AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ದಿಯಾ ಖ್ಯಾತಿಯ ನಟ ದೀಕ್ಷಿತ್​ ಶೆಟ್ಟಿ; ಕನ್ನಡದಲ್ಲೂ ತೆರೆಕಾಣಲಿದೆ ಸಿನಿಮಾ

ಸಿನಿಮಾದಲ್ಲಿ ಕಾಮಿಡಿ ಹೈಲೈಟ್​ ಆಗಿರಲಿದೆ. ಇದರ ಜತೆ ಸಸ್ಪೆನ್ಸ್​ ಕಥೆಯೂ ಈ ಚಿತ್ರದಲ್ಲಿದೆ. ಒಂದು ಕೊಲೆ, ಅದಕ್ಕಾಗಿ ನಡೆಯುವ ಪೊಲೀಸ್ ತನಿಖೆ, ಅಲ್ಲೊಂದು ಹುಡುಕಾಟ ಮುದ್ದಾದ ಪ್ರೇಮ ಕಥೆ ಸಿನಿಮಾದಲ್ಲಿದೆ.

ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ದಿಯಾ ಖ್ಯಾತಿಯ ನಟ ದೀಕ್ಷಿತ್​ ಶೆಟ್ಟಿ; ಕನ್ನಡದಲ್ಲೂ ತೆರೆಕಾಣಲಿದೆ ಸಿನಿಮಾ
ದೀಕ್ಷಿತ್​ ಶೆಟ್ಟಿ
ರಾಜೇಶ್ ದುಗ್ಗುಮನೆ
| Edited By: |

Updated on: May 24, 2021 | 4:08 PM

Share

ದಿಯಾ ಖ್ಯಾತಿಯ ನಟ ದೀಕ್ಷಿತ್​ ಶೆಟ್ಟಿ ಏನು ಮಾಡುತ್ತಿದ್ದಾರೆ? ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳದ್ದಾಗಿತ್ತು. ಈಗ ಅವರು ವಿಶೇಷ ಪ್ರಾಜೆಕ್ಟ್​ ಮೂಲಕ ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ‘ಆಣಿ ಮುತ್ತುಗಳು’ ಎಂದು ಸಿನಿಮಾಗೆ ಹೆಸರಿಡಲಾಗಿದೆ. ಈ ಚಿತ್ರ ತೆಲುಗಿನಲ್ಲಿ ಸಿದ್ಧವಾಗಿದ್ದು, ಕಾಮಿಡಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್​ ಶೈಲಿಯಲ್ಲಿ ಮೂಡಿ ಬಂದಿದೆ. ವಿಶೇಷ ಎಂದರೆ ಕನ್ನಡಕ್ಕೂ ಈ ಸಿನಿಮಾ ಡಬ್ ಆಗಲಿದೆ.

ಮೂಗ, ಕಿವುಡ ಮತ್ತು ಕುರುಡ ಈ ಮೂವರ ಹಿನ್ನೆಲೆಯಲ್ಲಿ ಇಡೀ ಚಿತ್ರದ ಕಥೆ ಸಾಗಲಿದೆ. ಇದರಲ್ಲಿ ಮೂಗನ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಕಿವುಡನ ಪಾತ್ರದಲ್ಲಿ ಶ್ರೀನಿವಾಸ್ ರೆಡ್ಡಿ, ಕುರುಡನ ಪಾತ್ರದಲ್ಲಿ ಅಚ್ಯುತ್ ರಾಮ್ ರಾವ್ ನಟಿಸಿದ್ದಾರೆ. ಈ ಪಾತ್ರವನ್ನು ಅವರು ಹೇಗೆ ನಿರ್ವಹಿಸುತ್ತಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಚಿತ್ರಮಂದಿರ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಅಚ್ಯುತ್ ರಾಮಾರಾವ್ ನಿರ್ಮಾಣ ಮಾಡಿರುವ ‘ಆಣಿ ಮುತ್ತುಗಳು’ ಚಿತ್ರವನ್ನು ಅಭಿಷೇಕ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ.

ಸಿನಿಮಾದಲ್ಲಿ ಕಾಮಿಡಿ ಹೈಲೈಟ್​ ಆಗಿರಲಿದೆ. ಇದರ ಜತೆ ಸಸ್ಪೆನ್ಸ್​ ಕಥೆಯೂ ಈ ಚಿತ್ರದಲ್ಲಿದೆ. ಒಂದು ಕೊಲೆ, ಅದಕ್ಕಾಗಿ ನಡೆಯುವ ಪೊಲೀಸ್ ತನಿಖೆ, ಅಲ್ಲೊಂದು ಹುಡುಕಾಟ ಮುದ್ದಾದ ಪ್ರೇಮ ಕಥೆ ಸಿನಿಮಾದಲ್ಲಿದೆ. ತ್ವಿಷಾ ಶರ್ಮಾ ನಾಯಕಿಯಾಗಿ ನಟಿಸಿದ್ದು, ದೀಕ್ಷಿತ್​ ಶೆಟ್ಟಿಗೆ ಜೋಡಿಯಾಗಿದ್ದಾರೆ. ನಟಿ ಶ್ವೇತಾ ವರ್ಮಾ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

ಅಪ್ಪಾರ್ಲ ಸಾಯಿ ಕಲ್ಯಾಣ್ ಕಥೆ, ಚಿತ್ರಕಥೆ ಬರೆದರೆ, ಗರುಡವೇಗ ಅಂಜಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸುರೇಶ್ ಬೊಬ್ಲಿ ಸಂಗೀತ ನೀಡಿದ್ದಾರೆ. ಅಚ್ಯುತ್ ರಾಮಾರಾವ್ ನಿರ್ಮಾಣ ಮಾಡಿದ್ದು, ತೇಝ ಚೀಪುರುಪಲ್ಲಿ, ರವೀಂದ್ರ ರೆಡ್ಡಿ ಅಡ್ಡುಲ ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರತಂಡ ಈಗಾಗಲೇ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿದೆ. ಸದ್ಯ, ಲಾಕ್​ಡೌನ್​ ಇರುವುದರಿಂದ ಚಿತ್ರಮಂದಿರಗಳು ಮುಚ್ಚಿವೆ. ಎಲ್ಲವೂ ಸಮಸ್ಥಿತಿಗೆ ಮರಳಿದ ನಂತರದಲ್ಲಿ ಸಿನಿಮಾವನ್ನು ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು.

ಇದನ್ನೂ ಓದಿ: ‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

ಮತ್ತೆ ಒಂದಾಗಲಿದೆ ದಿಯಾ ಜೋಡಿ; ಹೇಗಿರಲಿದೆ ಈ ಸಿನಿಮಾ ಕಥೆ?