AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಮದುವೆಯ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ದಾಂಪತ್ಯ ಜೀವನವೇ ಹಾಳಾಗಬಹುದು ಜೋಕೆ

ದಾಂಪತ್ಯ ಜೀವನ ಎನ್ನುವಂತಹದ್ದು, ನಂಬಿಕೆ, ಪರಸ್ಪರ ಪ್ರೀತಿ, ವಿಶ್ವಾಸದಿಂದ ನಿಂತಿರುತ್ತದೆ ಎಂದು ಹೇಳುತ್ತಾರೆ. ಆದರೆ ನೀವು ಮಾಡುವ ಒಂದಷ್ಟು ತಪ್ಪುಗಳು ನಿಮ್ಮ ಚಂದದ ಸಂಸಾರವನ್ನೇ ಹಾಳು ಮಾಡುತ್ತದೆ. ಹಾಗಾಗಿ ದಾಂಪತ್ಯ ಜೀವನ, ಸಂಬಂಧ ಗಟ್ಟಿಯಾಗಿರಬೇಕೆಂದರೆ ವಿವಾಹಿತರು ಈ ಕೆಲವೊಂದಿಷ್ಟು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.

Chanakya Niti: ಮದುವೆಯ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ದಾಂಪತ್ಯ ಜೀವನವೇ ಹಾಳಾಗಬಹುದು ಜೋಕೆ
ಆಚಾರ್ಯ ಚಾಣಕ್ಯImage Credit source: Getty Images
ಮಾಲಾಶ್ರೀ ಅಂಚನ್​
|

Updated on: May 01, 2025 | 6:56 PM

Share

ಆಚಾರ್ಯ ಚಾಣಕ್ಯರು (Chanakya) ತಮ್ಮ ನೀತಿಶಾಸ್ತ್ರದಲ್ಲಿ ಯಾರೊಂದಿಗೆ ಸ್ನೇಹ ಬೆಳೆಸಬೇಕು, ವೈವಾಹಿಕ ಜೀವನ ಸಂತೋಷದಿಂದ ಕೂಡಿರಲು ಏನು ಮಾಡಬೇಕು, ನಮ್ಮ ಶತ್ರು ಯಾರು, ನಮ್ಮ ಮಿತ್ರ ಯಾರು,  ಯಶಸ್ಸಿನ ಹಾದಿ ಹೀಗೆ ಜೀವನಕ್ಕೆ (Life) ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಹೇಳಿದ್ದಾರೆ. ಇದು ಇಂದಿಗೂ ನಮಗೆಲ್ಲರಿಗೂ ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶನದಂತಿದೆ. ಅದೇ ರೀತಿ ಚಾಣಕ್ಯರು ಯಾರೇ ಆದರೂ ಸರಿ ಮದುವೆಯಾದ ಬಳಿಕ ಈ ಕೆಲವೊಂದಿಷ್ಟು ತಪ್ಪುಗಳನ್ನು ಮಾಡಲೇಬಾರದು ಎಂಬುದನ್ನು ಹೇಳಿದ್ದಾರೆ. ಹೌದು ದಾಂಪತ್ಯ ಜೀವನ (married life) ಸುಖಕರವಾಗಿ ಸಾಗಲು, ಸಂಬಂಧ ಇನ್ನಷ್ಟು ಬಲಗೊಳ್ಳಲು ವಿವಾಹಿತರು ಕೆಲವೊಂದು ತಪ್ಪುಗಳನ್ನು ಮಾಡಬಾರದು ಎಂದಿದ್ದಾರೆ. ಅದು ಏನು ಎಂಬುದನ್ನು ನೋಡೋಣ ಬನ್ನಿ.

ಮದುವೆಯ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ:

ಬೇರೊಬ್ಬರ ಕಡೆ ಆಕರ್ಷಣೆಗೆ ಒಳಗಾಗುವುದು:

ವಿವಾಹಿತ ಮಹಿಳೆಯಾಗಿರಲಿ ಅಥವಾ ವಿವಾಹಿತ ಪುರುಷನಾಗಿರಲಿ ಬೇರೊಬ್ಬ ಮಹಿಳೆ, ಪರ ಪುರುಷನ ಆಕರ್ಷಣೆಗೆ ಒಳಗಾಗಬಾರದು ಅಥವಾ ಪ್ರೀತಿಯಲ್ಲಿ ಬೀಳಬಾರದು. ಇದು ಖಂಡಿತವಾಗಿಯೂ ಸುಂದರ ಸಂಸಾರವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯರು.

ಸುಳ್ಳು ಹೇಳುವುದು:

ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು, ನಂಬಿಕೆ ಪ್ರೀತಿ-ವಿಶ್ವಾಸದ ಮೇಲೆ ನಿಂತಿರುವಂತಹದ್ದು. ಹೀಗಿರುವಾಗ ಸುಳ್ಳುಗಳನ್ನು ಹೇಳುತ್ತಾ ಹೋದರೆ ಕೊನೆಗೊಂದು ದಿನ ಇದೇ ಸುಳ್ಳಿನ ಕಾರಣದಿಂದ ಸಂಸಾರ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು.

ಇದನ್ನೂ ಓದಿ
Image
ಹುಡುಗರಂತೆ ಗಡ್ಡ, ಮೀಸೆ ಬರುತ್ತಾ? ತಲೆಬಿಸಿ ಬೇಡ ಈ ರೀತಿ ಮಾಡಿ
Image
ನದಿಗಳಿಗೆ ನಾಣ್ಯ ಎಸೆಯುವುದರಿಂದ ಇಷ್ಟಾರ್ಥಗಳು ಈಡೇರುತ್ತಾ?
Image
ರೆಡ್ ವೈನ್ ಕುಡಿಯಬೇಕಾಗಿಲ್ಲ, ಮುಖಕ್ಕೆ ಹಚ್ಚಿ ನೋಡಿ!
Image
ಮನುಕುಲಕ್ಕೆ ಸಂದೇಶ ಸಾರಿದ ಮಹಾನ್‌ ಸಮಾಜ ಸುಧಾರಕ ಬಸವೇಶ್ವರರು

 ಅತಿಯಾದ ಕೋಪ:

ಆಚಾರ್ಯ ಚಾಣಕ್ಯರ ಪ್ರಕಾರ ಅತಿಯಾದ ಕೋಪವು ಒಂದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ದಾಂಪತ್ಯದಲ್ಲಿ ಗಂಡ ಹೆಂಡತಿ ಯಾವಾಗಲೂ ತಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ಕೋಪದಲ್ಲಿ  ದುಡುಕಿ ತೆಗೆದುಕೊಂಡ ನಿರ್ಧಾರವು ಇಬ್ಬರ ಭವಿಷ್ಯವನ್ನು ಹಾಳು ಮಾಡುತ್ತದೆ. ಆದ್ದರಿಂದ ಗಂಡ ಹೆಂಡತಿ ನಡುವೆ ಪ್ರೀತಿ ಇರಬೇಕೇ ವಿನಃ ಅತಿಯಾದ ಕೋಪ ಇರಬಾರದು.

ಇದನ್ನೂ ಓದಿ: ನದಿಗಳಿಗೆ ನಾಣ್ಯ ಎಸೆಯುವುದರಿಂದ ಇಷ್ಟಾರ್ಥಗಳು ಈಡೇರುತ್ತಾ? ಪ್ರೇಮಾನಂದ ಮಹಾರಾಜ್ ಹೇಳಿದ್ದೇನು?

ಕೀಳಾಗಿ ಕಾಣುವುದು:

ಗಂಡನಾದವನು ಹೆಂಡತಿಯನ್ನಾಗಿರಲಿ ಅಥವಾ ಪತ್ನಿಯಾದವಳು ತನ್ನ ಪತಿಯನ್ನು ಯಾವುದೇ ಕಾರಣಕ್ಕೂ ಕೀಳಾಗಿ ನೋಡಬಾರದು. ಹೌದು ನಾನೇ ಶ್ರೇಷ್ಠ ನನ್ನಿಂದಲೇ ನೀನು ಎಂಬ ದುರಹಂಕಾರವನ್ನು ತೋರಬಾರದು. ಬದಲಿಗೆ ಒಬ್ಬರನ್ನೊಬ್ಬರು ಸಮಾನವಾಗಿ ಕಾಣಬೇಕು. ಪರಸ್ಪರ ಗೌರವವನ್ನೂ ಕೊಡಬೇಕು.

ಪ್ರಾಮಾಣಿಕತೆ ತುಂಬಾ ಮುಖ್ಯ:

ಕೆಲ ಪುರುಷರು ಅಥವಾ ಮಹಿಳೆಯರು ಮದುವೆಯ ಬಳಿಕ ತಮ್ಮ ಸಂಗಾತಿಗೆ ಮೋಸ ಮಾಡುತ್ತಾರೆ. ಈ ರೀತಿ ಯಾವತ್ತೂ ಮೋಸ ಮಾಡಬಾರದು ಇದರಿಂದ ಸುಂದರ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಬೇಕು ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ