AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oxygen Cylinder: ಆಸ್ಪತ್ರೆಗೆ ಆಕ್ಸಿಜನ್​ ನೀಡಲು ಮುಂದಾದ ನಟಿ ಸುಶ್ಮಿತಾ ಸೇನ್​​ಗೆ ತಪ್ಪಲಿಲ್ಲ ಟ್ರೋಲ್ ಕಾಟ

Sushmita Sen: ದಿನದಿಂದ ದಿನಕ್ಕೆ ಕೊವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲದಂತಾಗಿದೆ. ಅಲ್ಲದೆ, ಆಕ್ಸಿಜನ್​ ಸಿಲಿಂಡರ್​ಗಳ ತೀವ್ರ ಕೊರತೆ ಉಂಟಾಗಿದೆ.

Oxygen Cylinder: ಆಸ್ಪತ್ರೆಗೆ ಆಕ್ಸಿಜನ್​ ನೀಡಲು ಮುಂದಾದ ನಟಿ ಸುಶ್ಮಿತಾ ಸೇನ್​​ಗೆ ತಪ್ಪಲಿಲ್ಲ ಟ್ರೋಲ್ ಕಾಟ
ನಟಿ ಸುಶ್ಮಿತಾ ಸೇನ್​
ಮದನ್​ ಕುಮಾರ್​
|

Updated on: Apr 23, 2021 | 12:32 PM

Share

ಕೊರೊನಾ ವೈರಸ್​ ಹಾವಳಿಗೆ ಇಡೀ ದೇಶವೇ ತತ್ತರಿಸುತ್ತಿದೆ. ಎಲ್ಲ ವಯೋಮಾನದವರು ಈ ಮಾಹಾಮಾರಿಗೆ ಟಾರ್ಗೆಟ್​ ಆಗುತ್ತಿದ್ದಾರೆ. ಈ ಬಾರಿ ಮಹಾನಗರಗಳಲ್ಲಿ ಕೊವಿಡ್​ ಕಾಟ ಹೆಚ್ಚಾಗಿದೆ. ಎಲ್ಲೆಲ್ಲೂ ಭಯಾನಕ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಅದರಲ್ಲೂ ಉಸಿರಾಟ ಸಂಬಂಧಿ ಕಾಯಿಲೆ ಇರುವವರು ಆಕ್ಸಿಜನ್​ ಸಿಲಿಂಡರ್​ ಕೊರತೆಯಿಂದ ಬಳಲುವಂತಾಗಿದೆ. ಈ ಸಂದರ್ಭದಲ್ಲಿ ಸಹಾಯ ಮಾಡಲು ಬಂದ ಬಾಲಿವುಡ್​ ನಟಿ ಸುಶ್ಮಿತಾ ಸೇನ್ ಅವರನ್ನು ಕೆಲವರು ಟ್ರೋಲ್​ ಮಾಡಿದ್ದಾರೆ.

ದಿನದಿಂದ ದಿನಕ್ಕೆ ಕೊವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲದಂತಾಗಿದೆ. ಅಲ್ಲದೆ, ಆಕ್ಸಿಜನ್​ ಸಿಲಿಂಡರ್​ಗಳ ಕೊರತೆ ಉಂಟಾಗಿದೆ. ದೆಹಲಿಯ ಒಂದು ಆಸ್ಪತ್ರೆಯಲ್ಲಿ ಆಕ್ಸಿಜನ್​ ಇಲ್ಲದೇ ರೋಗಿಗಳು ಪರದಾಡುತ್ತಿರುವುದು ನಟಿ ಸುಶ್ಮಿತಾ ಸೇನ್​ ಅವರ ಗಮನಕ್ಕೆ ಬಂದ ತಕ್ಷಣ ಅವರು ಸಹಾಯ ಮಾಡಲು ಮುಂದಾದರು. ಕೈಲಾದಷ್ಟು ಆಕ್ಸಿಜನ್​ ಸಿಲಿಂಡರ್​ಗಳನ್ನು ವ್ಯವಸ್ಥೆ ಮಾಡಿದರು. ಆದರೆ ಅವುಗಳನ್ನು ಮುಂಬೈನಿಂದ ದೆಹಲಿಗೆ ಕಳಿಸುವುದು ಹೇಗೆ ಎಂಬ ಚಿಂತೆ ಅವರಿಗೆ ಎದುರಾಯಿತು.

ಈ ಸಮಸ್ಯೆಯನ್ನು ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡರು. ಅನೇಕರಿಂದ ಹಲವು ಬಗೆಯ ಪ್ರತಿಕ್ರಿಯೆಗಳು ಬಂದವು. ಅಷ್ಟರಲ್ಲಾಗಲೇ ದೆಹಲಿಯ ಆಸ್ಪತ್ರೆಗೆ ಆಕ್ಸಿಜನ್​ ವ್ಯವಸ್ಥೆ ಬೇರೆ ಕಡೆಯಿಂದ ಆಯಿತು ಎಂಬ ವಿಷಯ ತಿಳಿದು ಸುಶ್ಮಿತಾ ನಿಟ್ಟುಸಿರು ಬಿಟ್ಟರು. ಆದರೆ ಈ ನಡುವೆ ಅವರನ್ನು ಕೆಲವರು ಟ್ರೋಲ್​ ಮಾಡಿದ್ದಾರೆ. ಮುಂಬೈನಲ್ಲಿಯೇ ಪರಿಸ್ಥಿತಿ ಹದಗೆಡುತ್ತಿರುವಾಗ ನೀವು ಆಕ್ಸಿಜನ್​ ಸಿಲಿಂಡರ್​ಗಳನ್ನು ದೆಹಲಿಗೆ ನೀಡುವ ಅವಶ್ಯಕತೆ ಏನಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಆಕ್ಸಿಜನ್​ ಕೊರತೆ ಎಲ್ಲ ಕಡೆಗೂ ಇದೆ. ಇದೇ ಸಿಲಿಂಡರ್​ಗಳನ್ನು ಮುಂಬೈನ ಯಾವುದಾದರೂ ಆಸ್ಪತ್ರೆಗೆ ನೀಡಬಾರದೇಕೆ ಎಂದು ವ್ಯಕ್ತಿಯೊಬ್ಬರು ಮಾಡಿದ ಕಾಮೆಂಟ್​ಗೆ ಸುಶ್ಮಿತಾ ತಿರುಗೇಟು ನೀಡಿದ್ದಾರೆ. ‘ಮುಂಬೈನಲ್ಲಿ ಇನ್ನೂ ಆಕ್ಸಿಜನ್​ ಸಿಲಿಂಡರ್​ಗಳು ಸಿಗುತ್ತಿವೆ. ಆದರೆ ದೆಹಲಿಗೆ ಇದರ ಅನಿವಾರ್ಯತೆ ಹೆಚ್ಚಿದೆ. ಅದರಲ್ಲೂ ಚಿಕ್ಕ ಆಸ್ಪತ್ರೆಗಳಿಗೆ ಹೆಚ್ಚು ಅವಶ್ಯಕತೆ ಇದೆ. ನಿಮ್ಮ ಕೈಯಲ್ಲಿ ಸಾಧ್ಯವಾದರೆ ಸಹಾಯ ಮಾಡಿ’ ಎಂದು ಸುಶ್ಮಿತಾ ಉತ್ತರಿಸಿದ್ದಾರೆ.

ಮುಂಬೈನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಏ.14ರಿಂದ 15 ದಿನಗಳ ಲಾಕ್​ಡೌನ್​ ಜಾರಿಯಲ್ಲಿದೆ. ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಅನೇಕ ಸೆಲೆಬ್ರಿಟಿಗಳು ಮುಂಬೈ ತೊರೆದು ಬೇರೆ ಊರುಗಳಿಗೆ ತೆರಳುತ್ತಿದ್ದಾರೆ.

ಇದನ್ನೂ ಓದಿ: Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್​ ರಾಥೋಡ್​ ಕೊರೊನಾ ವೈರಸ್​ನಿಂದ ನಿಧನ; ಚಿತ್ರರಂಗಕ್ಕೆ ಆಘಾತ

ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

(Actress Sushmita Sen replies to Twitter user who criticized her for sending oxygen cylinders to Delhi from Mumbai)

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?