ರೆಡ್ ವೈನ್ ಕುಡಿಯಬೇಕಾಗಿಲ್ಲ, ಮುಖಕ್ಕೆ ಹಚ್ಚಿದರೆ ಸಾಕು ಈ ಸಮಸ್ಯೆ ಬರಲ್ಲ
ರೆಡ್ ವೈನ್ ನಿಮ್ಮ ಚರ್ಮಕ್ಕೆ ಕಾಂತಿ ನೀಡುವುದಲ್ಲದೆ ಯಾವಾಗಲೂ ತಾರುಣ್ಯದಿಂದ ಕೂಡಿರುವಂತೆ ಮಾಡುತ್ತವೆ. ಆ ಮೂಲಕ ಫ್ರೀ ರಾಡಿಕಲ್ ಗಳನ್ನು ದೂರವಿಡುತ್ತದೆ. ಇದು ನಮ್ಮ ಚರ್ಮಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ಕೆಲವು ಅಂಶಗಳು ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ ಮುಖಕ್ಕೆ ಕಾಂತಿ ನೀಡುತ್ತದೆ ಜೊತೆಗೆ ನಿಮ್ಮ ಚರ್ಮದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಹಾಗಾದರೆ ರೆಡ್ ವೈನ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ಚರ್ಮ (Skin) ಆರೋಗ್ಯವಾಗಿರಬೇಕು ಎಂಬುದು ಎಲ್ಲರ ಆಸೆ. ಅದಕ್ಕಾಗಿಯೇ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಈಗ ಕ್ರೀಮ್, ಲೋಷನ್ ಗಳ ಮೊರೆ ಹೋಗುವ ಬದಲು ರೆಡ್ ವೈನ್ ಬಳಸಿ ನೋಡಿ. ಇದನ್ನು ಕೇಳಿ ನಿಮಗೆ ಆಶ್ಚರ್ಯ ಆಗಬಹುದು ಆದರೆ ಇದು ಸತ್ಯ. ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಇದನ್ನು ಕುಡಿಯಬೇಕಾಗಿಲ್ಲ. ಬದಲಾಗಿ ರೆಡ್ ವೈನ್ (Red Wine) ಅನ್ನು ಮುಖಕ್ಕೆ ಸ್ವಲ್ಪ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಇದರಲ್ಲಿರುವ ಕೆಲವು ಅಂಶಗಳು ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ ಮುಖಕ್ಕೆ ಕಾಂತಿ ನೀಡುತ್ತದೆ ಜೊತೆಗೆ ನಿಮ್ಮ ಚರ್ಮದ ಆರೋಗ್ಯ (Health) ವನ್ನು ಕೂಡ ಕಾಪಾಡುತ್ತದೆ. ಹಾಗಾದರೆ ರೆಡ್ ವೈನ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಿ.
- ರೆಡ್ ವೈನ್ ಚರ್ಮಕ್ಕೆ ಕಾಂತಿ ನೀಡುವುದರ ಜೊತೆಗೆ ಫ್ರೀ ರಾಡಿಕಲ್ ಗಳನ್ನು ದೂರವಿಡುತ್ತದೆ. ಚರ್ಮವನ್ನು ಪರಿಸರ ಮಾಲಿನ್ಯದಿಂದ ರಕ್ಷಿಸುತ್ತದೆ.
- ಸೂರ್ಯನ ಬೆಳಕಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಅಥವಾ ಮೊಡವೆಗಳಿಂದಾಗಿ ಚರ್ಮದ ಮೇಲೆ ಕಪ್ಪು ಕಲೆಗಳು ಉಂಟಾಗುತ್ತದೆ. ಆದರೆ ಮುಖಕ್ಕೆ ರೆಡ್ ವೈನ್ ಹಚ್ಚುವುದರಿಂದ ಇದರಲ್ಲಿನ ಉತ್ಕರ್ಷಣ ನಿರೋಧಕಗಳು ಆ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
- ರೆಡ್ ವೈನ್ ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಜೊತೆಗೆ ಇದು ಚರ್ಮದ ಮೇಲಿನ ಕೊಳೆಯನ್ನು ತೆಗೆದು ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ರೆಡ್ ವೈನ್ ಸೀರಮ್ ಬಳಕೆ ಮಾಡಬಹುದು ಅಥವಾ ರೆಡ್ ವೈನ್ ಅನ್ನು ನೇರವಾಗಿ ಮುಖಕ್ಕೆ ಹಚ್ಚಬಹುದು.
- ರೆಡ್ ವೈನ್ ನಲ್ಲಿರುವ ಉತ್ಕರ್ಷಣ ನಿರೋಧಕಗಳು ಸೂರ್ಯನ ಬೆಳಕಿನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತವೆ. ಬಿಸಿಲಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು ನಿಯಮಿತವಾಗಿ ರೆಡ್ ವೈನ್ ಅನ್ನು ಮುಖಕ್ಕೆ ಹಚ್ಚಬಹುದು. ಅದಲ್ಲದೆ ಇದು ಕಾಲಾನಂತರದಲ್ಲಿ ಟ್ಯಾನಿಂಗ್ ಅನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕಾಲಜನ್ ಮಟ್ಟವನ್ನು ಹೆಚ್ಚಿಸುತ್ತದೆ, ಚರ್ಮ ನಯವಾಗಿರಲು ಸಹಾಯ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




