AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Tuna Day 2025: ಟ್ಯೂನ ಮೀನು ದಿನವನ್ನು ಆಚರಿಸಲು ಕಾರಣವೇನು? ಈ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

ಚಿಕನ್‌, ಮಟನ್‌ಗಳಂತೆ ಮೀನುಗಳಿಂದಲೂ ಕೂಡಾ ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಇದಂತೂ ಎಷ್ಟೋ ಮಂದಿಯ ಫೇವರೇಟ್‌ ಡಿಶ್.‌ ಅದರಲ್ಲೂ ಆಹಾರಕ್ಕಾಗಿ ಟ್ಯೂನ ಮೀನುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಿಂದಾಗಿ ಈ ಮೀನುಗಳ ಸಂತತಿ ಅಳಿವಿನಂಚಿನತ್ತ ಸಾಗಿದ್ದು, ಇವುಗಳ ಉಳಿವಿಗಾಗಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಮೇ 02 ರಂದು ವಿಶ್ವ ಟ್ಯೂನ ಮೀನು ದಿನವನ್ನು ಆಚರಿಸಲಾಗುತ್ತದೆ.

World Tuna Day 2025: ಟ್ಯೂನ ಮೀನು ದಿನವನ್ನು ಆಚರಿಸಲು ಕಾರಣವೇನು? ಈ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ
ವಿಶ್ವ ಟ್ಯೂನ ದಿನImage Credit source: Google
ಮಾಲಾಶ್ರೀ ಅಂಚನ್​
|

Updated on: May 02, 2025 | 9:44 AM

Share

ಬಂಗುಡೆ, ಬೂತಾಯಿ, ಸಿಲ್ವರ್‌ ಫಿಶ್‌, ಅಂಜಲ್‌ ಮೀನಿನಂತೆ (Fish)  ಟ್ಯೂನ (Tuna) ಎಂಬುದು ಒಂದು ಬಗೆಯ ಮೀನಾಗಿದ್ದು, ಪ್ರಪಂಚದಾದ್ಯಂತ ಇದಕ್ಕೆ ಭಾರೀ ಬೇಡಿಕೆಯಿದೆ. ಇತರೆ ಯಾವುದೇ ಮೀನುಗಳಿಗೆ ಹೋಲಿಸಿದರೆ ಟ್ಯೂನ ಮೀನಿನಲ್ಲಿ ಒಮೆಗಾ-3, ವಿಟಮಿನ್ ಬಿ12, ಪ್ರೋಟೀನ್‌, ವಿಟಮಿನ್‌ ಡಿ ಹೇರಳವಾಗಿದೆ. ಇದೇ ಕಾರಣಕ್ಕೆ ಈ ಮೀನಿಗೆ ಭಾರೀ ಬೇಡಿಕೆಯಿದೆ. ಹೀಗೆ ಅತಿಯಾದ ಮೀನುಗಾರಿಕೆಯ ಈ ಕಾರಣದಿಂದಾಗಿ ಟ್ಯೂನ ಮೀನುಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಸಮುದ್ರ ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸುವ ಟ್ಯೂನ ಮೀನುಗಳ ಸಂತತಿ ಅಳಿವಿನಂಚಿನತ್ತ ಸಾಗುತ್ತಿರುವುದು ವಿಷಾದನೀಯವಾಗಿದೆ. ಹೀಗಾಗಿ ಟ್ಯೂನ ಮೀನುಗಳ ಸಂತತಿಯನ್ನು ರಕ್ಷಿಸಲು, ಈ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಮೇ 2 ರಂದು ವಿಶ್ವ ಟ್ಯೂನ ಮೀನು (World Tuna Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ.

ವಿಶ್ವ ಟ್ಯೂನ ದಿನದ ಇತಿಹಾಸ:

ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಮೀನುಗಳಿವೆ . ಒಂದು ಸಂಶೋಧನೆಯ ಪ್ರಕಾರ, 30 ಸಾವಿರಕ್ಕೂ ಹೆಚ್ಚು ಜಾತಿಯ ಮೀನುಗಳಿವೆ, ಆದರೆ ಅವುಗಳಲ್ಲಿ ಟ್ಯೂನ ಮೀನುಗಳ ಅಸ್ತಿತ್ವ ಅಪಾಯದಲ್ಲಿದೆ. ಹಾಗಾಗಿ ಡಿಸೆಂಬರ್ 2016 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ವಿಶ್ವ ಟ್ಯೂನ ದಿನವನ್ನು ಆಚರಿಸುವುದಾಗಿ ಘೋಷಿಸಿತು. ವಿಶ್ವ ಟ್ಯೂನ ದಿನವನ್ನು ಮೊದಲ ಬಾರಿಗೆ 2017 ರಲ್ಲಿ ಆಚರಿಸಲಾಯಿತು. ಕ್ಷೀಣಿಸುತ್ತಿರುವ ಟ್ಯೂನ ಮೀನಿನ ಸಂತತಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಟ್ಯೂನ ಮೀನುಗಾರಿಕೆಯ ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ವಿಶೇಷ ದಿನದ ಆಚರಣೆಯನ್ನು ಪ್ರಾರಂಭಿಸಿತು.  ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ದೇಶದ ಪ್ರಗತಿಯ ಬಹುದೊಡ್ಡ ಶಕ್ತಿ ಕಾರ್ಮಿಕರು; ಶ್ರಮಜೀವಿಗಳ ದಿನದ ಮಹತ್ವ ತಿಳಿಯಿರಿ

ಇದನ್ನೂ ಓದಿ
Image
ಮದುವೆಯ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ
Image
ಹುಡುಗರಂತೆ ಗಡ್ಡ, ಮೀಸೆ ಬರುತ್ತಾ? ತಲೆಬಿಸಿ ಬೇಡ ಈ ರೀತಿ ಮಾಡಿ
Image
ನದಿಗಳಿಗೆ ನಾಣ್ಯ ಎಸೆಯುವುದರಿಂದ ಇಷ್ಟಾರ್ಥಗಳು ಈಡೇರುತ್ತಾ?
Image
ದೇಶದ ಪ್ರಗತಿಯ ಬಹುದೊಡ್ಡ ಶಕ್ತಿ ಕಾರ್ಮಿಕರು

 ವಿಶ್ವ ಟ್ಯೂನ ದಿನದ ಮಹತ್ವ:

ಆವಾಸಸ್ಥಾನ ನಷ್ಟ, ಅತಿಯಾದ ಮೀನುಗಾರಿಕೆ ಮತ್ತು ಗ್ರಾಹಕರ ಆದ್ಯತೆಗಳು ಸೇರಿದಂತೆ ಹಲವಾರು ಅಂಶಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಟ್ಯೂನ ಮೀನುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ. ಹಾಗಾಗಿ ಟ್ಯೂನ ಮೀನುಗಳ ಸಂತತಿ ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ದುರ್ಬಲ ಪ್ರಭೇದಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಟ್ಯೂನ ದಿನವನ್ನು ಆಚರಿಸಲಾಗುತ್ತದೆ.

ಹೆಚ್ಚಿನ ಟ್ಯೂನ ಮೀನುಗಳು ಮೆಡಿಟರೇನಿಯನ್ ಸಮುದ್ರ, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಕಂಡುಬರುತ್ತವೆ. 40 ಕ್ಕೂ ಹೆಚ್ಚು ಜಾತಿಗಳ ಟ್ಯೂನ ಮೀನುಗಳಿವೆ. ಆದರೆ ನಿರಂತರ ಮೀನುಗಾರಿಕೆಯಿಂದಾಗಿ , ಅದು ಈಗ ಅಳಿವಿನ ಅಂಚಿನಲ್ಲಿದೆ, ಆದ್ದರಿಂದ ಅವುಗಳನ್ನು ಅಳಿವಿನಿಂದ ರಕ್ಷಿಸಲು, ಪ್ರತಿ ವರ್ಷ ಮೇ 2 ರಂದು ‘ವಿಶ್ವ ಟ್ಯೂನ ದಿನ’ವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ