AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ವರ್ಷ ಹಿರಿಯ ಮಹಿಳೆ ಜತೆಗಿನ ಪ್ರೀತಿ ಬಗ್ಗೆ ಬಾಯಿ ಬಿಟ್ಟ ಅರ್ಜುನ್​ ಕಪೂರ್​; ಬೇರೆ ಕಾರಣಕ್ಕೆ ತಂದೆ ಬೋನಿ ಕಪೂರ್​ ಕಣ್ಣೀರು

Arjun Kapoor | Malaika Arora: ಅರ್ಜುನ್​ ಕಪೂರ್​ ಮತ್ತು ಮಲೈಕಾ ಅರೋರಾ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಕಡಿಮೆ. ಈಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅರ್ಜುನ್​ ಕಪೂರ್​ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

12 ವರ್ಷ ಹಿರಿಯ ಮಹಿಳೆ ಜತೆಗಿನ ಪ್ರೀತಿ ಬಗ್ಗೆ ಬಾಯಿ ಬಿಟ್ಟ ಅರ್ಜುನ್​ ಕಪೂರ್​; ಬೇರೆ ಕಾರಣಕ್ಕೆ ತಂದೆ ಬೋನಿ ಕಪೂರ್​ ಕಣ್ಣೀರು
ಮಲೈಕಾ ಅರೋರಾ, ಅರ್ಜುನ್​ ಕಪೂರ್​, ಬೋನಿ ಕಪೂರ್​, ಶ್ರೀದೇವಿ
ಮದನ್​ ಕುಮಾರ್​
|

Updated on:May 23, 2021 | 12:53 PM

Share

ಪ್ರೀತಿ ಕುರುಡು ಅಂತಾರೆ. ಯಾವಾಗ, ಯಾರಿಗೆ ಯಾರ ಮೇಲೆ ಬೇಕಾದರೂ ಪ್ರೀತಿ ಆಗಬಹುದು. ಅದಕ್ಕೆ ಲೆಕ್ಕಾಚಾರವೇ ಇರುವುದಿಲ್ಲ. ಈ ಮಾತಿಗೆ ಪಕ್ಕಾ ಉದಾಹರಣೆ ಎಂದರೆ ಬಾಲಿವುಡ್​ ನಟ ಅರ್ಜುನ್​ ಕಪೂರ್​ ಮತ್ತು ನಟಿ ಮಲೈಕಾ ಅರೋರಾ. ಇಬ್ಬರ ನಡುವೆ ಅತಿ ಅಪರೂಪದ ಸಂಬಂಧ ಇದೆ. ಒಂದು ಕಾಲದಲ್ಲಿ ಟಾಪ್​ ಐಟಂ ಡ್ಯಾನ್ಸರ್​ ಆಗಿದ್ದ ಮಲೈಕಾ ಅರೋರಾ ಅವರಿಗೆ ಈಗ 47 ವರ್ಷ ವಯಸ್ಸು. ಅವರನ್ನು ಪ್ರೀತಿಸುತ್ತಿರುವ ನಟ ಅರ್ಜುನ್​ ಕಪೂರ್​ಗೆ 35ರ ಪ್ರಾಯ. ಈ ಬಗ್ಗೆ ಈಗ ಅರ್ಜುನ್​ ಕಪೂರ್​ ಮಾತನಾಡಿದ್ದಾರೆ.

ಅರ್ಜುನ್ ಕಪೂರ್​ ಮತ್ತು ಮಲೈಕಾ ಅರೋರಾ ತುಂಬಾ ಆತ್ಮೀಯವಾಗಿರುವ ಅನೇಕ ಫೋಟೋಗಳು ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಾಣಸಿಗುತ್ತವೆ. ಆದರೆ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಕಡಿಮೆ. ಈಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅರ್ಜುನ್​ ಕಪೂರ್​ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನನ್ನ ಖಾಸಗಿ ಜೀವನದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಯಾಕೆಂದರೆ ನಾವು ನಮ್ಮ ಸಂಗಾತಿಯನ್ನು ಗೌರವಿಸಬೇಕು’ ಎಂದು ಅರ್ಜುನ್​ ಕಪೂರ್​ ಹೇಳಿದ್ದಾರೆ.

ನಟ, ನಿರ್ಮಾಪಕ ಅರ್ಬಾಜ್​ ಖಾನ್​​ ಜೊತೆ ಮಲೈಕಾ ಮದುವೆ ಆಗಿದ್ದರು. ಡಿವೋರ್ಸ್​ ಪಡೆದು ದೂರಾಗಿರುವ ಅವರಿಗೆ ಅರ್ಹಾನ್​ ಖಾನ್​ ಎಂಬ ಮಗ ಇದ್ದಾನೆ. ಆತನ ಬಗ್ಗೆಯೂ ಅರ್ಜುನ್​ ಕಾಳಜಿ ಹೊಂದಿದ್ದಾರೆ. ಆತನ ಬಗ್ಗೆ ಅವರಿಗೆ ಅಷ್ಟು ಕರುಣೆ ಮೂಡಲು ಕಾರಣವೂ ಇದೆ. ಅರ್ಜುನ್​ ಕಪೂರ್​ ತಂದೆ ಬೋನಿ ಕಪೂರ್ ಅವರು ತಮ್ಮ ಹೆಂಡತಿಯನ್ನು (ಮೋನಾ ಶೌರಿ ಕಪೂರ್​) ಬಿಟ್ಟು ಶ್ರೀದೇವಿಯನ್ನು ಮದುವೆ ಆದಾಗ ಅರ್ಜುನ್​ ಕಪೂರ್​ ಕಣ್ಣೀರು ಹಾಕಿದ್ದರು. ಈಗ ಅದೇ ಪರಿಸ್ಥಿತಿ ಅರ್ಹಾನ್​ ಖಾನ್​ಗೆ ಆಗಬಾರದು ಎಂಬುದು ಅರ್ಜುನ್​ ಆಶಯವಂತೆ.

ಅದೇನೇ ಇರಲಿ, ಒಂದು ಕಡೆ ಅರ್ಜುನ್​ ಕಪೂರ್​ ತಮ್ಮ ರಿಲೇಷನ್​ಶಿಪ್​ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದು ಕಡೆ ಅವರ ತಂದೆ ಬೋನಿ ಕಪೂರ್​ ಬೇರೆ ವಿಚಾರಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ಅಜಯ್​ ದೇವಗನ್​ ನಟನೆಯು ‘ಮೈದಾನ್​’ ಚಿತ್ರಕ್ಕೆ ಬೋನಿ ನಿರ್ಮಾಪಕರು. ಆ ಚಿತ್ರಕ್ಕಾಗಿ ಅವರು ಕೋಟ್ಯಂತರ ರೂ. ವೆಚ್ಚದಲ್ಲಿ ಹಾಕಲಾಗಿದ್ದ ಸೆಟ್​ ತೌಕ್ತೆ ಚಂಡಮಾರುತದ ಕಾರಣದಿಂದ ಸರ್ವನಾಶ ಆಗಿದೆ. ಅದರಿಂದ ಬೋನಿ ಕಪೂರ್​ಗೆ ಸಿಕ್ಕಾಪಟ್ಟೆ ನಷ್ಟ ಆಗಿದೆ. ‘ಅದನ್ನು ನೆನಪಿಸಿಕೊಂಡರೆ ನನಗೆ ಅಳುಬರುತ್ತದೆ’ ಎಂದು ಅವರು ತಲೆ ಮೇಲೆ ಕೈಹೊತ್ತುಕೊಂಡು ಕುಳಿತಿದ್ದಾರೆ.

ಇದನ್ನೂ ಓದಿ:

ಶಿಲ್ಪಾ ಶೆಟ್ಟಿ, ಮಲೈಕಾ Hottest Moms ಅಂತೆ! ಹೋಲಿಕೆಯ ವಿರುದ್ಧ ಆಕ್ರೋಶ

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಜೊತೆ ಸುತ್ತಾಡುತ್ತಿರುವ ಹುಡುಗ ಯಾರು? ಫೋಟೋ ವೈರಲ್​

Published On - 12:44 pm, Sun, 23 May 21

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್