London Spirits Competition 2025: ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮದ್ಯ
ಲಂಡನ್ನಲ್ಲಿ ನಡೆದ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ವಿಸ್ಕಿ, ಜಿನ್, ರಮ್, ಫೆನಿ ಮತ್ತು ಇತರ ಮದ್ಯಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಭಾರತದ ಒಣ ಜಿನ್ನ್ನು ವಿಶ್ವದ ಅತ್ಯಧಿಕ ರೇಟಿಂಗ್ ಪಡೆದ ಸ್ಪಿರಿಟ್‌ಗಳಲ್ಲಿ ಹೆಸರಿಸಲಾಗಿದೆ. ಇನ್ನು ಭಾರತದ ಯಾವೆಲ್ಲ ಬ್ರಾಂಡ್ಗೆ ಚಿನ್ನ, ಬೆಳ್ಳಿ ಸಿಕ್ಕಿದೆ ಎಂಬ ಬಗ್ಗೆ ಇಲ್ಲಿದೆ ನೋಡಿ

ಭಾರತ ಎಲ್ಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಲ್ಲದರಲ್ಲೂ ಮುಂದೆ, ಅದರಲ್ಲೂ ಮದ್ಯ ಉತ್ಪಾದನೆಯಲ್ಲಿ ಒಂದು ಕೈ ಹೆಚ್ಚು. ಒಳ್ಳೆಯ ಬ್ರಾಂಡ್ಗಳನ್ನು ಭಾರತ ವಿಶ್ವಕ್ಕೆ ಪರಿಚಯಿಸಿದೆ. ಹಾಗಾಗಿ 2025ರಲ್ಲಿ ಲಂಡನ್ನಲ್ಲಿ ನಡೆದ ಸ್ಪಿರಿಟ್ಸ್ ಸ್ಪರ್ಧೆ (Spirits Competition) 2025ರಲ್ಲಿ ಭಾರತ ಶ್ರೀಮಂತ ಬ್ರಾಂಡ್ವೊಂದು ಸ್ಥಾನವನ್ನು ಪಡೆದಿದೆ. ಸ್ಪಿರಿಟ್ಸ್ ಸ್ಪರ್ಧೆಯ 8 ನೇ ಆವೃತ್ತಿಯ ವಿಜೇತರಲ್ಲಿ ಇದು ಒಂದಾಗಿದೆ. ಲಂಡನ್ನಲ್ಲಿ ನಡೆದ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ವಿಸ್ಕಿ, ಜಿನ್, ರಮ್, ಫೆನಿ ಮತ್ತು ಇತರ ಮದ್ಯಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಭಾರತದ ಒಣ ಜಿನ್ನ್ನು (jin jiji gin) ವಿಶ್ವದ ಅತ್ಯಧಿಕ ರೇಟಿಂಗ್ ಪಡೆದ ಸ್ಪಿರಿಟ್‌ಗಳಲ್ಲಿ ಹೆಸರಿಸಲಾಗಿದೆ. ಈ ಬಗ್ಗೆ ಎನ್ಡಿಟಿವಿ ವರದಿ ಮಾಡಿದೆ.
ಪಾನೀಯ ವ್ಯಾಪಾರ ಜಾಲದಿಂದ ವಾರ್ಷಿಕವಾಗಿ ಆಯೋಜಿಸಲ್ಪಡುವ ಈ ಅಂತರರಾಷ್ಟ್ರೀಯ ಸ್ಪರ್ಧೆಯು ಬ್ರ್ಯಾಂಡ್‌ಗಳಿಗೆ ಅವುಗಳ ಸ್ಪಿರಿಟ್‌ಗಳ ಗುಣಮಟ್ಟ, ಮೌಲ್ಯ ಮತ್ತು ಪ್ಯಾಕೇಜಿಂಗ್ ಆಧಾರದ ಮೇಲೆ ಬಹುಮಾನ ನೀಡುತ್ತದೆ. ಈ ಸ್ಪರ್ಧೆಯು ವ್ಯಾಪಾರ ಮತ್ತು ಗ್ರಾಹಕರ ಮೇಲೆ ಕೇಂದ್ರೀಕರಿಸುವ ವಿಶಿಷ್ಟ ಕೆಲಸವನ್ನು ಮಾಡಿದೆ, ಈ ವರ್ಷ ಯಾವ ಭಾರತೀಯ ಸ್ಪಿರಿಟ್ನ್ನು ಆಯ್ಕೆ ಮಾಡಲಾಗಿದೆ. ಭಾರತದ ಯಾವ ಬ್ರಾಂಡ್ ಚಿನ್ನ ಗೆದ್ದಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಚಿನ್ನ ಗೆದ್ದ ಭಾರತೀಯ ಸ್ಪಿರಿಟ್ಸ್:
ಭಾರತಕ್ಕೆ 2025ರ ಸ್ಪಿರಿಟ್ ಸ್ಪರ್ಧೆಯಲ್ಲಿ ಜಿನ್ ಜಿಜಿ ಇಂಡಿಯಾ ಡ್ರೈ ಜಿನ್ ಚಿನ್ನ ಗೆದ್ದಿದೆ. 98 ರ್ಯಾಂಕ್ ಪಡೆದಿದ್ದು, ಇದು ಈ ವರ್ಷದ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಸ್ಪಿರಿಟ್ ಆಗಿದೆ. ಇನ್ನು ಜಿನ್ ಜಿಜಿ ಡಾರ್ಜಿಲಿಂಗ್ ಜಿನ್ 92 ಅಂಕ ಪಡೆಯುವ ಮೂಲಕ ಬೆಳ್ಳಿಯನ್ನು ತನ್ನದಾಗಿಸಿಕೊಂಡಿದೆ.
ಪಾಲ್ ಜಾನ್ ಇಂಡಿಯನ್ ಸಿಂಗಲ್ ಮಾಲ್ಟ್ ವಿಸ್ಕಿ ಬ್ರಿಲಿಯನ್ಸ್ 96 ಅಂಕಗಳೊಂದಿಗೆ ಚಿನ್ನ ಗೆದ್ದಿದೆ. ಈ ವರ್ಷದ ಅತ್ಯುತ್ತಮ ಭಾರತೀಯ ಸಿಂಗಲ್ ಮಾಲ್ಟ್ ವಿಸ್ಕಿ ಎಂದು ಹೆಸರಿಸಲಾಯಿತು.
ಸೀಗ್ರಾಮ್‌ನ ರೇಖಾಂಶ 77 ಭಾರತೀಯ ಸಿಂಗಲ್ ಮಾಲ್ಟ್ ವಿಸ್ಕಿ 95 ಅಂಕ ಪಡೆದು ಚಿನ್ನ ಪಡದುಕೊಂಡಿದೆ.
ಅಮೃತ್ ಮಾಸ್ಟರ್ ಡಿಸ್ಟಿಲ್ಲರ್‌ನ ರಿಸರ್ವ್ 2024 ವಿಸ್ಕಿ 95 ಅಂಕ ಪಡೆದು ಚಿನ್ನ ಗೆದ್ದಿತು.
ಜೈಸಲ್ಮೇರ್ – ಭಾರತೀಯ ಕ್ರಾಫ್ಟ್ ಜಿನ್ 95 ಅಂಕ ಪಡೆದು ಚಿನ್ನ ಗೆದ್ದಿದೆ.
ಬ್ಯಾರೆಲ್ ಏಜ್ಡ್ ಫೆನಿ – ಸೆಂಟಾರಿ 95 ಅಂಕ ಪಡೆದು ಚಿನ್ನ ಗೆದ್ದಿದೆ.
ಇದನ್ನೂ ಓದಿ: ಹಲ್ಲಿ ಕಚ್ಚಿದ್ರೆ ಏನ್ ಮಾಡಬೇಕು? ಇದರಿಂದ ಮನುಷ್ಯ ಸಾಯುತ್ತಾನಾ?
ಬೆಳ್ಳಿ ಗೆದ್ದ ಭಾರತೀಯ ಸ್ಪಿರಿಟ್‌ಗಳು
ರಾಂಪುರ ಅಸವ ವಿಸ್ಕಿ
ಕ್ರಾಫ್ಟರ್ಸ್ ರಿಸರ್ವ್ ವಿಸ್ಕಿ
ಆಲ್ ಸೀಸನ್ ಸರ್ ಇ ತಾಜ್ ವಿಸ್ಕಿ
ಭಾರತದ ಏಕ ಮಾಲ್ಟ್‌ಗಳು ಮರುಧಮ್
ಗೋದವಾನ್ ಸಿಂಗಲ್ ಮಾಲ್ಟ್ ಹಣ್ಣು ಮತ್ತು ಮಸಾಲೆ ಇರುವ ವಿಸ್ಕಿ
ಗೋದಾವನ್ ಸಿಂಗಲ್ ಮಾಲ್ಟ್ ವಿಸ್ಕಿ
ರೂಲೆಟ್ ಅನ್‌ಪೀಟೆಡ್ ಪ್ರೀಮಿಯಂ ವಿಸ್ಕಿ
ಅಮೃತ್ ಇಂಡಿಯನ್ ಸಿಂಗಲ್ ಮಾಲ್ಟ್ ವಿಸ್ಕಿ
ಸೆಕರ್ ಡ್ರೈ ಜಿನ್ಸೆಕರ್
ಮಲ್ಬೆರಿ ಜಿನ್
ಜೈಸಲ್ಮೇರ್ – ಗೋಲ್ಡ್ ಎಡಿಷನ್ ಜಿನ್
ಬೊಮ್ ಬೇ ಬ್ಲಾಂಚೆ ಡ್ರೈ ಜಿನ್
ಸೋಸಿ ಜಿನ್
IDAAYA – ಹಿಮಾಲಯನ್ ಸಿಪ್ಪಿಂಗ್ ರಮ್
ಮಿಕಿಯಾಮೊ ಲಿಮೊನ್ಸೆಲ್ಲೊ
ಇದಲ್ಲದೆ, ಭಾರತೀಯ ಬ್ರ್ಯಾಂಡ್‌ಗಳು ಆಲ್ಕೊಹಾಲ್ಯುಕ್ತವಲ್ಲದ ವಿಭಾಗಗಳಲ್ಲಿಯೂ ಮನ್ನಣೆ ಗಳಿಸಿವೆ. ಭಾರತದ ಜಿಮ್ಮೀಸ್ ಒರಿಜಿನಲ್ ಟಾನಿಕ್ ವಾಟರ್ 2025 ರ “ಬಿಟರ್ಸ್ ಅಂಡ್ ಮಿಕ್ಸರ್ಸ್ ಆಫ್ ದಿ ಇಯರ್” ಜಾಗತಿಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತದ ಸೋಬ್ರಿಯಟಿ ಸಿಪ್ಸ್ / ಡೆಕಾಫ್ ಮಾರ್ಟಿನಿ (ಡ್ರೈಫ್ಯೂಷನ್ ಮಿಕ್ಸಾಲಜಿ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದೆ) “ಆಲ್ಕೊಹಾಲ್ಯುಕ್ತವಲ್ಲದ ಸ್ಪಿರಿಟ್ಸ್” ವಿಭಾಗದಲ್ಲಿ ಬೆಳ್ಳಿ ಗೆದ್ದಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ