ನಿಖಿಲ್​ ಕುಮಾರಸ್ವಾಮಿ ಬೆನ್ನಲ್ಲೇ ರೈಡರ್​ ಚಿತ್ರತಂಡಕ್ಕೂ ಕೊರೊನಾ

ನಿಖಿಲ್​ ಕುಮಾರಸ್ವಾಮಿ ಬೆನ್ನಲ್ಲೇ ರೈಡರ್​ ಚಿತ್ರತಂಡಕ್ಕೂ ಕೊರೊನಾ
ನಟ ನಿಖಿಲ್ ಕುಮಾರಸ್ವಾಮಿ ( ಕೃಪೆ: ಫೇಸ್​ಬುಕ್)

ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದರು.

Rajesh Duggumane

|

Apr 19, 2021 | 10:54 PM

ನಿಖಿಲ್​ ಕುಮಾರಸ್ವಾಮಿ ರೈಡರ್​ ಸಿನಿಮಾದ ಶೂಟಿಂಗ್​ಗಾಗಿ ಇತ್ತೀಚೆಗೆ ಲೇಹ್​-ಲಡಾಕ್​ಗೆ ತೆರಳಿದ್ದರು. ಈಗ ಅವರು ಪರೀಕ್ಷೆಗೆ ಒಳಗಾಗಿದ್ದು ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಈಗ ರೈಡರ್​ ಸಿನಿಮಾ ತಂಡದ ಅನೇಕರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ. 2 ದಿನಗಳ ಹಿಂದೆ ನಟ ನಿಖಿಲ್‌ ಕುಮಾರಸ್ವಾಮಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಿಖಿಲ್​ ಕುಮಾರಸ್ವಾಮಿ, ನಾನು ಇಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು ಪ್ರಾಥಮಿಕ ವರದಿ ಪಾಸಿಟಿವ್ ಬಂದಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದರು.

ಅಂತೆಯೇ ರೈಡರ್​ ಸಿನಿಮಾ ತಂಡ ಕೊರೊನಾ ಟೆಸ್ಟ್​ಗೆ ಒಳಪಟ್ಟಿದೆ. ನಿಖಿಲ್​ ಆಪ್ತ ಸಹಾಯಕ, ಮೇಕಪ್ ಮ್ಯಾನ್, ಬೌನ್ಸರ್‌ಗೆ ಸೋಂಕು ಕಾಣಿಸಿಕೊಂಡಿದೆ. ರೈಡರ್ ಚಿತ್ರದ ನಿರ್ದೇಶಕ, ಕ್ಯಾಮರಾಮನ್‌ಗೂ ಕೊರೊನಾ ಪಾಸಿಟಿವ್​ ಬಂದಿದೆ. ಈ ವಿಚಾರವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: Nikhil Kumaraswamy: ಕನ್ನಡ ಸರಿಯಾಗಿ ಬರಲ್ವಾ; ತಪ್ಪು ಪದ ಬಳಸಿ ಟ್ರೋಲ್​ ಆದ ನಿಖಿಲ್​ ಕುಮಾರಸ್ವಾಮಿ

Nikhil Kumaraswamy: ನಿಖಿಲ್​ ಕುಮಾರಸ್ವಾಮಿಗೆ ಕೊರೊನಾ ಸೋಂಕು ದೃಢ

Follow us on

Related Stories

Most Read Stories

Click on your DTH Provider to Add TV9 Kannada