ಉಗ್ರಂ ಹರಿಪ್ರಿಯಾ ಪಾತ್ರಕ್ಕೂ ಸಲಾರ್​ ಶ್ರುತಿ ಹಾಸನ್​ ಪಾತ್ರಕ್ಕೂ ಇದೆ ಅಜಗಜಾಂತರ ವ್ಯತ್ಯಾಸ

ಉಗ್ರಂ ಸಿನಿಮಾದಲ್ಲಿ ಶ್ರೀಮುರಳಿ ರೌಡಿ ಆಗಿರುತ್ತಾರೆ. ನಂತರ ರೌಡಿಸಂ ಬಿಟ್ಟು ಗ್ಯಾರೇಜ್​ ಒಂದನ್ನು ನಡೆಸುತ್ತಿರುತ್ತಾರೆ. ಸಲಾರ್​ ಸಿನಿಮಾದ ಫಸ್ಟ್ ಪೋಸ್ಟರ್​ಗೂ ಶ್ರೀಮುರುಳಿ ನಿರ್ವಹಿಸಿದ್ದ ಪಾತ್ರಕ್ಕೂ ಲಿಂಕ್​ ಇತ್ತು.

ಉಗ್ರಂ ಹರಿಪ್ರಿಯಾ ಪಾತ್ರಕ್ಕೂ ಸಲಾರ್​ ಶ್ರುತಿ ಹಾಸನ್​ ಪಾತ್ರಕ್ಕೂ ಇದೆ ಅಜಗಜಾಂತರ ವ್ಯತ್ಯಾಸ
ಹರಿಪ್ರಿಯಾ-ಶ್ರುತಿ ಹಾಸನ್

ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​, ಪ್ರಭಾಸ್​ ನಟನೆಯ ಸಲಾರ್​ ಚಿತ್ರಕ್ಕೆ ಆ್ಯಕ್ಷನ್ ಕಟ್​​ ಹೇಳುತ್ತಿದ್ದಾರೆ. ಇದು ಸ್ಯಾಂಡಲ್​ವುಡ್​ನಲ್ಲಿ ಬಹುದೊಡ್ಡ ಮಟ್ಟದಲ್ಲಿ ಹಿಟ್​ ಆಗಿದ್ದ ಉಗ್ರಂ ಸಿನಿಮಾದ ರಿಮೇಕ್​ ಎಂದು ಹೇಳಲಾಗುತ್ತಿದೆ. ಅಚ್ಚರಿ ಎಂದರೆ, ಉಗ್ರಂನಲ್ಲಿ ಹರಿಪ್ರಿಯಾ ಮಾಡಿದ ಪಾತ್ರಕ್ಕೂ, ಸಲಾರ್​​ನಲ್ಲಿ ಶ್ರುತಿ ಹಾಸನ್​ ಮಾಡುತ್ತಿರುವ ಪಾತ್ರಕ್ಕೂ ತುಂಬಾನೇ ವ್ಯತ್ಯಾಸ ಇದೆ. ಉಗ್ರಂ ಸಿನಿಮಾದಲ್ಲಿ ಶ್ರೀಮುರಳಿ ರೌಡಿ ಆಗಿರುತ್ತಾರೆ. ನಂತರ ರೌಡಿಸಂ ಬಿಟ್ಟು ಗ್ಯಾರೇಜ್​ ಒಂದನ್ನು ನಡೆಸುತ್ತಿರುತ್ತಾರೆ. ಸಲಾರ್​ ಸಿನಿಮಾದ ಫಸ್ಟ್ ಪೋಸ್ಟರ್​ಗೂ ಶ್ರೀಮುರುಳಿ ನಿರ್ವಹಿಸಿದ್ದ ಪಾತ್ರಕ್ಕೂ ಲಿಂಕ್​ ಇತ್ತು. ಇದಾದ ಬೆನ್ನಲ್ಲೇ ಶ್ರುತಿ ಹಾಸನ್​ ಪಾತ್ರ ಹೇಗಿರಲಿದೆ ಎಂಬುದು ಎಲ್ಲರ ಕುತೂಹಲ ಆಗಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ.

ಉಗ್ರಂ ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿ. ವಿದೇಶದಿಂದ ಭಾರತಕ್ಕೆ ಬರುವ ಅವರಿಗೆ ತೊಂದರೆ ಎದುರಾಗುತ್ತದೆ. ಆಗ ಶ್ರೀಮುರಳಿ ಇವರನ್ನು ಕಾಪಾಡುತ್ತಾರೆ. ಹರಿಪ್ರಿಯಾ ನಿರ್ವಹಿಸಿದ್ದ ಪಾತ್ರದಲ್ಲಿ ಒಂದು ಮುಗ್ಧತೆ ಇತ್ತು. ಆದರೆ, ಸಲಾರ್​ ಸಿನಿಮಾದಲ್ಲಿ ಶ್ರುತಿ ಹಾಸನ್​ ಪಾತ್ರ ಸಂಪೂರ್ಣವಾಗಿ ಬೆರೆಯೇ ಇದೆ.

ಶ್ರುತಿ ಹಾಸನ್ ಈ ಸಿನಿಮಾದಲ್ಲಿ ಪೊಲಿಟಿಕಲ್​ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ, ಈ ವಿಚಾರದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಅಲ್ಲದೆ, ಸಲಾರ್​ ಸಿನಿಮಾದಲ್ಲಿ ಏನೆಲ್ಲ ವಿಚಾರಗಳಲ್ಲಿ ಬದಲಾವಣೆ ಮಾಡಲಾಗಿದೆ ಎನ್ನುವ ಕುತೂಹಲ ಕೂಡ ಮೂಡಿದೆ.

ಸಲಾರ್​ ಸಿನಿಮಾ 150 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ. 2022ರ ಏಪ್ರಿಲ್​ ತಿಂಗಳಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ. ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ತಯಾರಾಗುತ್ತಿದೆ. ಪ್ರಭಾಸ್​ಗೆ ಜತೆಯಾಗಿ ಶ್ರುತಿ ಹಾಸನ್​ ನಟಿಸುತ್ತಿದ್ದಾರೆ. ಕೆಜಿಎಫ್​ ಸಿನಿಮಾದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್​ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಹೋದರೂ ಕನ್ನಡಿಗರಿಗೆ ಆದ್ಯತೆ ನೀಡುವ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್​ ಮುಂದುವರಿಸಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಕೆಜಿಎಫ್ 2-ಸಲಾರ್​ಗೂ ಇದೆ ಲಿಂಕ್​; ವಿಶೇಷ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ನೀಲ್​

Click on your DTH Provider to Add TV9 Kannada