Roberrt 1st Day Collection: ‘ರಾಬರ್ಟ್​’ ಚಿತ್ರಕ್ಕೆ ಮೊದಲ ದಿನವೇ ಯಾವ ಯಾವ ಜಿಲ್ಲೆಗಳಿಂದ ಎಷ್ಟು ಕಲೆಕ್ಷನ್​? ಇಲ್ಲಿದೆ ರಿಪೋರ್ಟ್​

ಇಡೀ ಕರ್ನಾಟಕದಲ್ಲಿ ರಾಬರ್ಟ್​ ಬಿಡುಗಡೆಗೂ ಮುನ್ನವೇ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಅಷ್ಟೇ ಅಲ್ಲ, ಮೊದಲ ದಿನದ ಟಿಕೆಟ್​ಗಳನ್ನು ಎಲ್ಲರೂ ಮುಗಿಬಿದ್ದು ಖರೀದಿ ಮಾಡಿದ್ದರು.

Roberrt 1st Day Collection: ‘ರಾಬರ್ಟ್​’ ಚಿತ್ರಕ್ಕೆ ಮೊದಲ ದಿನವೇ ಯಾವ ಯಾವ ಜಿಲ್ಲೆಗಳಿಂದ ಎಷ್ಟು ಕಲೆಕ್ಷನ್​? ಇಲ್ಲಿದೆ ರಿಪೋರ್ಟ್​
ದರ್ಶನ್​ ರಾಬರ್ಟ್​
Follow us
ಮದನ್​ ಕುಮಾರ್​
|

Updated on:Mar 12, 2021 | 11:47 AM

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಾ.11ರಂದು ಅದ್ದೂರಿಯಾಗಿ ಬಿಡುಗಡೆಯಾದ ‘ರಾಬರ್ಟ್​’ ಚಿತ್ರ ಮೊದಲ ದಿನವೇ 17 ಕೋಟಿ ರೂ. ಬಾಚಿಕೊಂಡಿದೆ. ಈ ಸಿನಿಮಾವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಬಹುತೇಕ ಶೋಗಳ ಹೌಸ್​ ಫುಲ್​ ಆಗುತ್ತಿವೆ. ಪರಿಣಾಮವಾಗಿ, ಬಾಕ್ಸ್​ ಆಫೀಸ್​ನಲ್ಲಿ ದರ್ಶನ್​ ಧೂಳೆಬ್ಬಿಸುತ್ತಿದ್ದಾರೆ.

ಇಡೀ ಕರ್ನಾಟಕದಲ್ಲಿ ರಾಬರ್ಟ್​ ಬಿಡುಗಡೆಗೂ ಮುನ್ನವೇ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಪ್ರತಿ ಜಿಲ್ಲೆಯಲ್ಲಿಯೂ ಡಿ ಬಾಸ್​ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಟೌಟ್​ ನಿಲ್ಲಿಸಿ ಸಂಭ್ರಮಿಸಲು ಆರಂಭಿಸಿದ್ದರು. ಅಷ್ಟೇ ಅಲ್ಲ, ಮೊದಲ ದಿನದ ಟಿಕೆಟ್​ಗಳನ್ನು ಎಲ್ಲರೂ ಮುಗಿಬಿದ್ದು ಖರೀದಿ ಮಾಡಿದ್ದರು. ಹಾಗಾಗಿ ರಾಜ್ಯಾದ್ಯಂತ ಕೋಟ್ಯಂತರ ರೂ. ಗಳಿಕೆ ಆಗಿದೆ.

ಬೆಂಗಳೂರು, ಕೋಲಾರ, ತುಮಕೂರು ಮತ್ತು ದಕ್ಷಿಣ ಕನ್ನಡ ಸೇರಿ 7 ಕೋಟಿ ರೂ. ಕಲೆಕ್ಷನ್​ ಆಗಿದೆ. ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಿಂದ 2 ಕೋಟಿ ರೂ. ಗಳಿಕೆ ಆಗಿದೆ. ಚಿತ್ರದುರ್ಗ ಮತ್ತು ದಾವಣಗೆರೆಯಿಂದ 2.24 ಕೋಟಿ ರೂ. ಬಾಚಿಕೊಳ್ಳಲಾಗಿದೆ. ಹೈದರಾಬಾದ್​ ಕರ್ನಾಟಕ ಹಾಗೂ ಹಾಗೂ ಬಾಂಬೆ ಕರ್ನಾಟಕ ಭಾಗಗಳಿಂದ ಕ್ರಮವಾಗಿ 3 ಕೋಟಿ ಮತ್ತು 2 ಕೋಟಿ ರೂ. ಕಲೆಕ್ಷನ್​ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.

ಗುರುವಾರ ಶಿವರಾತ್ರಿ ಹಬ್ಬದ ಪ್ರಯುಕ್ತ ತೆರೆಕಂಡಿದ್ದರಿಂದ ‘ರಾಬರ್ಟ್​’ಗೆ ರಜಾ ದಿನದ ಅನುಕೂಲ ಆಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಇನ್ನು ವೀಕೆಂಡ್​ನಲ್ಲಿಯೂ ಭರ್ಜರಿ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಮಾಸ್​ ಅಭಿಮಾನಿಗಳಿಗೆ ಮಾತ್ರವಲ್ಲದೆ, ಫ್ಯಾಮಿಲಿ ಪ್ರೇಕ್ಷಕರನ್ನೂ ಈ ಸಿನಿಮಾ ಸೆಳೆದುಕೊಳ್ಳುತ್ತಿದೆ. ಇದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಎರಡನೇ ದಿನವಾದ ಶುಕ್ರವಾರ (ಮಾ.12) ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ತರುಣ್​ ಸುಧೀರ್​ ನಿರ್ದೇಶನದ ಈ ಚಿತ್ರದ ಮೂಲಕ ನಟಿ ಆಶಾ ಭಟ್​ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಮೊದಲ ಸಿನಿಮಾದಲ್ಲಿಯೇ ಅವರಿಗೆ ಭರ್ಜರಿ ಗೆಲುವು ಸಿಕ್ಕಂತಾಗಿದೆ. ‘ಚೌಕ’ ಚಿತ್ರದ ನಂತರ ತರುಣ್​ ಸುಧೀರ್​ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಮೊಗದಲ್ಲಿ ಗೆಲುವಿನ ನಗು ಮೂಡಿದೆ.

ಇದನ್ನೂ ಓದಿ: Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

Roberrt Twitter Review: ರಾಬರ್ಟ್​ ಸಿನಿಮಾಗೆ ಥಂಮ್ಸ್​ ಅಪ್​ ತೋರಿದ ಟ್ವಿಟ್ಟರ್​ ಮಂದಿ

Published On - 11:34 am, Fri, 12 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ