AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭ ಕಾರ್ಯಗಳಿಗೆ ಹೊರಡುವ ವೇಳೆ ವಾಹನದ ಬಳಿ ತೆಂಗಿನಕಾಯಿ ಒಡೆಯುವುದು ಏಕೆ?

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಬಹಳ ಪ್ರಾಮುಖ್ಯತೆ ಇದೆ. ಈ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸುವುದ ಜೊತೆಗೆ ಹಿಂದೂ ಸಂಸ್ಕೃತಿಯಲ್ಲಿ ತೆಂಗಿನಕಾಯಿಯನ್ನು ಒಡೆಯುವ ಸಂಪ್ರದಾಯವೂ ಇದೆ. ಪೂಜೆ, ಯಾವುದೇ ಶುಭ ಕಾರ್ಯಗಳು ಆಗುವಾಗ, ಹೊಸ ವ್ಯಾಪಾರ ಶುರು ಮಾಡುವಾಗ, ಹೊಸ ವಾಹನ ಖರೀದಿ ಮಾಡುವ ಸಂದರ್ಭದಲ್ಲಿ ಹೀಗೆ ಪ್ರಮುಖ ಕಾರ್ಯಗಳ ಸಂದರ್ಭದಲ್ಲಿ ತೆಂಗಿನ ಕಾಯಿಯನ್ನು ಒಡೆಯುವ ವಾಡಿಕೆ ಇದೆ. ಅದೇ ರೀತಿ ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಹೊರಡುವ ಮುನ್ನ ವಾಹನ ಬಳಿ ತೆಂಗಿನಕಾಯಿನ್ನು ಒಡೆಯುವ ಜೊತೆಗೆ ವಾಹನ ಚಕ್ರದ ಕೆಳಗೆ ನಿಂಬೆ ಹಣ್ಣು ಇಡುವ ವಾಡಿಕೆ ಇದೆ. ಹೀಗೆ ಶುಭ ಕಾರ್ಯಗಳಿಗೆ ಹೋಗೋ ಮುನ್ನ ಏಕೆ ತೆಂಗಿನಕಾಯಿ ಒಡೆಯುವುದರ ಹಿಂದಿನ ಕಾರಣವನ್ನು ತಿಳಿಯಿರಿ.

ಮಾಲಾಶ್ರೀ ಅಂಚನ್​
|

Updated on:May 01, 2025 | 6:56 PM

Share
ಹೊಸ ವಾಹನ ಖರೀದಿಸಿದಾಗ, ಹೊಸ ವ್ಯಾಪಾರ ಶುರು ಮಾಡಿದಾಗ ತೆಂಗಿನಕಾಯಿ ಒಡೆಯುವಂತೆ, ಮದುವೆ ಇನ್ನಿತರೆ ಶುಭ ಸಮಾರಂಭಗಳಿಗೆ ಹೊರಡುವ ಮುನ್ನ ವಾಹನದ ಮುಂದೆ ತೆಂಗಿನಕಾಯಿ ಒಡೆಯುವ ವಾಡಿಕೆ ಇದೆ. ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದೊಂದು ಕಾರಣ ಮತ್ತು ಉದ್ದೇಶ ಇರುವಂತೆ, ಶುಭ ಸಮಾರಂಭಗಳಿಗೆ ಅಥವಾ ಮುಖ್ಯ ಕೆಲಸಗಳಿಗೆ ಹೊರಡುವ ಮುನ್ನ ವಾಹನಗಳ ಮುಂದೆ ತೆಂಗಿನಕಾಯಿ ಒಡೆಯುವ ಹಿಂದೆಯೂ ಹಲವು ಕಾರಣಗಳಿವೆ.

1 / 6
ಧಾರ್ಮಿಕ ಪ್ರಾಶಸ್ತ್ಯವನ್ನು ಹೊಂದಿರುವ ತೆಂಗಿನಕಾಯಿ  ಶುದ್ಧತೆ ಮತ್ತು ಸಕಾರಾತ್ಮಕ ಶಕ್ತಿಯ ಹಾಗೂ ಇದು ಒಂದು ರೀತಿಯ ಶುಭದ ಸಂಕೇತವಾಗಿದೆ. ಹಾಗಾಗಿ ನಕಾರಾತ್ಮಕತೆಯನ್ನು ಹೋಗಲಾಡಿಸಲು ಹಾಗೂ ಹೋಗುವ ಶುಭ ಕಾರ್ಯದಲ್ಲಿ ಯಾವುದೇ ವಿಘ್ನ ಬಾರದಿರಲು ತೆಂಗಿನಕಾಯಿಯನ್ನು ಒಡೆಯುತ್ತಾರೆ.

2 / 6
ಅದರಲ್ಲೂ ವಿಶೇಷವಾಗಿ ಮದುವೆ, ಇನ್ನಿತರೆ ಶುಭ ಕಾರ್ಯಗಳಿಗೆ ಹೋಗುವ ಸಂದರ್ಭದಲ್ಲಿ ಯಾವುದೇ ರೀತಿಯ ವಿಘ್ನಗಳು ಬಾರದಿರಲು, ಕಹಿ ಘಟನೆಗಳು ನಡೆಯದಿರಲು, ಹೋಗೋ ಕಾರ್ಯ ಸುಸೂತ್ರವಾಗಿ ನೆರವೇರಲು ಶುಭ ಕಾರ್ಯಗಳಿಗೆ ಹೊರಡುವ ಮುನ್ನ ವಾಹನದ ಸಮೀಪ ತೆಂಗಿನಕಾಯಿಯನ್ನು ಒಡೆಯುತ್ತಾರೆ.

3 / 6
ಕೆಲವು ಕಡೆ ಮದುವೆಯ ಬಳಿಕ ವಧು ಗಂಡನ ಮನೆಗೆ ಹೋಗು ಸಂದರ್ಭದಲ್ಲಿ ವಧು ವರರಿಗೆ ಯಾವುದೇ ದೃಷ್ಟಿ ತಾಕಬಾರದು, ಹೋಗುವಾಗ ಯಾವುದೇ ರೀತಿಯ ಅಪಘಾತಗಳು ಸಂಭವಿಸಬಾರದು ಎಂದು ಕಾರಿನ ಮುಂದೆ ತೆಂಗಿನ ಕಾಯಿ ಒಡೆಯುವ ಹಾಗೂ ಕಾರು ಹೊರಡುವಾಗ ಚಕ್ರಕ್ಕೆ ನಿಂಬೆ ಹಣ್ಣು ಇಡುವ ಸಂಪ್ರದಾಯವಿದೆ.

4 / 6
ತೆಂಗಿನಕಾಯಿ ಪವಿತ್ರ ಮತ್ತು ಶುದ್ಧತೆಯ ಸಂಕೇತವಾಗಿರುವುದರಿಂದ, ಅದನ್ನು ಒಡೆದಾಗ ಅದರಿಂದ ಚಿಮ್ಮುವ ನೀರು ಸಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಯಾವುದೇ ರೀತಿಯ ನಕಾರಾತ್ಮಕತೆ ,ತ್ತು ಕೆಟ್ಟ ದೃಷ್ಟಿಯನ್ನು ತಪ್ಪಿಸಲು ಶುಭ ಕಾರ್ಯಗಳ ಕಾರ್ಯಗಳಿಗೆ ಹೊರಡುವ ಮುನ್ನ ಮತ್ತು ಶುಭ ಕಾರ್ಯಗಳ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಒಡೆಯುವುದು ರೂಢಿಯಲ್ಲಿದೆ.

5 / 6
ಶುಭ ಕಾರ್ಯಗಳು ಮಾತ್ರವಲ್ಲದೆ ದೇವಸ್ಥಾನಗಳಿಗೆ ಹೋದ ಸಂದರ್ಭದಲ್ಲೂ ಹಲವರು ತೆಂಗಿನ ಕಾಯಿಯನ್ನು ಒಡೆಯುತ್ತಾರೆ. ಜೀವನದಲ್ಲಿ ಬರುವ ಅನಗತ್ಯ ತೊಂದರೆಗಳಿಂದ ಪರಿಹಾರ ಪಡೆಯಲು, ಇಷ್ಟಾರ್ಥಗಳು ಈಡೇರಲು, ಮುಂದೆ ಸಾಗುವ ಹಾದಿಯಲ್ಲಿ ಯಾವುದೇ ವಿಘ್ನಗಳು ಬರಬಾರದಂತೆ ಭಕ್ತಿಯಿಂದ ದೇವರ ಮುಂದೆ ತೆಂಗಿನಕಾಯಿ ಒಡೆಯುತ್ತಾರೆ.

6 / 6

Published On - 6:41 pm, Thu, 1 May 25

ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Follow Us
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​

ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ

ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?

ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ

ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ