AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಮ್‌ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್‌ಗೆ ಮಾತ್ರ : ಬ್ರೋ ಕೋಡ್’ ಸಂಸ್ಕೃತಿ ವೈರಲ್

ಇತ್ತೀಚೆಗೆ 'ಜಿಮ್ ಸಿಂಗಲ್ಸ್‌ಗೆ ಮಾತ್ರ' ಎಂಬ ಮೀಮ್ ವೈರಲ್ ಆಗಿದೆ. ಇದು ಕೇವಲ ತಮಾಷೆಯ 'ಬ್ರೋ ಕೋಡ್' ಭಾಗವೇ ಹೊರತು ವೈಜ್ಞಾನಿಕವಲ್ಲ. ಪ್ರೀತಿಯಲ್ಲಿ ಸೋತವರು 'ರಿವೆಂಜ್ ಬಾಡಿ'ಗಾಗಿ ಜಿಮ್ ಸೇರುತ್ತಾರೆ. ಸಿಂಗಲ್ಸ್ ಆಗಿದ್ದಾಗ ಮೊಬೈಲ್ ಕಾಲ್ ಇಲ್ಲದೆ ವರ್ಕೌಟ್ ಮೇಲೆ ಸಂಪೂರ್ಣ ಗಮನ ಹರಿಸಬಹುದು. ಪ್ರೇಮಿಗಳು ಜಿಮ್‌ನಲ್ಲಿ ಹರಟೆ ಹೊಡೆಯುವ ಬದಲು, ಗಂಭೀರ ವರ್ಕೌಟ್‌ಗೆ ಸಿಂಗಲ್ಸ್ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ ಎಂಬುದು ಇದರ ಹಿಂದಿನ ವಾದ.

ಜಿಮ್‌ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್‌ಗೆ ಮಾತ್ರ : ಬ್ರೋ ಕೋಡ್' ಸಂಸ್ಕೃತಿ ವೈರಲ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Mar 06, 2026 | 9:34 AM

Share

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ “ಜಿಮ್‌ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್‌ಗೆ ಮಾತ್ರ” ಎಂಬ ಮಾತುಗಳು ಮತ್ತು ಮೀಮ್ಸ್‌ಗಳು (Memes) ಸಾಕಷ್ಟು ವೈರಲ್ ಆಗುತ್ತಿವೆ. ಆದರೆ,  ವೈಜ್ಞಾನಿಕವಾಗಿ ಇಂತಹ ಯಾವುದೇ ನಿಯಮವಿಲ್ಲ. ಇದು ಕೇವಲ ತಮಾಷೆಗಾಗಿ ಹಾಗೂ ಕೆಲವೊಂದು ‘ಬ್ರೋ ಕೋಡ್’ (Bro Code) ಸಂಸ್ಕೃತಿಯ ಭಾಗವಾಗಿ ವೈರಲ್​​ ಮಾಡುತ್ತಿದ್ದಾರೆ.

ಅನೇಕ ಫಿಟ್‌ನೆಸ್ ಪ್ರಿಯರು ಜಿಮ್ ಅನ್ನು ತಮ್ಮ ಶಕ್ತಿ ಮತ್ತು ಏಕಾಗ್ರತೆಯ ಕೇಂದ್ರವೆಂದು ಪರಿಗಣಿಸುತ್ತಾರೆ. “ಲವ್” ಅಥವಾ ಸಂಬಂಧದಲ್ಲಿದ್ದಾಗ ಮನಸ್ಸು ಬೇರೆಡೆಗೆ ಹರಿಯಬಹುದು ಹಾಗೂ ಜಿಮ್‌ನಲ್ಲಿ ಸಂಗಾತಿಯೊಂದಿಗೆ ಕಾಲಹರಣ ಮಾಡಬಹುದು ಎಂಬ ಕಾರಣಕ್ಕೆ, ಸಿಂಗಲ್ ಆಗಿದ್ದಾಗ ಮಾತ್ರ ದೇಹದ ಮೇಲೆ ಸಂಪೂರ್ಣ ಗಮನ ಹರಿಸಲು ಸಾಧ್ಯ ಎಂಬುದು ಅನೇಕರ ವಾದ.

ಸಾಮಾನ್ಯವಾಗಿ ಪ್ರೀತಿಯಲ್ಲಿ ಸೋತವರು  ತಮ್ಮ ನೋವನ್ನು ಮರೆಯಲು ಮತ್ತು ತಮ್ಮನ್ನು ತಾವು ಉತ್ತಮವಾಗಿ ರೂಪಿಸಿಕೊಳ್ಳಲು ಜಿಮ್ ಸೇರುತ್ತಾರೆ. ಇದನ್ನು “Revenge Body” ಎನ್ನಲಾಗುತ್ತದೆ. ಹೀಗಾಗಿ, ಜಿಮ್ ಎಂಬುದು ಕೇವಲ ದೈಹಿಕ ವ್ಯಾಯಾಮಕ್ಕಲ್ಲ, ಮಾನಸಿಕವಾಗಿ ಗಟ್ಟಿಯಾಗಲು ಬಯಸುವ ‘ಸಿಂಗಲ್ಸ್’ಗೆ ಇರುವ ಜಾಗ ಎಂಬ ಭಾವನೆ ಮೂಡಿದೆ.

ಇದನ್ನೂ ಓದಿ: ‘ವಿಶ್ವದ ಅತ್ಯುತ್ತಮ ಆಗಮನ ನಿಲ್ದಾಣ’ ಪ್ರಶಸ್ತಿ ಪಡೆದ ಕೆಂಪೇಗೌಡ ವಿಮಾನ ನಿಲ್ದಾಣ: ವೇಗ, ಸ್ವಚ್ಛತೆ ಎಲ್ಲದರಲ್ಲೂ ನಂಬರ್​​ ಒನ್

ಜಿಮ್‌ಗೆ ಜೋಡಿಯಾಗಿ ಬರುವವರು ವರ್ಕೌಟ್ ಮಾಡುವುದಕ್ಕಿಂತ ಹೆಚ್ಚಾಗಿ ಹರಟೆ ಹೊಡೆಯುತ್ತಾರೆ ಅಥವಾ ಫೋಟೋ ಶೂಟ್‌ನಲ್ಲಿ ಬ್ಯುಸಿಯಾಗಿರುತ್ತಾರೆ ಎಂಬ ಟೀಕೆಗಳಿವೆ. ಇದು ಸೀರಿಯಸ್ ಆಗಿ ವರ್ಕೌಟ್ ಮಾಡುವವರಿಗೆ ಕಿರಿಕಿರಿ ಉಂಟುಮಾಡಬಹುದು. ಹಾಗಾಗಿ, “ಸಿಂಗಲ್ಸ್ ಮಾತ್ರ ಬನ್ನಿ” ಎಂಬ ಜೋಕ್ ವೈರಲ್ ಆಗುತ್ತಿದೆ. ಸಿಂಗಲ್ಸ್ ಆಗಿದ್ದಾಗ ಯಾರ ಮೆಸೇಜ್ ಅಥವಾ ಕರೆಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ. ಮೊಬೈಲ್ ಪಕ್ಕಕ್ಕಿಟ್ಟು ಕೇವಲ ತೂಕ ಎತ್ತುವ ಕಡೆ ಗಮನ ಕೊಡಬಹುದು ಎಂಬ ಮಾತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್