AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

Shah Rukh Khan: ಶಾರುಖ್​ ಖಾನ್ ಪುತ್ರಿಯನ್ನು ಮದುವೆ ಆಗಬೇಕು ಎಂದು ಪಡ್ಡೆಗಳು ಕನಸು ಕಂಡಿರಬಹುದು. ಅಂಥವರಿಗೆಲ್ಲ ಕಿಂಗ್​ ಖಾನ್​ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​
ಸುಹಾನಾ ಖಾನ್​ -ಶಾರುಖ್​ ಖಾನ್​
ಮದನ್​ ಕುಮಾರ್​
|

Updated on: May 23, 2021 | 6:47 PM

Share

ಬಾಲಿವುಡ್​ ನಟ ಶಾರುಖ್​ ಖಾನ್​ ಪಕ್ಕಾ ಫ್ಯಾಮಿಲಿ ಮ್ಯಾನ್​ ಕೂಡ ಹೌದು. ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಮಕ್ಕಳಿಗಾಗಿ ಸಮಯ ಮೀಸಲಿಡುತ್ತಾರೆ. ಅವರ ಪುತ್ರಿ ಸುಹಾನಾ ಖಾನ್​ ಮೇ 22ರಂದು ಬರ್ತ್​ಡೇ ಆಚರಿಸಿಕೊಂಡರು. 21ನೇ ವಯಸ್ಸಿಗೆ ಅವರು ಕಾಲಿಟ್ಟಿದ್ದಾರೆ. ಮಗಳನ್ನು ಕಂಡರೆ ಶಾರುಖ್​ಗೆ ಎಲ್ಲಿಲ್ಲದ ಪ್ರೀತಿ. ಅನೇಕ ಸಂದರ್ಶನಗಳಲ್ಲಿ ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಸುಹಾನಾ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಕೆಲವು ಮ್ಯಾಗಜಿನ್​ ಮುಖಪುಟಗಳಲ್ಲಿ ಅವರ ಫೋಟೋ ಮಿಂಚಿದೆ. ಆ ಮೂಲಕ ಇಂದಲ್ಲ ನಾಳೆ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗುತ್ತಾರೆ ಎಂಬ ಸೂಚನೆಯಂತೂ ಸಿಕ್ಕಿದೆ.

ಶಾರುಖ್​ ಖಾನ್ ಪುತ್ರಿಯನ್ನು ಮದುವೆ ಆಗಬೇಕು ಎಂದು ಪಡ್ಡೆಗಳು ಕನಸು ಕಂಡಿರಬಹುದು. ಶ್ರೀಮಂತ ಮನೆತನದ ಹುಡುಗರು ಕೂಡ ಶಾರುಖ್​ಗೆ ಅಳಿಯನಾಗುವ ಆಸೆ ಇಟ್ಟುಕೊಂಡಿರಬಹುದು. ಅಂಥವರಿಗೆಲ್ಲ ಕಿಂಗ್​ ಖಾನ್​ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ 7 ಷರತ್ತುಗಳ ಬಗ್ಗೆ ಶಾರುಖ್​ ಹೇಳಿದ್ದರು.

ಷರತ್ತು 1: ಉದ್ಯೋಗ ಹೊಂದಿರಬೇಕು

ಶಾರುಖ್​ ಪುತ್ರಿಯನ್ನು ಡೇಟಿಂಗ್​ ಮಾಡಬೇಕು ಎಂದುಕೊಳ್ಳುವ ಹುಡುಗ ಮೊದಲು ಒಂದು ಉದ್ಯೋಗ ಹೊಂದಿರಬೇಕು. ಜೀವನದಲ್ಲಿ ಸೆಟ್ಲ್​ ಆದ ನಂತರವೇ ಸುಹಾನಾಳನ್ನು ಪ್ರೀತಿಸುವ ಕನಸು ಕಾಣಬೇಕು.

ಷರತ್ತು 2: ನಾನು ನಿನ್ನನ್ನು ಇಷ್ಟಪಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೋ

ತಮ್ಮ ಮಗಳನ್ನು ಪ್ರೀತಿಸುವ ಹುಡುಗನನ್ನು ಶಾರುಖ್​ ಇಷ್ಟಪಡುವುದಿಲ್ಲವಂತೆ. ಈ ವಿಚಾರವನ್ನು ಆ ಹುಡುಗ ಮೊದಲೇ ಮನಗಂಡಿರಬೇಕು.

ಷರತ್ತು 3: ನಾನು ಎಲ್ಲಾ ಕಡೆ ಇರುತ್ತೇನೆ

ಪುತ್ರಿ ಏನು ಮಾಡುತ್ತಿರುತ್ತಾಳೆ ಎಂಬುದನ್ನು ತಿಳಿದುಕೊಳ್ಳಲು ಶಾರುಖ್​ ಸದಾ ಒಂದು ಕಣ್ಣು ಇಟ್ಟಿರುತ್ತಾರೆ. ಅದೇ ರೀತಿ ಬಾಯ್​ ಫ್ರೆಂಡ್​ ಮೇಲೂ ಅವರು ನಿಗಾ ಇಡುತ್ತಾರೆ. ಅದಕ್ಕೆ ಆತ ಸಿದ್ಧನಿರಬೇಕು.

ಷರತ್ತು 4: ಲಾಯರ್​ ಹೊಂದಿರಬೇಕು

ಶಾರುಖ್​ ಪುತ್ರಿಯ ತಂಟೆಗೆ ಯಾರೇ ಬಂದರೂ ಕಿರಿಕ್​ಗಳಾಗುವುದು ಗ್ಯಾರಂಟಿ. ಹಾಗಾಗಿ ಬಾಯ್​ಫ್ರೆಂಡ್​ ಆಗುವವನು ಲಾಯರ್​ ಇಟ್ಟುಕೊಳ್ಳಬೇಕಿರುವುದು ಕಡ್ಡಾಯ.

ಷರತ್ತು 5: ಆಕೆ ನನ್ನ ರಾಜಕುಮಾರಿ; ನಿನ್ನ ವಶವಾಗುವುದಿಲ್ಲ

ಶಾರುಖ್​ ತಮ್ಮ ಮಗಳನ್ನು ರಾಜಕುಮಾರಿಯ ರೀತಿ ಬೆಳೆಸಿದ್ದಾರೆ. ಬೇರೆ ಯಾವುದೋ ಹುಡುಗ ಆಕೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಶಾರುಖ್​ ಖಡಕ್​ ಮಾತು.

ಷರತ್ತು 6: ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ

ಮಗಳ ಬಗ್ಗೆ ಶಾರುಖ್​ ಖಾನ್​ ಅಪಾರ ಕಾಳಜಿ ಹೊಂದಿದ್ದಾರೆ. ಆಕೆಯನ್ನು ರಕ್ಷಿಸಲು ತಾವು ಯಾವ ಮಟ್ಟಕ್ಕೆ ಬೇಕಾದರು ಇಳಿಯುತ್ತಾರಂತೆ. ಹಾಗಾಗಿ, ‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’ ಎಂದು ಅವರು ಹೇಳಿದ್ದರು.

ಷರತ್ತು 7: ಆಕೆಗೆ ನೀನು ಹರ್ಟ್​ ಮಾಡಿದರೆ ನಾನು ನಿನಗೆ ಅದನ್ನೇ ಮಾಡುತ್ತೇನೆ

ಕೊನೆಯ ಷರತ್ತಿನ ಬಗ್ಗೆ ಶಾರುಖ್​ ಖಡಕ್​ ಆಗಿ ಹೇಳಿದ್ದರು. ಒಂದು ವೇಳೆ ತಮ್ಮ ಪುತ್ರಿಗೆ ಬಾಯ್​ಫ್ರೆಂಡ್​ ಆದವನು ನೋವು ನೀಡಿದರೆ ಖಂಡಿತವಾಗಿಯೂ ಆತನಿಗೆ ಶಾರುಖ್​ ನೋವು ನೀಡುತ್ತಾರಂತೆ. ಇಷ್ಟೆಲ್ಲ ಷರತ್ತುಗಳಿಗೆ ಒಪ್ಪಿದವರು ಸುಹಾನಾಗೆ ಬಾಯ್​ ಫ್ರೆಂಡ್​ ಆಗುವ ಧೈರ್ಯ ತೋರಿಸಬಹುದು!

ಇದನ್ನೂ ಓದಿ:

ಶಾರುಖ್​ ಖಾನ್​ ಜತೆ ಬೀಡಿ ಸೇದಿದ ದಿನಗಳನ್ನು ನೆನಪಿಸಿಕೊಂಡ ಮನೋಜ್​ ಬಾಜಪೇಯಿ

ಶಾರುಖ್​ ಖಾನ್​ ಮಗ ಆರ್ಯನ್​ಗೆ ಅಮೆರಿಕ ವಿವಿಯಲ್ಲಿ ಪದವಿ ಪ್ರದಾನ; ಫೋಟೋ ವೈರಲ್​

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ