AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್ 2-ಸಲಾರ್​ಗೂ ಇದೆ ಲಿಂಕ್​; ವಿಶೇಷ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ನೀಲ್​

ಕೆಜಿಎಫ್​-2 ಪ್ಯಾನ್​ ಇಂಡಿಯಾ ಸಿನಿಮಾ. ಕೆಜಿಎಫ್​ ಚಾಪ್ಟರ್​-1 ಗಿಂತಲೂ ಅದ್ದೂರಿಯಾಗಿ ಈ ಚಿತ್ರ ಸಿದ್ಧಗೊಳ್ಳುತ್ತದೆ. ಸಲಾರ್​ ಸಿನಿಮಾ ಕೂಡ ಅಷ್ಟೆ. ಸುಮಾರು 150 ಕೋಟಿ ರೂ ಬಜೆಟ್​ನಲ್ಲಿ ಚಿತ್ರ ಸಿದ್ಧಗೊಳ್ಳುತ್ತಿದೆ.

ಕೆಜಿಎಫ್ 2-ಸಲಾರ್​ಗೂ ಇದೆ ಲಿಂಕ್​; ವಿಶೇಷ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ನೀಲ್​
ಪ್ರಶಾಂತ್​ ನೀಲ್​ ಮತ್ತು ರವಿ ಬಸ್ರೂರ್​
ರಾಜೇಶ್ ದುಗ್ಗುಮನೆ
|

Updated on:Apr 15, 2021 | 6:41 PM

Share

ಯಶ್​ ನಟನೆಯ ಕೆಜಿಎಫ್​-2 ಹಾಗೂ ಪ್ರಭಾಸ್​ ಮುಖ್ಯಭೂಮಿಕೆ ನಿರ್ವಹಿಸುತ್ತಿರುವ ಸಲಾರ್ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನವಿದೆ. ಕೆಜಿಎಫ್​-2 ಸಿನಿಮಾ ಶೂಟಿಂಗ್​ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಮತ್ತೊಂದೆಡೆ ಸಲಾರ್ ಸಿನಿಮಾದ ಶೂಟಿಂಗ್​ ಕೂಡ ನಡೆಯುತ್ತಿದೆ. ಹೀಗಿರುವಾಗಲೇ ಪ್ರಶಾಂತ್​ ನೀಲ್​ ಎರಡೂ ಸಿನಿಮಾಗಳಿಗೆ ಇರುವ ಲಿಂಕ್​ ಬಗ್ಗೆ ಹೇಳಿಕೊಂಡಿದ್ದಾರೆ. ಕೆಜಿಎಫ್​-2 ಪ್ಯಾನ್​ ಇಂಡಿಯಾ ಸಿನಿಮಾ. ಕೆಜಿಎಫ್​ ಚಾಪ್ಟರ್​-1 ಗಿಂತಲೂ ಅದ್ದೂರಿಯಾಗಿ ಈ ಚಿತ್ರ ಸಿದ್ಧಗೊಳ್ಳುತ್ತದೆ. ಸಲಾರ್​ ಸಿನಿಮಾ ಕೂಡ ಅಷ್ಟೆ. ಸುಮಾರು 150 ಕೋಟಿ ರೂ ಬಜೆಟ್​ನಲ್ಲಿ ಚಿತ್ರ ಸಿದ್ಧಗೊಳ್ಳುತ್ತಿದೆ. ಈ ಎರಡೂ ಸಿನಿಮಾಗೂ ಒಂದು ಸಾಮ್ಯತೆ ಇದೆಯಂತೆ. ಅದುವೇ ರವಿ ಬಸ್ರೂರ್ ಸ್ಟುಡಿಯೋ​.

ಕೆಜಿಎಫ್​-1 ಚಿತ್ರಕ್ಕೆ ರವಿ ಬಸ್ರೂರ್​ ಸಂಗೀತ ಸಂಯೋಜನೆ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದರು. ಈ ಚಿತ್ರದ ಬಿಜಿಎಂ ಎಲ್ಲರಿಗೂ ಇಷ್ಟವಾಗಿತ್ತು. ಈಗ ಸಿದ್ಧವಾಗುತ್ತಿರುವ ಕೆಜಿಎಫ್​-2 ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇನ್ನು, ಸಲಾರ್​ ಸಿನಿಮಾಗೂ ರವಿ ಬಸ್ರೂರ್​ ಸಂಗೀತ ಸಂಯೋಜನೆ ಇದ್ದು, ಈ ಚಿತ್ರದ ಮೇಲೂ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಎರಡು ಸಿನಿಮಾಗಳ ಸಂಗೀತ ಸಂಯೋಜನೆ ಕೆಲಸಗಳು ರವಿ ಬಸ್ರೂರ್​ ಸ್ಟುಡಿಯೋದಲ್ಲಿ ನಡೆಯುತ್ತಿದೆ.

ಈ ಬಗ್ಗೆ ಪ್ರಶಾಂತ್​ ನೀಲ್​ ಬರೆದುಕೊಂಡಿದ್ದಾರೆ. ಕೆಜಿಎಫ್​-2 ಹಾಗೂ ಸಲಾರ್​ ಒಂದು ಕಡೆ ಸಂಧಿಸುತ್ತವೆ ಎಂದಾದರೆ ಅದು ರವಿ ಬಸ್ರೂರ್​ ಸ್ಟುಡಿಯೋದಲ್ಲಿ ಮಾತ್ರ ಎಂದು ಪ್ರಶಾಂತ್​ ನೀಲ್​ ಬರೆದುಕೊಂಡಿದ್ದಾರೆ. ಈ ಮೂಲಕ ಎರಡೂ ಸಿನಿಮಾಗಳ ಸಂಗೀತ ಸಂಯೋಜನೆ ಕೆಲಸಗಳು ಒಂದೇ ಕಡೆ ನಡೆಯುತ್ತಿರುವ ಬಗ್ಗೆ ಪ್ರಶಾಂತ್​ ನೀಲ್​ ಮಾಹಿತಿ ಈಡಿದ್ದಾರೆ.

ಇದನ್ನೂ ಓದಿ: ಪ್ರಶಾಂತ್​ ನೀಲ್​ ಜೊತೆ ದಳಪತಿ ವಿಜಯ್​ ಹೊಸ ಸಿನಿಮಾ? ಕೆಜಿಎಫ್​ ಡೈರೆಕ್ಟರ್​ ಬಗ್ಗೆ ಬಿಗ್​ ನ್ಯೂಸ್​

Upendra: ನಟ ಉಪೇಂದ್ರ ತಲೆಗೆ ರಾಡ್​ನಿಂದ ಪೆಟ್ಟು! ಕಬ್ಜ ಸಿನಿಮಾ ಶೂಟಿಂಗ್​ ವೇಳೆ ಅವಘಡ

Published On - 6:40 pm, Thu, 15 April 21

ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್