ಮತ್ತೆ ಮತ್ತೆ ಆಲಿಯಾ ಭಟ್​ ಬೇಕು ಎಂದು ಬಯಸಿದ ರಾಮ್​ ಚರಣ್​; ಏನಿದು ವಿಷ್ಯ?

ದಕ್ಷಿಣ ಭಾರತದಲ್ಲಿ ಆಲಿಯಾ ಭಟ್​ಗೆ ‘ಆರ್​ಆರ್​ಆರ್’​ ಮೊದಲ ಸಿನಿಮಾ. ಆ ಮೂಲಕ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಅವರ ಬಗ್ಗೆ ರಾಮ್​ ಚರಣ್​ ವಿಶೇಷ ಒಲವು ತೋರಿಸುತ್ತಿದ್ದಾರೆ.

ಮತ್ತೆ ಮತ್ತೆ ಆಲಿಯಾ ಭಟ್​ ಬೇಕು ಎಂದು ಬಯಸಿದ ರಾಮ್​ ಚರಣ್​; ಏನಿದು ವಿಷ್ಯ?
ರಾಮ್​ ಚರಣ್​ - ಆಲಿಯಾ ಭಟ್​
Follow us
|

Updated on: May 23, 2021 | 4:29 PM

ಬಾಲಿವುಡ್​ನಲ್ಲಿ ದೊಡ್ಡ ಸ್ಟಾರ್​ಗಿರಿ ಪಡೆದಿರುವ ನಟಿ ಆಲಿಯಾ ಭಟ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವಾಗಲೇ ಈ 28ರ ಚೆಲುವೆ ಈಗ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಬಹುನಿರೀಕ್ಷಿತ ಆರ್​ಆರ್​ಆರ್​ ಸಿನಿಮಾಗೆ ಅವರು ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಅವರ ವೃತ್ತಿಜೀವನದಲ್ಲಿ ಈ ಸಿನಿಮಾ ದೊಡ್ಡ ಮೈಲಿಗಲ್ಲು ಆಗಲಿದೆ. ರಾಜಮೌಳಿ ನಿರ್ದೇಶನ ಎಂಬ ಕಾರಣಕ್ಕೆ ಅಷ್ಟು ಹೈಪ್ ಪಡೆದುಕೊಳ್ಳುತ್ತಿದೆ. ಆರ್​ಆರ್​ಆರ್​ ಸಿನಿಮಾದಲ್ಲಿ ರಾಮ್​ ಚರಣ್​ಗೆ ಜೋಡಿಯಾಗಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಸಿನಿಮಾದಲ್ಲಿ ರಾಮ್ ಚರಣ್​-ಆಲಿಯಾ ಭಟ್​ ಒಂದಾಗಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ದಕ್ಷಿಣ ಭಾರತದಲ್ಲಿ ಆಲಿಯಾಗೆ ಆರ್​ಆರ್​ಆರ್​ ಮೊದಲ ಸಿನಿಮಾ. ಆ ಮೂಲಕ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಅವರ ಬಗ್ಗೆ ರಾಮ್​ ಚರಣ್​ ವಿಶೇಷ ಒಲವು ತೋರಿಸುತ್ತಿದ್ದಾರೆ. ಆಲಿಯಾ ಭಟ್​ ನಟನೆಗೆ ಮನಸೋತಿರುವ ಅವರು ಮತ್ತೊಂದು ಚಿತ್ರಕ್ಕೂ ಈ ಸುಂದರಿಯ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಆರ್​ಆರ್​ಆರ್​ ಬಳಿಕ ಮತ್ತು ಆಲಿಯಾ ಜೊತೆ ಕೆಲಸ ಮಾಡಲು ರಾಮ್​ ಚರಣ್​ ಉತ್ಸಾಹ ತೋರಿಸುತ್ತಿದ್ದಾರಂತೆ.

ಕಾಲಿವುಡ್​ನ ಸ್ಟಾರ್​ ನಿರ್ದೇಶಕ ಶಂಕರ್​ ಜೊತೆಗೆ ರಾಮ್​ ಚರಣ್​ ಸಿನಿಮಾ ಮಾಡಲಿದ್ದಾರೆ. 5 ಭಾಷೆಯಲ್ಲಿ ಮೂಡಿಬರಲಿರುವ ಆ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ. ಆ ಸಿನಿಮಾದಲ್ಲಿ ಆಲಿಯಾ ಭಟ್​ ನಾಯಕಿಯಾದರೆ ಉತ್ತಮ ಎಂಬ ಅಭಿಪ್ರಾಯ ರಾಮ್​ ಚರಣ್​ ಅವರಿಂದ ವ್ಯಕ್ತವಾಗಿದೆ. ಹಾಗಾಗಿ ಅವರು ನಿರ್ದೇಶಕ ಶಂಕರ್​ಗೆ ಆಲಿಯಾ ಹೆಸರನ್ನು ಸೂಚಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಯಾವ ವಿಚಾರಗಳ ಬಗ್ಗೆಯೂ ಚಿತ್ರತಂಡದಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

ಕೊರೊನಾ ವೈರಸ್​ ಲಾಕ್​ಡೌನ್​ ಕಾರಣದಿಂದ ಆರ್​ಆರ್​ಆರ್​ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಈ ಸಿನಿಮಾದಲ್ಲಿ ನಟಿಸುತ್ತಿರುವ ನಟ ಜ್ಯೂ. ಎನ್​ಟಿಆರ್​ ಅವರಿಗೆ ಕೊವಿಡ್ ಪಾಸಿಟಿವ್​ ಆಗಿದೆ. ಕ್ವಾರಂಟೈನ್​ ಆಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಿನಿಮಾದ ಡಿಜಿಟಲ್​ ಪ್ರಸಾರ ಹಕ್ಕುಗಳನ್ನು ಜೀ5 ಬರೋಬ್ಬರಿ 325 ಕೋಟಿ ರೂ.ಗಳಿಗೆ ಖರೀದಿಸಿದೆ ಎಂಬ ಸುದ್ದಿ ಕೇಳಿಬಂದಿದೆ. ಆ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ.

ಇದನ್ನೂ ಓದಿ:

ಮತ್ತೆ ಶುರುವಾಯ್ತ ಫ್ಯಾನ್ಸ್​ ವಾರ್​; ರಾಮ್​ ಚರಣ್​-ಜ್ಯೂ. ಎನ್​ಟಿಆರ್​ ಅಭಿಮಾನಿಗಳ ಕಿತ್ತಾಟ

ರಣಬೀರ್​-ಆಲಿಯಾಗೆ ಕೂಡಿ ಬರುತ್ತಿಲ್ಲ ಕಂಕಣ ಭಾಗ್ಯ; ಚಿಂತೆಗೊಳಗಾದ ಕುಟುಂಬದವರು

ತಾಜಾ ಸುದ್ದಿ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ