ಪ್ಯಾಕೆಟ್ ಹಾಲನ್ನು ಕುಡಿಯುವ ಮೊದಲು ಕುದಿಸುವ ಅಗತ್ಯ ಇದೆಯೇ?
ಹಾಲನ್ನು ಪ್ರತಿದಿನ ಕುಡಿಯುವವರಿಗೆ ಹಾಗೂ ಚಹಾ, ಟೀ ಇಂತಹ ಆಹಾರಗಳಿಗೆ ಸೇರಿಸುವವರು ಇದನ್ನು ಗಮನಿಸಬೇಕು. ಹಾಲನ್ನು ಬಿಸಿ ಮಾಡದೇ ಅಥವಾ ಕುದಿಸದೆ ಕುಡಿದರೆ ಏನೆಲ್ಲ ಪ್ರಯೋಜನ ಇದೆ. ಪಾಶ್ಚರೀಕರಿಸಿದ ಹಾಲನ್ನು ಕುದಿಸುವ ಅಗತ್ಯ ಇಲ್ಲವೇ? ಈ ಬಗ್ಗೆ ಆಹಾರ ತಜ್ಞೆ ಮತ್ತು ಮಧುಮೇಹ ಶಿಕ್ಷಣ ತಜ್ಞೆ ಕನಿಕಾ ಮಲ್ಹೋತ್ರಾ ಹೇಳೋದನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಡೈರಿಯಲ್ಲಿ ಅಥವಾ ಅಂಗಡಿಯಲ್ಲಿ ಸಿಗುವ ಹಾಲು (milk), ಆರೋಗ್ಯಕ್ಕೆ ಎಷ್ಟು ಒಳ್ಳೆಯದು, ಈ ಹಾಲನ್ನು ಕುದಿಸದೆ ಕುಡಿಯುವುದು ಸರಿಯೇ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಈ ಪ್ಯಾಕೆಟ್ ಹಾಲುಗಳನ್ನು ಕುದಿಸುವುದು ನಿಜವಾಗಿಯೂ ಅಗತ್ಯವಿದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ, ಹಾಲಿನ ಪ್ಯಾಕೆಟ್‌ಗಳು ಸಾಮಾನ್ಯವಾಗಿ ‘ಪಾಶ್ಚರೀಕರಿಸಿದ‘, ‘ಟೋನ್ಡ್’ ಅಥವಾ ‘UHT’ ಎಂಬ ಲೇಬಲ್ನ್ನು ಹೊಂದಿರುತ್ತದೆ. ಪಾಶ್ಚರೀಕರಿಸಿದ ಹಾಲನ್ನು ಸೇವಿಸುವ ಮೊದಲು ಕುದಿಸುವುದು ಅಗತ್ಯ ಇದೆಯೇ? ಇದರಿಂದ ಅಗುವ ಅಪಾಯಗಳೇನು? ಇಲ್ಲಿದೆ ನೋಡಿ. ಹಾಲಿನ ಪ್ಯಾಕೆಟ್ ಓಪನ್ ಮಾಡಿದ ನಂತರ ಅದನ್ನು ಒಂದು ಪಾತ್ರೆಯಲ್ಲಿ ಮುಚ್ಚಿ ರೆಫ್ರಿಜರೇಟರ್‌ನಲ್ಲಿ ಇಟ್ಟರೆ, ಮತ್ತೆ ಕುದಿಸುವ ಅಗತ್ಯವಿಲ್ಲ ಎಂದು ಆಹಾರ ತಜ್ಞೆ ಮತ್ತು ಮಧುಮೇಹ ಶಿಕ್ಷಣ ತಜ್ಞೆ ಕನಿಕಾ ಮಲ್ಹೋತ್ರಾ indianexpressಗೆ ಹೇಳಿದ್ದಾರೆ.
ಪಾಶ್ಚರೀಕರಿಸಿದ ಹಾಲನ್ನು ಶಾಖ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಆ ಕಾರಣದಿಂದ ಇದನ್ನು ಕುದಿಸುವ ಅಗತ್ಯವಿಲ್ಲ. ಒಂದು ವೇಳೆ ಕುದಿಸಿದ್ರೆ ಇದು ರೋಗವನ್ನು ಉಂಟುಮಾಡಬಹುದು. ಆದ್ದರಿಂದ ಪ್ಯಾಕ್‌ನಿಂದ ನೇರವಾಗಿ ಕುಡಿಯಲು ಸುರಕ್ಷಿತವಾಗಿದೆ .ಪಾಶ್ಚರೀಕರಿಸಿದ ಹಾಲು ಕಲುಷಿತವಾಗಿದೆ ಅಥವಾ ಕಳಪೆಯಾಗಿ ಸಂಗ್ರಹಿಸಲಾಗಿದ್ದರೆ ಮಾತ್ರ ಕುದಿಸಬೇಕು. ಅದರಲ್ಲೂ ಮನೆಯಲ್ಲಿ ಗೋವು ಇದ್ದು ಅದರ ಹಾಲನ್ನು ಕುದಿಸಿದರೆ ಪೌಷ್ಟಿಕಾಂಶದ ಸಂಯೋಜನೆಯೂ ಬದಲಾಗುತ್ತದೆ.
ಹಾಲನ್ನು ಕುದಿಸಿದರೆ ಅದರಲ್ಲಿರುವ ಬಿ1, ಬಿ2 (ರೈಬೋಫ್ಲಾವಿನ್), ಬಿ3, ಬಿ6 ಮತ್ತು ಫೋಲಿಕ್ ಆಮ್ಲ ಸೇರಿದಂತೆ ಶಾಖ-ಸೂಕ್ಷ್ಮ ಬಿ ಜೀವಸತ್ವಗಳು ಇಳಿಕೆ ಆಗಬಹುದು. 36% ಇದರ ಸತ್ವದಲ್ಲಿ ನಷ್ಟ ಆಗಬಹುದು. ಹಾಲಿನಲ್ಲಿ ಸಾಮಾನ್ಯವಾಗಿ ಕಂಡುಬರುವ ರಿಬೋಫ್ಲಾವಿನ್, ಕುದಿಸಿದಾಗ ಕಡಿಮೆ ಆಗುತ್ತದೆ. ಕುದಿಸುವುದರಿಂದ ಹಾಲಿನಲ್ಲಿರುವ ಕೆಲವು ಪ್ರೋಟೀನ್‌ಗಳು ಬದಲಾಗುತ್ತವೆ ಮತ್ತು ಅದರ ಕೊಬ್ಬಿನ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೆ ಅದರಲ್ಲಿರುವ ಒಟ್ಟು ಕೊಬ್ಬು ಮತ್ತು ಒಟ್ಟು ಕ್ಯಾಲ್ಸಿಯಂ ಗಮನಾರ್ಹವಾಗಿ ಬದಲಾಗುವುದಿಲ್ಲ.
ಇದನ್ನೂ ಓದಿ: ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳೇ ಯಾಕೆ ಫಸ್ಟ್ ಬರುವುದು? ಇಲ್ಲಿದೆ ನೋಡಿ ಕಾರಣ
ಹಾಲು ಕುದಿಸುವುದರಿಂದ ಹಾಲಿನಲ್ಲಿರುವ ಬ್ಯಾಕ್ಟೀರಿಯಾಗಳು ಸಾಯಬಹುದು , ಆದರೆ ಪಾಶ್ಚರೀಕರಿಸಿದ ಹಾಲನ್ನು ಕುದಿಸುವ ಅಗತ್ಯ ಇಲ್ಲ. ಇನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟ ಹಾಲನ್ನು ಬೇಗ ಖಾಲಿ ಮಾಡಬೇಕು. ಪಾಶ್ಚರೀಕರಿಸಿದ ಹಾಲಿನ ಪ್ಯಾಕೆಟ್‌ಗಳಲ್ಲಿ ಶಾಖ-ಸಂಸ್ಕರಿಸಲಾಗುತ್ತದೆ (ಸಾಮಾನ್ಯವಾಗಿ 72°C ನಲ್ಲಿ 15 ಸೆಕೆಂಡುಗಳ ಕಾಲ) ಹೆಚ್ಚಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ, ಪ್ಯಾಕೆಟ್ ಅನ್ನು ಹಾಗೆಯೇ ಬಳಸಿ ರೆಫ್ರಿಜರೇಟರ್‌ನಲ್ಲಿ ಇಟ್ಟರೆ ಕುದಿಸುವುದು ಅನಗತ್ಯವಾಗುತ್ತದೆ. ಹಸಿ ಹಾಲನ್ನು ಕುಡಿಯುವ ಮೊದಲು ಯಾವಾಗಲೂ ಕುದಿಸಬೇಕು. ಅದನ್ನು ಶಾಖ-ಸಂಸ್ಕರಣೆ ಮಾಡದಿದ್ದರೆ ಮತ್ತು ಒಳಗೆ ರೋಗಕಾರಕ ಅಂಶಗಳು ಇರಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ