ಬೆಳಗ್ಗೆ ರಿಲೀಸ್​ ಆದ ಸಿನಿಮಾ ಸಂಜೆ ಲೀಕ್​! ಸ್ಟಾರ್​ ನಟನ ಚಿತ್ರಕ್ಕೆ ಪೈರಸಿ ಕಾಟ

ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಹಾಕಿ ಸಿದ್ಧಪಡಿಸಿದ ಸಿನಿಮಾ ಕ್ಷಣಮಾತ್ರದಲ್ಲಿ ಲೀಕ್​ ಮಾಡಿಬಿಡುತ್ತಾರೆ. ಈ ಮೂಲಕ ಸಾವಿರಾರು ಜನರ ಶ್ರಮವನ್ನು ವ್ಯರ್ಥಮಾಡಿ ಬಿಡುತ್ತಾರೆ ಕಳ್ಳರು.

ಬೆಳಗ್ಗೆ ರಿಲೀಸ್​ ಆದ ಸಿನಿಮಾ ಸಂಜೆ ಲೀಕ್​! ಸ್ಟಾರ್​ ನಟನ ಚಿತ್ರಕ್ಕೆ ಪೈರಸಿ ಕಾಟ
ಚಿತ್ರಮಂದಿರ
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on: Mar 11, 2021 | 8:13 PM

ಪೈರಸಿ ಅನ್ನೋದು ಚಿತ್ರರಂಗಕ್ಕೆ ಶಾಪವಾಗಿ ಮಾರ್ಪಟ್ಟಿದೆ. ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಹಾಕಿ ಸಿದ್ಧಪಡಿಸಿದ ಸಿನಿಮಾ ಕ್ಷಣಮಾತ್ರದಲ್ಲಿ ಲೀಕ್​ ಮಾಡಿಬಿಡುತ್ತಾರೆ. ಈ ಮೂಲಕ ಸಾವಿರಾರು ಜನರ ಶ್ರಮವನ್ನು ವ್ಯರ್ಥಮಾಡಿ ಬಿಡುತ್ತಾರೆ. ಈಗಲೂ ಹಾಗೆಯೇ ಆಗಿದೆ. ಇಂದು ರಿಲೀಸ್​ ಆದ ಸ್ಟಾರ್​ ನಟನ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ಬಾಲಿವುಡ್​ ನಟ ರಾಜ್​ಕುಮಾರ್​ ರಾವ್​ ಹಾಗೂ ಜಾಹ್ನವಿ ಕಪೂರ್​ ನಟನೆಯ ‘ರೂಹಿ’ ಚಿತ್ರ ರಿಲೀಸ್​ ಆದ ದಿನವೇ ಸೋರಿಕೆ ಆಗಿದೆ. Tamilrockers, Movierulz, Telegramಗಳಲ್ಲಿ ಈ ಸಿನಿಮಾದ ಪ್ರಿಂಟ್​ ಹರಿದಾಡಿದೆ. ಇದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾರರ್​ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಪೈರಸಿ ತೀವ್ರ ಹಿನ್ನಡೆ ಉಂಟು ಮಾಡಿದೆ. ಈ ಮೊದಲು ತೆರೆಕಂಡಿದ್ದ  ರಾಜ್​ಕುಮಾರ್​ ರಾವ್​ ನಟನೆಯ ಸ್ತ್ರೀ ಸಿನಿಮಾ ಹಾರರ್​ ಕಾಮಿಡಿ ಶೈಲಿಯಲ್ಲೇ ಮೂಡಿ ಬಂದಿತ್ತು. ಇದೇ ಮಾದರಿಯಲ್ಲಿ ರೂಹಿ ಸಿನಿಮಾ ಇದೆ ಎಂದು ಹೇಳಲಾಗುತ್ತಿದೆ.

ಶ್ರೀದೇವಿ ಮಗಳಾಗಿರುವ ಜಾಹ್ನವಿ ಚಿತ್ರದ ನಾಯಕಿ. ಅವರ ಸಿನಿಮಾಗೆ ಪದೇ ಪದೇ ಹಿನ್ನಡೆ ಉಂಟಾಗುತ್ತಲೇ ಇದೆ. ಈ ಮೊದಲು ಕಾರ್ಗಿಲ್​ ಸಿನಿಮಾಗೆ ಕಥೆ ತಿರುಚಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗಿತ್ತು. ಈಗ ಪೈರಸಿ ವಿಚಾರ ಜಾಹ್ನವಿ ಸಿನಿಮಾಗೆ ಏಟು ನೀಡಿದೆ.

Tamilrockers ಸೇರಿ ಸಾಕಷ್ಟು ಸೈಟ್​ಗಳು ಸಿನಿಮಾ ಪೈರಸಿಯಲ್ಲೇ ತೊಡಗಿಕೊಂಡಿವೆ. ಇವರು ಎಲ್ಲಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನುವ ವಿಚಾರ ಇಲ್ಲಿಯವರೆಗೆ ಬಯಲಾಗಿಲ್ಲ. ಅಷ್ಟೇ ಅಲ್ಲ, ಈ ಸೈಟ್​ಗಳ ವಿರುದ್ಧ ಅದೆಷ್ಟೋ ಕೇಸ್​ಗಳು ಕೂಡ ದಾಖಲಾಗಿವೆ ಎನ್ನುವ ಮಾಹಿತಿಯೂ ಸಿಕ್ಕಿದೆ.

ಇದನ್ನೂ ಓದಿ:

2.74 ಲಕ್ಷ ಬೆಲೆಯ ಉಡುಪು ಧರಿಸಿದ ನಟಿ ಜಾಹ್ನವಿ ಕಪೂರ್

Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ