ್ವಕಪ್‌ಗೂ ಮುಂಚಿತವಾಗಿ ನಡೆಯಲಿರುವ ಈ ಟೂರ್ನಿಯಿಂದ ಪಾಕಿಸ್ತಾನ್ ತಂಡವನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಪಾಕ್ ವಿರುದ್ಧ ಎಲ್ಲಾ ರೀತಿಯ ಕ್ರಿಕೆಟ್ ಸಂಬಂಧವನ್ನು ಮುರಿದುಕೊಳ್ಳಲು ಬಿಸಿಸಿಐ ಮುಂದಾಗುವ ಸಾಧ್ಯತೆಯಿದೆ.

ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇದರ ನಡುವೆ ಪಾಕಿಸ್ತಾನಿ ಕ್ರಿಕೆಟಿಗರು ಭಾರತದ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಭಾರತ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದೀಗ ಬಿಸಿಸಿಐ (BCCI) ಕೂಡ ಪಾಕಿಸ್ತಾನ್ ವಿರುದ್ಧ ಎಲ್ಲಾ ರೀತಿಯ ಕ್ರಿಕೆಟ್ಗೆ ಬ್ರೇಕ್ ಹಾಕಲು ಚಿಂತಿಸಿದೆ. ಅದರ ಮೊದಲ ಭಾಗವಾಗಿ ಏಷ್ಯಾಕಪ್ ಟೂರ್ನಿಯಿಂದ ಪಾಕ್ ತಂಡವನ್ನು ಹೊರದಬ್ಬುವ ಸಾಧ್ಯತೆಯಿದೆ.
2026 ರ ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಈ ಮಹತ್ವದ ಪಂದ್ಯಾವಳಿಯಿಂದ ಹೊರಗಿಡುವ ಸಾಧ್ಯತೆಯಿದೆ. ಹೀಗಾಗಿ ಮುಂಬರುವ ಎಸಿಸಿ ಟೂರ್ನಿಯಲ್ಲಿ ಪಾಕ್ ತಂಡ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್.
ಬಿಸಿಸಿಐ ಯಾವಾಗಲೂ ಭಾರತ ಸರ್ಕಾರದ ಆದೇಶಗಳನ್ನು ಪಾಲಿಸುತ್ತಾ ಬಂದಿದೆ. ಹೀಗಾಗಿ ಏಷ್ಯಾಕಪ್ನಲ್ಲಿ ಪಾಕಿಸ್ತಾನ್ ವಿರುದ್ಧ ಆಡುವ ಸಾಧ್ಯತೆಯಿಲ್ಲ. ಅಲ್ಲದೆ ಪಾಕಿಸ್ತಾನ್ ತಂಡವನ್ನು ಹೊರಗಿಟ್ಟು ಏಷ್ಯಾಕಪ್ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಒತ್ತಡ ಹೇರಬಹುದು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸುನಿಲ್ ಗವಾಸ್ಕರ್ ಅವರ ಪ್ರಕಾರ, ಪಾಕಿಸ್ತಾನವನ್ನು ಹೊರಗಿಡಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅನ್ನು ಸಹ ವಿಸರ್ಜಿಸಬಹುದು. ಇದರರ್ಥ ACC ಯ ಭವಿಷ್ಯವೂ ಅಪಾಯದಲ್ಲಿದೆ. ಪರಿಸ್ಥಿತಿ ಸುಧಾರಿಸದಿದ್ದರೆ, ಅದು ಅಸ್ತಿತ್ವದಲ್ಲೇ ಇರುವುದಿಲ್ಲ. ಏಷ್ಯಾಕಪ್ ಬದಲಿಗೆ ಕೇವಲ 3 ಅಥವಾ 4 ದೇಶಗಳ ನಡುವೆ ಸರಣಿಗಳನ್ನು ಆಯೋಜಿಸಬಹುದು.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಸದ್ಯ ಪರಿಸ್ಥಿತಿಯನ್ನು ಗಮನಿಸಿದರೆ, ಭಾರತ ಮತ್ತು ಪಾಕಿಸ್ತಾನ್ ಯಾವುದೇ ಪಂದ್ಯವಾಡುವುದಿಲ್ಲ. ಇದು ಏಷ್ಯಾಕಪ್ನೊಂದಿಗೆ ಜಾರಿಯಾಗುವ ಸಾಧ್ಯತೆಯಿದೆ. ಆದರೆ ಇಲ್ಲಿ ಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಯಾವ ಬೇಡಿಕೆ ಮುಂದಿಡಲಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಲಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.




