May Festival List 2025: ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾವುವು? ಇಲ್ಲಿದೆ ಮಾಹಿತಿ
ಕಣ್ಣು ಮುಚ್ಚಿ ಬಿಡುವುದರೊಳಗೆ ಏಪ್ರಿಲ್ ತಿಂಗಳು ಮುಗಿದು ಹೋದದ್ದು ತಿಳಿಯಲೇ ಇಲ್ಲ. ನಾವೀಗ ವರ್ಷದ ನಾಲ್ಕನೇ ತಿಂಗಳಾದ ಏಪ್ರಿಲ್ ಕಳೆದು ಮೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಈ ತಿಂಗಳಿನಲ್ಲಿ ಪ್ರಮುಖವಾದ ಹಬ್ಬಗಳನ್ನು ಆಚರಿಸಲಾಗುತ್ತದೆ.ಹಾಗಾದ್ರೆ ಈ ವರ್ಷದ ಐದನೇ ತಿಂಗಳಾದ ಮೇ ತಿಂಗಳಿನಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ.

ಸಾಂದರ್ಭಿಕ ಚಿತ್ರImage Credit source: Pinterest
ಹಿಂದೂ (hindu) ಧರ್ಮದಲ್ಲಿ ವರ್ಷಪೂರ್ತಿ ವಿವಿಧ ಹಬ್ಬ (festivals) ಆಚರಣೆಗಳಿರುತ್ತದೆ. ಹೀಗಾಗಿ ಪ್ರತಿ ತಿಂಗಳು ಆರಂಭವಾಗುತ್ತಿದ್ದಂತೆ ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳಿವೆ ಎಂದು ನೋಡುತ್ತೇವೆ. ಇದೀಗ ಮೇ (may) ತಿಂಗಳಿಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳು ಬಹಳ ಪ್ರಮುಖ ತಿಂಗಳುಗಳಲ್ಲಿ ಒಂದು. ಹಿಂದೂ ಕ್ಯಾಲೆಂಡರ್ ಪ್ರಕಾರವಾಗಿ ಜ್ಯೇಷ್ಠ ಮಾಸವು ಈ ತಿಂಗಳಿನಲ್ಲಿಯೇ ಆರಂಭವಾಗಲಿದ್ದು, ಸಂಕಷ್ಟಿ ಚತುರ್ಥಿ, ಬುದ್ಧ ಪೂರ್ಣಿಮಾ ಸೇರಿದಂತೆ ವಿವಿಧ ಹಬ್ಬಗಳಿವೆ. ಹಾಗಾದ್ರೆ ಮೇ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು ಯಾವೆಲ್ಲಾ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ:
- ಮೇ 1 – ವಿನಾಯಕ ಚತುರ್ಥಿ
- ಮೇ 2- ಸೂರದಾಸರ ಜಯಂತಿ
- ಮೇ -2 ಸ್ಕಂದ ಷಷ್ಠಿ
- ಮೇ 2- ಶಂಕರಾಚಾರ್ಯ ಜಯಂತಿ
- ಮೇ 2- ರಾಮಾನುಜ ಜಯಂತಿ
- ಮೇ 3 – ಗಂಗಾ ಸಪ್ತಮಿ
- ಮೇ 4- ಅಗ್ನಿ ನಕ್ಷತ್ರ ಆರಂಭ
- ಮೇ 4 – ಭಾನು ಸಪ್ತಮಿ
- ಮೇ 5- ಸೀತಾ ನವಮಿ
- ಮೇ 5 – ಮಾಸಿಕ ದುರ್ಗಾಷ್ಟಮಿ
- ಮೇ 8- ಏಕಾದಶಿ
- ಮೇ 8- ಪರಶುರಾಮ ದ್ವಾದಶಿ
- ಮೇ 9 – ಪ್ರದೋಷ ವ್ರತ
- ಮೇ 11- ನರಸಿಂಹ ಜಯಂತಿ
- ಮೇ 11- ಛಿನ್ನಮಸ್ತ ಜಯಂತಿ
- ಮೇ 12- ಬುದ್ಧ ಪೂರ್ಣಿಮಾ
- ಮೇ 12 – ಚಿತ್ತಾ ಪೌರ್ಣಮಿ
- ಮೇ 12 – ವೈಶಾಖ ಪೌರ್ಣಮಿ
- ಮೇ 12- ವೈಶಾಖ ಪೂರ್ಣಿಮಾ ಉಪವಾಸ
- ಮೇ 12 – ಅನ್ವಧನ್
- ಮೇ 13 – ನಾರದರ ಜನ್ಮ ದಿನ
- ಮೇ 15- ವೃಷಭ ಸಂಕ್ರಾಂತಿ
- ಮೇ 16 – ಏಕದಂತ ಸಂಕಷ್ಟಿ ಚತುರ್ಥಿ
- ಮೇ 20 – ಕಲಾಷ್ಟಮಿ
- ಮೇ 22 – ಹನುಮಾನ್ ಜಯಂತಿ
- ಮೇ 23- ಏಕಾದಶಿ
- ಮೇ 24- ಶನಿ ತ್ರಯೋದಶಿ
- ಮೇ 24- ಪ್ರದೋಷ ವ್ರತ
- ಮೇ 25- ಮಾಸಿಕ ಶಿವರಾತ್ರಿ
- ಮೇ 25- ವಟ ಸಾವಿತ್ರಿ ವ್ರತ
- ಮೇ 26- ದರ್ಶ ಅಮಾವಾಸ್ಯೆ
- ಮೇ 27- ಶನಿ ಜಯಂತಿ
- ಮೇ 27- ರೋಹಿಣಿ ವ್ರತ
- ಮೇ 27 – ಜ್ಯೇಷ್ಠ ಅಮಾವಾಸ್ಯೆ
- ಮೇ 28- ಚಂದ್ರ ದರ್ಶನ
- ಮೇ 29 – ಮಹಾರಾಣಾ ಪ್ರತಾಪ್ ಜಯಂತಿ
- ಮೇ 30- ವಿನಾಯಕ ಚತುರ್ಥಿ
Published On - 6:41 pm, Mon, 28 April 25








