Prabhas: ‘ಸಲಾರ್​​’ ಜೊತೆ ಕೇಳಿಬಂತು ಜ್ಯೋತಿಕಾ ಹೆಸರು; ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತು ಏನು?

Salaar: ಹಲವು ಭಾಷೆಯಲ್ಲಿ ಸಲಾರ್ ಚಿತ್ರ ಸಿದ್ಧವಾಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ಎಲ್ಲ ಭಾಷೆಯ ಕಲಾವಿದರು ನಟಿಸಿದರೆ ಅದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಲಿದೆ.

Prabhas: ‘ಸಲಾರ್​​’ ಜೊತೆ ಕೇಳಿಬಂತು ಜ್ಯೋತಿಕಾ ಹೆಸರು; ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತು ಏನು?
ಪ್ರಭಾಸ್​, ಜ್ಯೋತಿಕಾ, ಸೂರ್ಯ
Follow us
ಮದನ್​ ಕುಮಾರ್​
|

Updated on: May 24, 2021 | 8:51 AM

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವುದಕ್ಕಿಂತ ಮುನ್ನವೇ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ‘ಸಲಾರ್​’ ಸಿನಿಮಾ ಕೈಗೆತ್ತಿಕೊಂಡರು. ಈ ಚಿತ್ರಕ್ಕೆ ಪ್ರಭಾಸ್​ ಹೀರೋ ಎಂದು ತಿಳಿದ ತಕ್ಷಣ ಅಭಿಮಾನಿಗಳ ನಿರೀಕ್ಷೆ ನೂರು ಪಟ್ಟು ಹೆಚ್ಚಿತು. ನಾಯಕಿಯಾಗಿ ಶ್ರುತಿ ಹಾಸನ್​ ಆಯ್ಕೆ ಆದ ಬಳಿಕ ಇನ್ನಷ್ಟು ಹೈಪ್​ ಪಡೆದುಕೊಂಡಿತು. ಈ ಸಿನಿಮಾದ ಪಾತ್ರವರ್ಗದಲ್ಲಿ ಇನ್ನೂ ಅನೇಕ ಸ್ಟಾರ್​ ಕಲಾವಿದರು ನಟಿಸಲಿದ್ದಾರೆ. ಆ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ. ಆದರೆ ಅದಕ್ಕೂ ಮುನ್ನ ಹಲವು ಸುದ್ದಿಗಳು ಹರಿದಾಡುತ್ತಿವೆ. ಕಾಲಿವುಡ್​ನ ಸ್ಟಾರ್​ ನಟಿ ಜ್ಯೋತಿಕಾ ಹೆಸರು ಕೂಡ ಕೇಳಿಬಂದಿದೆ.

ಸಲಾರ್​ ಬಹುನಿರೀಕ್ಷಿತ ಚಿತ್ರವಾದ್ದರಿಂದ ಅದರ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಿವೆ. ಪ್ರಭಾಸ್​ ಮತ್ತು ಶ್ರುತಿ ಹಾಸನ್​ ಪಾತ್ರದ ಬಗ್ಗೆಯೂ ಗುಸುಗುಸು ಕೇಳಿಬಂದಿದೆ. ಅದೇ ರೀತಿ, ಈ ಚಿತ್ರದಲ್ಲಿ ಪ್ರಭಾಸ್​ ಜೊತೆ ಜ್ಯೋತಿಕಾ ಅಭಿನಯಿಸುತ್ತಾರೆ ಎಂಬ ಮಾಹಿತಿ ಕೇಳಿಬಂದಿದೆ. ಪ್ರಭಾಸ್​ಗೆ ಅಕ್ಕನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗಾಸಿಪ್​. ಆದರೆ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬುದು ಮತ್ತೊಂದು ಮೂಲದ ಮಾಹಿತಿ.

ಜ್ಯೋತಿಕಾ ‘ಸಲಾರ್​’ ಚಿತ್ರದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಸದ್ಯ ಚಿತ್ರತಂಡ ಪ್ರತಿಕ್ರಿಯೆ ನೀಡಿಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಹಲವು ಭಾಷೆಯಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಹಾಗಾಗಿ ಎಲ್ಲ ಭಾಷೆಯ ಕಲಾವಿದರು ನಟಿಸಿದರೆ ಅದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಲಿದೆ. ಆ ದೃಷ್ಟಿಯಿಂದ ನೋಡಿದರೆ ಇದರಲ್ಲಿ ಪರಭಾಷೆಯ ಹಲವು ಕಲಾವಿದರು ಬಣ್ಣ ಹಚ್ಚುವುದು ಖಚಿತ. ಅದೇನೇ ಇದ್ದರೂ ನಿರ್ದೇಶಕ ಪ್ರಶಾಂತ್​ ನೀಲ್​ ಅಥವಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತಿಳಿಸಿದ ಮೇಲಷ್ಟೇ ಅಧಿಕೃತ ಆಗಲಿದೆ.

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ಪ್ರಭಾಸ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.2022ರ ಏ.14ರಂದು ಸಲಾರ್​ ತೆರೆಕಾಣಲಿದೆ. ಅಂದಾಜು 150 ಕೋಟಿ ರೂ. ಬಜೆಟ್​ನಲ್ಲಿ ಚಿತ್ರ ತಯಾರಾಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರಭಾಸ್​ ಫಸ್ಟ್​ಲುಕ್​ ಪೋಸ್ಟರ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ:

ಉಗ್ರಂ ಹರಿಪ್ರಿಯಾ ಪಾತ್ರಕ್ಕೂ ಸಲಾರ್​ ಶ್ರುತಿ ಹಾಸನ್​ ಪಾತ್ರಕ್ಕೂ ಇದೆ ಅಜಗಜಾಂತರ ವ್ಯತ್ಯಾಸ

ಕೆಜಿಎಫ್ 2-ಸಲಾರ್​ಗೂ ಇದೆ ಲಿಂಕ್​; ವಿಶೇಷ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ನೀಲ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ