AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nikhil Kumaraswamy: ಕನ್ನಡ ಸರಿಯಾಗಿ ಬರಲ್ವಾ; ತಪ್ಪು ಪದ ಬಳಸಿ ಟ್ರೋಲ್​ ಆದ ನಿಖಿಲ್​ ಕುಮಾರಸ್ವಾಮಿ

ಅನೇಕ ಸ್ಟಾರ್​ಗಳು ಕನ್ನಡವನ್ನು ತಪ್ಪಾಗಿ ಬರೆದು ಅಭಿಮಾನಿಗಳಿಂದ ಪಾಠ ಹೇಳಿಸಿಕೊಂಡಿದ್ದಾರೆ. ನಿಖಿಲ್​ ಕುಮಾರಸ್ವಾಮಿ ವಿಚಾರದಲ್ಲೂ ಈಗ ಅದೇ ಆಗಿದೆ. ಅವರ ಶಬ್ದ ಬಳಕೆ ಪ್ರಯೋಗ ತಪ್ಪಾಗಿದ್ದು, ಸಾಕಷ್ಟು ಟ್ರೋಲ್​ ಆಗುತ್ತಿದ್ದಾರೆ.

Nikhil Kumaraswamy: ಕನ್ನಡ ಸರಿಯಾಗಿ ಬರಲ್ವಾ; ತಪ್ಪು ಪದ ಬಳಸಿ ಟ್ರೋಲ್​ ಆದ ನಿಖಿಲ್​ ಕುಮಾರಸ್ವಾಮಿ
ನಿಖಿಲ್​ ಕುಮಾರಸ್ವಾಮಿ
ರಾಜೇಶ್ ದುಗ್ಗುಮನೆ
|

Updated on:Apr 11, 2021 | 7:20 PM

Share

ಸೆಲೆಬ್ರಿಟಿಗಳು ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್​ಗಳಲ್ಲಿ ಕಾಣಿಸುವ ಚಿಕ್ಕಪುಟ್ಟ ತಪ್ಪುಗಳೂ ಟ್ರೋಲ್​ಗಳಿಗೆ ಆಹಾರವಾಗುತ್ತವೆ. ಈಗ ಈ ಸಾಲಿಗೆ ಕನ್ನಡದ ಖ್ಯಾತ ನಟ ನಿಖಿಲ್​ ಕುಮಾರಸ್ವಾಮಿ ಹೊಸ ಸೇರ್ಪಡೆ. ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಎಡವಟ್ಟಿನಿಂದ ಈಗ ಟ್ರೋಲ್​ ಆಗುತ್ತಿದ್ದಾರೆ.

ಅನೇಕ ಸ್ಟಾರ್​ಗಳು ಕನ್ನಡವನ್ನು ತಪ್ಪಾಗಿ ಬರೆದು ಅಭಿಮಾನಿಗಳಿಂದ ಪಾಠ ಹೇಳಿಸಿಕೊಂಡಿದ್ದಾರೆ. ನಿಖಿಲ್​ ಕುಮಾರಸ್ವಾಮಿ ವಿಚಾರದಲ್ಲೂ ಈಗ ಅದೇ ಆಗಿದೆ. ಅವರ ಶಬ್ದ ಬಳಕೆ ಪ್ರಯೋಗ ತಪ್ಪಾಗಿದ್ದು, ಸಾಕಷ್ಟು ಟ್ರೋಲ್​ ಆಗುತ್ತಿದ್ದಾರೆ.

ರೈಡರ್​ ಚಿತ್ರದ ಶೂಟಿಂಗ್​ಗಾಗಿ ನಿಖಿಲ್​ ಕುಮಾರಸ್ವಾಮಿ ಲಡಾಖ್​​ಗೆ ತೆರಳಿದ್ದಾರೆ. ಬೇಸಿಗೆ ಆದರೂ, ಲಡಾಖ್​​ ಹಿಮಾಚ್ಛಾದಿತವಾಗಿದೆ. ಈ ದೃಶ್ಯಗಳನ್ನು ಕಣ್ತುಂಬಿಕೊಂಡಿರುವ ನಿಖಿಲ್​ ಇದೇ ಖುಷಿಗೆ ಫೋಟೋ ಪೋಸ್ಟ್​ ಮಾಡಿದ್ದಾರೆ. ‘ರೈಡರ್​​ ಚಿತ್ರ ಚಿತ್ರಿಕರಣ ವೇಳೆ ಲೇಹ್ ಲಡಾಖ್​ನಲ್ಲಿ ಕಂಡು ಬಂದ ಅದ್ಭುತ ಮನಮೋಹಕ ದೃಶ್ಯ’ ಎಂದು ಅವರು ಬರೆಯಬೇಕಿತ್ತು. ಆದರೆ, ಅವರು ಬರೆದಿದ್ದೇ ಬೇರೆ. ಮನಮೋಹಕ ಪದದ ಬದಲು ಅವರು ಮನಕಲಕುವ ದೃಶ್ಯ ಎಂದು ಬರೆದಿದ್ದಾರೆ. ಕೆಲವು ಕಡೆ ಕಾಗುಣಿತದ ತಪ್ಪು ಕೂಡ ಆಗಿದೆ.

ಯಾವುದಾದರೂ ದುರಂತ ನಡೆದರೆ ಮನಕಲಕುವ ಎನ್ನುವ ಶಬ್ದ ಪ್ರಯೋಗ ಮಾಡಲಾಗುತ್ತದೆ. ಆದರೆ,ಪ್ರಕೃತಿ ಸೌಂದರ್ಯ ಸವಿಯುತ್ತಾ ನಿಂತಿರುವ ಫೋಟೋಗೆ ಮನಕಲಕುವ ಎನ್ನುವ ಶಬ್ದ ಬಳಕೆ ಮಾಡಿದ್ದು, ಅಭಿಮಾನಿಗಳ ಗಮನಕ್ಕೆ ಬಂದಿದೆ.

ಇದರಲ್ಲಿ ಮನಕಲುಕುವ ದೃಶ್ಯ ಏನಿದೆ ಸಾರ್… ಮನತಣಿಸುವ ದೃಶ್ಯ ಅಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಕೆಲವರು ಸಾರ್ ಅದು ಮನಕಲುಕುವ ದೃಶ್ಯ ಅಲ್ಲ ಮನಮೋಹಕ ದೃಶ್ಯ ಎಂದು ಕಿವಿಮಾತು ಹೇಳಿದ್ದಾರೆ. ಕೆಲವರು ಕನ್ನಡ ಸರಿಯಾಗಿ ಬರಲ್ವ ಸರ್ ಎಂದು ಪ್ರಶ್ನೆ ಮಾಡಿದ್ದಾರೆ.

ಪೋಸ್ಟ್​ ಮಾಡಿದ ಅರ್ಧ ಗಂಟೆ ನಂತರದಲ್ಲಿ ನಿಖಿಲ್​ಗೆ ತಪ್ಪಿನ ಅರಿವಾಗಿದೆ. ‘ರೈಡರ ಚಿತ್ರ ಚಿತ್ರಿಕರಣ ವೇಳೆ ಲೇ ಲಡಾಕನಲ ಕಂಡು ಬಂದಂತ ಅದ್ಭುತ ದೃಶ್ಯ’ ಎಂದು ಆದ ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಸರಿಪಡಿಸುವ ಪ್ರಯತ್ನದಲ್ಲಿಯೂ ಕಾಗುಣಿತದ ದೋಷಗಳು ಅವರ ಗಮನಕ್ಕೆ ಬಂದಿಲ್ಲವಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏರ್​ಪೋರ್ಟ್ ಚಾಲಕ ಆತ್ಮಹತ್ಯೆ; ಪ್ರತಾಪ್ ಕುಟುಂಬಕ್ಕೆ ಧೈರ್ಯ ತುಂಬಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ

Published On - 6:50 pm, Sun, 11 April 21

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ