ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಜೊತೆ ಸುತ್ತಾಡುತ್ತಿರುವ ಹುಡುಗ ಯಾರು? ಫೋಟೋ ವೈರಲ್​

ಜಾನ್ವಿ ಕಪೂರ್​ ಆಗಾಗ ವಿದೇಶಕ್ಕೆ ಪಯಣ ಬೆಳೆಸುತ್ತ ಇರುತ್ತಾರೆ. ಇತ್ತೀಚೆಗೆ ಅವರು ಲಾಸ್​ ಏಂಜಲೀಸ್ ವಿಮಾನ ಹತ್ತಿದ್ದಾರೆ. ಅಲ್ಲಿಗೆ ಹೋಗಿ ಇಳಿಯುತ್ತಿದ್ದಂತೆಯೇ ಕೆಲವು ಫೋಟೋಗಳನ್ನು ಅವರು ಅಪ್​ಲೋಡ್​ ಮಾಡಿದ್ದಾರೆ. ಅದರಲ್ಲಿ ಇನ್ನೊಬ್ಬರು ಇದ್ದಾರೆ.

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಜೊತೆ ಸುತ್ತಾಡುತ್ತಿರುವ ಹುಡುಗ ಯಾರು? ಫೋಟೋ ವೈರಲ್​
ಜಾನ್ವಿ ಕಪೂರ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Mar 25, 2021 | 4:45 PM

ರಿಲೇಶನ್​ಶಿಪ್​ ವಿಚಾರದಲ್ಲಿ ಸೆಲೆಬ್ರಿಟಿಗಳು ಸುಮ್ಮನೆ ಕೂರುವವರೇ ಅಲ್ಲ. ಸಣ್ಣ ನೆಪ ಸಿಕ್ಕರೂ ಸಾಕು ಒಬ್ಬರ ಜೊತೆ ಅವರು ಕಮಿಟ್​ ಆಗಿಬಿಡುತ್ತಾರೆ. ಕೈಕೈ ಹಿಡಿದು ಊರೂರು ಸುತ್ತುತ್ತ, ಡೇಟಿಂಗ್​ ಶುರುಮಾಡುತ್ತಾರೆ. ಸದ್ಯ ಶ್ರೀದೇವಿಯ ಪುತ್ರಿ ಜಾನ್ವಿ ಕಪೂರ್​ ಕೂಡ ರಿಲೇಶನ್​ಶಿಪ್​ನಲ್ಲಿ ಇದ್ದಾರಾ? ನೆಟ್ಟಿಗರ ಮನದಲ್ಲಿ ಇಂಥ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ!

ಜಾನ್ವಿ ಕಪೂರ್​ ಆಗಾಗ ವಿದೇಶಕ್ಕೆ ಪಯಣ ಬೆಳೆಸುತ್ತ ಇರುತ್ತಾರೆ. ಇತ್ತೀಚೆಗೆ ಅವರು ಲಾಸ್​ ಏಂಜಲೀಸ್ ವಿಮಾನ ಹತ್ತಿದ್ದಾರೆ. ಅಲ್ಲಿಗೆ ಹೋಗಿ ಇಳಿಯುತ್ತಿದ್ದಂತೆಯೇ ಕೆಲವು ಫೋಟೋಗಳನ್ನು ಅವರು ಅಪ್​ಲೋಡ್​ ಮಾಡಿದ್ದಾರೆ. ಅದರಲ್ಲಿ ಅವರು ಒಬ್ಬರೇ ಇಲ್ಲ. ಜೊತೆಗಿರುವ ಗೆಳೆಯನ ಫೋಟೋವನ್ನೂ ಜಾನ್ವಿ ಹಂಚಿಕೊಂಡಿದ್ದಾರೆ. ಇದು ಈಗ ಚರ್ಚೆಯ ವಿಷಯ ಆಗಿದೆ.

‘ಲಾಸ್​ ಏಂಜಲೀಸ್​ಗೆ ಬಂದು ಒಂದು ನಿಮಿಷ ಆಯಿತು. ಇದು ಮನೆ ರೀತಿ ಫೀಲ್​ ಆಗುತ್ತಿದೆ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ. ಜಾನ್ವಿ ಜೊತೆ ಅವರ ತಂಗಿ ಖುಷಿ ಕಪೂರ್​ ಕೂಡ ಇದ್ದಾರೆ. ಅಷ್ಟೇ ಅಲ್ಲದೆ, ರೋಹನ್​ ಜೌರಾ ಎಂಬ ಗೆಳೆಯ ಜಾನ್ವಿಗೆ ಸಾಥ್​ ನೀಡಿರುವುದು ವಿಶೇಷ. ಈ ರೋಹನ್​ ಯಾರು ಎಂಬುದನ್ನು ತಿಳಿದುಕೊಳ್ಳಲು ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರಾ ಎಂಬ ಕೌತುಕ ಅಭಿಮಾನಿಗಳ ಮನದಲ್ಲಿ ಮೂಡಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್​​ಗೆ ಯಾಕೋ ಪದೇಪದೇ ಅದೃಷ್ಟ ಕೈ ಕೊಡುತ್ತಿದೆ. ನಟಿಸಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಮೊದಲ ಸಿನಿಮಾ ‘ಧಡಕ್​’ ಬಳಿಕ ಅವರಿಗೆ ಮತ್ತೆ ದೊಡ್ಡ​ ಗೆಲುವು ಸಿಗಲೇ ಇಲ್ಲ. ‘ಗುಂಜನ್​ ಸಕ್ಸೇನಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ ಸಿನಿಪ್ರಿಯರು ಅದಕ್ಕೆ ಮೆಚ್ಚುಗೆ ಸೂಚಿಸಿಲ್ಲ. ಇತ್ತೀಚೆಗೆ ತೆರೆಕಂಡ ರೂಹಿ ಸಿನಿಮಾ ಮೊದಲ ದಿನವೇ ಪೈರಸಿ ಹಾವಳಿಗೆ ತುತ್ತಾಗಿ ನೆಲಕಚ್ಚಿತು. ಆ ಯಾವ ಸೋಲುಗಳನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ಜಾನ್ವಿ, ಸದ್ಯಕ್ಕೆ ವಿದೇಶದಲ್ಲಿ ಮೋಜು ಮಾಡುತ್ತಿದ್ದಾರೆ.

ಇದನ್ನೂ ಓದಿ: 39 ಕೋಟಿಗೆ ಮುಂಬೈನ ಜುಹುವಿನಲ್ಲಿ 3 ಮಹಡಿಯ ಮನೆ ಖರೀದಿಸಿದ್ದಾರಂತೆ ಬಾಲಿವುಡ್ ನಟಿ ಜಾನ್ವಿ ಕಪೂರ್..!

ಶ್ರೀದೇವಿ ಇನ್ನೊಬ್ಬ ಪುತ್ರಿ ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧ; ನನ್ನ ಬ್ಯಾನರ್​ನಡಿ ಪರಿಚಯಿಸುವುದಿಲ್ಲ ಎಂದು ಬಿಗುಮಾನ ತೋರಿದ ಬೋನಿ

Published On - 4:42 pm, Thu, 25 March 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ